ಕಳೆದ ವಾರ ತಮ್ಮನ್ನು ಟ್ರೋಲ್ ಮಾಡಿ ಹಾಕಲಾದ ಪೋಸ್ಟ್‌ಗಳನ್ನು ನೀವು ಒಪ್ಪುತ್ತೀರಾ ಎಂದು ಪ್ರಶ್ನಿಸಲಾಗಿತ್ತು. ಅದಕ್ಕೆ ಬಹುತೇಕ ಮಂದಿಯಿಂದ “ಒಪ್ಪುವುದಿಲ್ಲ’ ಎಂಬ ಉತ್ತರ ಬಂದಿದೆ. ಈ ಬೆಳವಣಿಗೆಗಳ ನಡುವೆಯೇ, ರಾಷ್ಟ್ರಪತಿ ಕೋವಿಂದ್ ಅವರು ವಿದೇಶಾಂಗ ಸಚಿವೆಯಾಗಿ ಸುಷ್ಮಾ ಮಾಡುತ್ತಿರುವ ಕೆಲಸವನ್ನು ಶ್ಲಾಘಿ ಸಿದ್ದಾರೆ. ವಿದೇಶದಲ್ಲಿರುವ ಭಾರತೀಯರಿಗೆ ಅವರು ಹೊಸ ಭರವಸೆ ಮೂಡಿಸಿದ್ದಾರೆ ಎಂದೂ ಹೊಗಳಿದ್ದಾರೆ.
ಸಹಿಸಲಾಗದ ನೋವು ಕೊಟ್ಟಿತು: ಸುಷ್ಮಾರ ಪತಿ ಸ್ವರಾಜ್ ಕೌಶಲ್‌ರನ್ನೂ ಟ್ರೋಲ್‌ಗಳು ಬಿಟ್ಟಿಲ್ಲ. ಮುಕೇಶ್ ಗುಪ್ತಾ ಎಂಬ ಹೆಸರಿನ ವ್ಯಕ್ತಿಯೊಬ್ಬರು, “ಇವತ್ತು ರಾತ್ರಿ ನಿಮ್ಮ ಪತ್ನಿ ಮನೆಗೆ ಬಂದಾಗ, ನೀವೇಕೆ ಒಂದೆರಡು ಏಟು ಕೊಟ್ಟು, ಮುಸ್ಲಿಮರ ಓಲೈಕೆ ಮಾಡದಂತೆ ಅವರಿಗೆ ಬುದ್ಧಿ ಹೇಳಬಾರದು?’ ಎಂದು ಟ್ವೀಟ್ ಮಾಡಿ, ಕೌಶಲ್‌ಗೆ ಟ್ಯಾಗ್ ಮಾಡಿದ್ದರು. ಇದನ್ನು ರಿಟ್ವೀಟ್ ಮಾಡಿರುವ ಕೌಶಲ್, “ನೀವು ಬಳಸಿರುವ ಪದಗಳಿಂದ ಸಹಿಸಲಾಗದ ನೋವಾಗಿದೆ. ನಿಮ್ಮ ಅವಗಾಹನೆಗೆ ತರಲು ಇಚ್ಛಿಸುವುದೇನೆಂದರೆ, 1993ರಲ್ಲಿ ನನ್ನ ಅಮ್ಮ ಕ್ಯಾನ್ಸರ್‌ನಿಂದ ಇಹಲೋಕ ತ್ಯಜಿಸಿದರು. ಆಗ ಸುಷ್ಮಾ ಸಂಸದೆ ಹಾಗೂ ಮಾಜಿ ಶಿಕ್ಷಣ ಸಚಿವೆ. ಹಾಗಿದ್ದರೂ ಒಂದು ವರ್ಷ ಕಾಲ ನನ್ನ ಅಮ್ಮನ ಜತೆ ಆಸ್ಪತ್ರೆಯಲ್ಲಿದ್ದು ಅವರ ಸೇವೆ ಮಾಡಿ ದರು. ನಾವೆಲ್ಲರೂ ಸುಷ್ಮಾರನ್ನು ಗೌರವಿಸುತ್ತೇನೆ. ದಯವಿಟ್ಟು ಅವರ ವಿರುದ್ಧ ಇಂಥ ಪದ ಬಳಕೆ ಮಾಡಬೇಡಿ,’ ಎಂದು ಬರೆದಿದ್ದಾರೆ.
Advertisement