Advertisement

ಕಾಬೂಲ್‌ನಲ್ಲಿ ಉಗ್ರರ ಅಟ್ಟಹಾಸ ;ಅವಳಿ ಸ್ಫೋಟಕ್ಕೆ 22 ಮಂದಿ ಬಲಿ 

10:03 AM Sep 06, 2018 | Team Udayavani |

ಕಾಬೂಲ್‌ : ಅಫ್ಘಾನಿಸ್ಥಾನದ ರಾಜಧಾನಿಯಲ್ಲಿ  ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದು , ಬುಧವಾರ ರಾತ್ರಿ  ನಡೆದ ಅವಳಿ ಆತ್ಮಾಹುತಿ ದಾಳಿಗೆ 22 ಮಂದಿ ಬಲಿಯಾಗಿದ್ದು, 70ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisement

ಕುಸ್ತಿ ಕ್ಲಬ್‌ನ ಬಳಿ ಮೊದಲ ಸ್ಫೋಟ ನಡೆದಿದ್ದು ,ಕೆಲ ಹೊತ್ತಿನಲ್ಲೇ ಇನ್ನೊಂದು ಸ್ಫೋಟ ನಡೆದಿದೆ. ದುರಂತವೆಂದರೆ ಮೊದಲ ಸ್ಫೋಟ ನಡೆದ ಬಳಿಕ ರಕ್ಷಣಾ ಪಡೆಗಳು ಮತ್ತು ಪತ್ರಕರ್ತರು ಸ್ಥಳವನ್ನು ಸುತ್ತುವರಿದಿದ್ದ ವೇಳೆ 2 ನೇ ಸ್ಫೋಟ ನಡೆದಿದ್ದು ಸಾವು ನೋವು ಹೆಚ್ಚಿದೆ. 

ಟೋಲ್‌ ನ್ಯೂಸ್‌ನ ಇಬ್ಬರು ಪತ್ರಕರ್ತರು ದಾಳಿಯಲ್ಲಿ ಸಾವನ್ನಿಪ್ಪಿದ್ದಾರೆ ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next