Advertisement

ಹಂತ ಹಂತವಾಗಿ ಕೋವಿಡ್‌ ವ್ಯಾಕ್ಸಿನ್‌ ಎಲ್ಲರಿಗೂ ಲಭ್ಯ

08:17 PM Dec 07, 2020 | Suhan S |

ಕೋಲಾರ: ಡಿಸೆಂಬರ್‌ ತಿಂಗಳ ಕೊನೆಯ ವಾರದಲ್ಲಿ ಕೋವಿಡ್‌ ವ್ಯಾಕ್ಸಿನ್‌ ಲಭ್ಯ ವಾಗಲಿದ್ದು, ಹಂತ ಹಂತವಾಗಿ ಜನರಿಗೆ ಕೋವಿಡ್‌ ವ್ಯಾಕ್ಸಿನ್‌ ದೊರಕಲಿದೆ ಎಂದು ತಾಲೂಕು ಆರೋಗ್ಯಾಕಾರಿ ಡಾ.ಎ.ವಿ.ನಾರಾಯಣಸ್ವಾಮಿ ತಿಳಿಸಿದರು.

Advertisement

ತಾಲೂಕು ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ತಾಲೂಕುಮಟ್ಟದಲ್ಲಿ ಲಸಿಕಾ ಟಾಸ್ಕ್ ಫೋರ್ಸ್‌ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಕೋವಿಡ್‌ ವ್ಯಾಕ್ಸಿನ್‌ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಾದ ಡಾಕ್ಟರ್‌, ನರ್ಸ್ ಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ನರ್ಸಿಂಗ್‌ ಹೋಮ್ಸ್‌, ಪ್ಯಾರಾಮೆಡಿಕಲ್‌ ವಿದ್ಯಾರ್ಥಿಗಳಿಗೆ ನೀಡಲಾಗುವುದು. ನಂತರಪೌರಕಾರ್ಮಿಕರಿಗೆ ಡಯಾಬಿಟೀಸ್‌, ಸಕ್ಕರೆ ಕಾಯಿಲೆ, ಬಿಪಿ ಇತ್ಯಾದಿ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ನೀಡಿ, ಕೊನೆಯದಾಗಿ ಸಾರ್ವಜನಿಕರಿಗೆ ದೊರಕಲಿದೆ ಎಂದು ತಿಳಿಸಿದರು.

ವ್ಯಾಕ್ಸಿನ್‌, ಪಾಸಿಟಿವ್‌ ಬಂದಿರುವ ವ್ಯಕ್ತಿಗಳಿಗೆ ನೀಡಲಾಗುವುದಿಲ್ಲ. ಆರೋಗ್ಯವಂತ ವ್ಯಕ್ತಿಗೆ ಬರದೇ ಇರಲಿ ಎಂಬ ಕಾರಣಕ್ಕೆ ನೀಡಲಾಗುವುದು. ವ್ಯಾಕ್ಸಿನ್‌ ಕೋಲ್ಡ್‌ ಸ್ಟೋರೇಜ್‌ನಲ್ಲಿ ಶೇಖರಣೆ ಮಾಡುವ ಸಲುವಾಗಿ ವಿದ್ಯುತ್‌ ವ್ಯತ್ಯಯವಾಗದಂತೆನೋಡಿಕೊಳ್ಳಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ತಾಲೂಕು ಮಟ್ಟದ ಲಸಿಕಾ ಟಾಸ್ಕ್ ಫೋರ್ಸ್‌ ಸಮಿತಿ ಅಧ್ಯಕ್ಷರು ಹಾಗೂ ಕೋಲಾರ ತಾಲೂಕು ತಹಶೀಲ್ದಾರ್‌ರಾದ ಶೋಭಿತಾ, ಬಿಇಒ ನಾಗರಾಜ್‌ ಗೌಡ ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಮನೆ ಮನೆಗೆ ಭೇಟಿ ನೀಡಿ ಲಸಿಕೆ : ರಾಷ್ಟ್ರೀಯ ಪಲ್ಸ್‌ ಪೊಲಿಯೋ ದಿನವು ಜನವರಿ 17 ರಂದು ನಡೆಯಲಿದೆ. ಈ ಬಾರಿ ಒಂದೇ ಹಂತದಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಪೊಲಿಯೋಲಸಿಕೆ ನೀಡಲಾಗುವುದು. ಜ.17 ರಿಂದಪ್ರಾರಂಭವಾಗಿ ಜ.20ಕ್ಕೆ ಮುಗಿಯಲಿದೆ. 17 ರಂದು ಬೂತ್‌ ಮಟ್ಟದಲ್ಲಿ ಪೊಲಿಯೋ ಲಸಿಕೆ ನೀಡಲಾಗುವುದು. ನಂತರ ಗ್ರಾಮೀಣ 2 ದಿನಗಳಕಾಲಹಾಗೂ ನಗರ ಪ್ರದೇಶಗಳಲ್ಲಿ 3 ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಿ ಪೊಲಿಯೋ ಲಸಿಕೆಯನ್ನು ನೀಡಲಾಗುವುದು ಎಂದು ತಾಲೂಕು ಆರೋಗ್ಯಾಕಾರಿ ಡಾ.ಎ.ವಿ.ನಾರಾಯಣಸ್ವಾಮಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next