ಹೊಸೂರು: ಪ್ರತಿಷ್ಠಿತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕ ಟಿವಿಎಸ್ ಮೋಟಾರ್ ಕಂಪನಿ, ಇತ್ತೀಚೆಗೆ ಸ್ಮಾರ್ಟ್‌ಕನೆಕ್ಟ್ ತಂತ್ರ ಜ್ಞಾನದಲ್ಲಿ ಟಿವಿಎಸ್ ಅಪಾಚೆ 200-4ವಿ ಎಂಬ ಹೊಸ ಬೈಕ್ ಬಿಡುಗಡೆ ಮಾಡಿದೆ. ಬ್ಲೂಟೂಥ್ ಎನೆಬಲ್ಡ್ ಮೊಬೈಲ್ ಅಪ್ಲಿಕೇಷನ್ ತಂತ್ರಜ್ಞಾನವುಳ್ಳ ಈ ನೂತನ ಅಪಾಚೆ ಬೈಕ್‌ನಲ್ಲಿ ಕ್ಲಸ್ಟರ್ ಮತ್ತು ಗೋಲ್ಡ್ ಫಿನಿಷ್ ರೇಸಿಂಗ್ ಸರಪಳಿ ಅಳವಡಿಸಲ್ಪಟ್ಟಿದೆ.
ಗ್ರಾಹಕರು ಗೂಗಲ್ ಪ್ಲೇ ಸ್ಟೋರ್ ಅಥವಾ ಐಒಎಸ್ ಆ್ಯಪ್ ಸ್ಟೋರ್‌ನಲ್ಲಿ ಟಿವಿಎಸ್ ಕನೆಕ್ಟ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಇದರ ವಿಶಿಷ್ಟ ಗುಣಗಳಾದ ನ್ಯಾವಿಗೇಷನ್, ರೇಸ್ ಟೆಲಿಮೆಟ್ರಿ, ಟೂರ್ ಮೋಡ್, ಲೀನ್ ಆ್ಯಂಗಲ್ ಮೋಡ್, ಕ್ರಾಷ್ ಅಲರ್ಟ್ ಮತ್ತು ಕರೆ, ಎಸ್‌ಎಂಎಸ್ ಸೂಚನೆ ವ್ಯವಸ್ಥೆ ಬಳಸಿಕೊಳ್ಳುವ ಅವಕಾಶ ಕಲ್ಪಿಸಿದೆ.
ಇದರ ಮಾಹಿತಿ ನಿಯಂತ್ರಣ ಸ್ವಿಚ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕರೆ ಮತ್ತು ಎಸ್‌ಎಂಎಸ್ ಸೂಚನೆ, ಬೈಕ್ ಸವಾರರ ನೇರ ಕೋನವನ್ನು ರೆಕಾರ್ಡ್ ಮಾಡಲು ಲೀನ್ ಆ್ಯಂಗಲ್ ಮೋಡ್‌ನಲ್ಲಿ ಗೈರೊಸ್ಕೋಪಿಕ್ ಸಂವೇದಕವನ್ನು ಸ್ಮಾರ್ಟ್ ಕನೆಕ್ಟ್ ತಂತ್ರಜ್ಞಾನ ಬಳಸುತ್ತದೆ. ಇದು ಕ್ಲಸ್ಟರ್‌ನಲ್ಲಿ ಪ್ರದರ್ಶಿಸುತ್ತದೆ.
ರೇಸ್ ಟೆಲಿಮೆಟ್ರಿ ಪ್ರತಿ ರೇಸ್ ಅಥವಾ ಸವಾರಿಯ ಕೊನೆಯಲ್ಲಿ ಅಗತ್ಯ ಡೇಟಾವನ್ನು ದಾಖಲಿಸುತ್ತದೆ ಹಾಗೂ ಸಾರಾಂಶ ನೀಡುತ್ತದೆ. ಕ್ರಾಷ್ ಅಲರ್ಟ್ ಸಿಸ್ಟಂ ಒಂದು ಪ್ರಮುಖ ಸುರಕ್ಷತಾ ವೈಶಿಷ್ಟವಾಗಿದ್ದು, ವಾಹನ ಕುಸಿತವನ್ನು ಗ್ರಹಿಸಿದಾಗ ಅದು ಪ್ರಚೋದಿಸಿ, ಸಿಸ್ಟಂ ಕ್ರಾಷ್ ಅಲರ್ಟ್ ಮೋಡ್‌ಗೆ ಪ್ರವೇಶಿಸುತ್ತದೆ. 180 ಸೆಕೆಂಡುಗಳಲ್ಲಿ ಸವಾರನ ತುರ್ತು ಸಂಪರ್ಕಗಳನ್ನು ಪತನದ ಸ್ಥಳದೊಂದಿಗೆ ತಿಳಿಸುವ ಕಾರ್ಯ ಮಾಡುತ್ತದೆ.
197.75 ಸಿಸಿ ಸಿಂಗಲ್ ಸಿಲಿಂಡರ್ ಮೋಟಾರ್ ಹಾಗೂ ಡ್ನೂಯಲ್ ಚಾನೆಲ್ ಎಬಿಎಸ್ ಕಾಬ್ಯುರೇಟರ್‌ವುಳ್ಳ ಈ ವಿಶಿಷ್ಟ ಬೈಕ್, 5 ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 8500ಆರ್‌ಪಿಎಂ ಹೊಂದಿದೆ. ಇದರ ದೆಹಲಿ ಎಕ್ಸ್‌ಶೋರೂಂ ದರ 1,14,345 ರೂ.ಆಗಿದ್ದು ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಲಭ್ಯ.