ಸೋಲಾಪುರ: ಮಹಾರಾಷ್ಟ್ರದಲ್ಲಿ ನಡೆದ ಸಮಾರಂಭದಲ್ಲಿ ಐಟಿ ವೃತ್ತಿಯಲ್ಲಿರುವ ಅವಳಿ ಸಹೋದರಿಯರು ಒಬ್ಬನನ್ನೇ ವಿವಾಹವಾಗಿದ್ದು, ಸುದ್ದಿ ಭಾರಿ ಪ್ರಚಾರ ಪಡೆದಿದ್ದು ಸಮಾರಂಭದ ವಿಡಿಯೋಗಳು ವೈರಲ್ ಆಗುತ್ತಿವೆ.
ಶುಕ್ರವಾರ ಮಲ್ಶಿರಸ್ ತಹಸಿಲ್‌ನಲ್ಲಿ ನಡೆದ ಮದುವೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ದೂರಿನ ಆಧಾರದ ಮೇಲೆ, ಅಕ್ಲುಜ್ ಪೊಲೀಸ್ ಠಾಣೆಯಲ್ಲಿ ವರನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 494 (ಗಂಡ ಅಥವಾ ಹೆಂಡತಿಯ ಜೀವಿತಾವಧಿಯಲ್ಲಿ ಮತ್ತೆ ಮದುವೆಯಾಗುವುದು) ಅಡಿಯಲ್ಲಿ ನಾನ್-ಕಾಗ್ನೈಸಬಲ್ (ಎನ್‌ಸಿ) ಅಪರಾಧವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅತುಲ್ ಸೋಲಾಪುರ ಜಿಲ್ಲೆಯ ಮಲ್ಶಿರಾಸ್ ತಾಲೂಕಿನವರಾಗಿದ್ದು, ಮುಂಬೈನಲ್ಲಿ ಟ್ರಾವೆಲ್ ವ್ಯವಹಾರ ನಡೆಸುತ್ತಿದ್ದಾರೆ. ಆದರೆ ಐಟಿ ವೃತ್ತಿಪರರಾಗಿರುವ 36 ವರ್ಷದ ಅವಳಿ ಸಹೋದರಿಯಾರಾದ ಪಿಂಕಿ ಮತ್ತು ರಿಂಕಿ ಕಾಂದಿವಲಿಯಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಆರು ತಿಂಗಳ ಹಿಂದೆ, ಪಿಂಕಿ, ರಿಂಕಿ ಮತ್ತು ಅವರ ತಾಯಿ ಅನಾರೋಗ್ಯಕ್ಕೆ ಒಳಗಾದ ನಂತರ, ಅತುಲ್ ಆಸ್ಪತ್ರೆಯಲ್ಲಿ ನೋಡಿಕೊಂಡರು. ಇದರಿಂದ ಅವರಿಬ್ಬರ ಪ್ರೇಮ ಹೊಂದಾಣಿಕೆಯಾಗಿದ್ದು, ಸಂಬಂಧಿಕರ ಒಪ್ಪಿಗೆ ಮೇರೆಗೆ ಅಕ್ಲುಜ್‌ನಲ್ಲಿ ಮದುವೆ ನಡೆದಿದೆ.
ಈ ಮದುವೆಗೆ ಸಹೋದರಿ ಮತ್ತು ವರನ ಮನೆಯವರು ಒಪ್ಪಿಗೆ ಸೂಚಿಸಿದ್ದರು. ಕೆಲವು ದಿನಗಳ ಹಿಂದೆ ತಂದೆ ತೀರಿಕೊಂಡ ನಂತರ ಸಹೋದರಿಯರು ತಾಯಿಯೊಂದಿಗೆ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಮಲೆವಾಡಿಯ ರಾಹುಲ್ ಫುಲೆ ಎನ್ನುವವರು ಪೊಲೀಸರಿಗೆ ದೂರು ನೀಡಿದ್ದಾರೆ. ಆ ನಂತರ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಹೀಗಾಗಿ ವರನ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.