Advertisement

ಮುಂಬಯಿ ಟೋವಿಂಗ್‌ ಪ್ರಕರಣಕ್ಕೆ ತಿರುವು

06:35 AM Nov 13, 2017 | Team Udayavani |

ಮುಂಬಯಿ: ಮಗುವಿಗೆ ಹಾಲುಣಿಸುತ್ತಿದ್ದ ಮಹಿಳೆಯು ಕುಳಿತಿದ್ದ ಕಾರನ್ನು ಮುಂಬಯಿ ಸಂಚಾರಿ ಪೊಲೀಸರು ಎಳೆದೊಯ್ದಿದ್ದ ಸುದ್ದಿಗೆ ಹೊಸ ತಿರುವು ಸಿಕ್ಕಿದೆ. ಜಾಲತಾಣಗಳಲ್ಲಿನ ವಿಡಿಯೋಗಳಲ್ಲಿ ಕಾರನ್ನು ಟೋವಿಂಗ್‌ ಮಾಡಿಕೊಂಡು ಕೊಂಡೊಯ್ಯುತ್ತಿದ್ದು ಅದರಲ್ಲಿ ಮಗುವಿಗೆ ಹಾಲುಣಿಸುತ್ತಿದ್ದ ಮಹಿಳೆ ಸಹಾಯಕ್ಕಾಗಿ ನೆರವು ಕೋರುತ್ತಿದ್ದರು. ಇದರಿಂದಾಗಿ ಇಬ್ಬರು ಅಧಿಕಾರಿಗಳ ಅಮಾನತೂ ಆಗಿತ್ತು. ರವಿವಾರ ಬೆಳಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ವಿಡಿಯೋದಲ್ಲಿ ಟೋವಿಂಗ್‌ಗೂ ಮೊದಲು ಜ್ಯೋತಿಯವರಿಗೆ ಪೊಲೀಸರು ಕಾರಿನಿಂದ ಕೆಳಗಿಳಿಯಲು ವಿನಂತಿಸಿಕೊಂಡರೂ ಆಕೆ ಕೆಳಗಿಳಿಯದೇ ಇದ್ದಿದ್ದು ಹಾಗೂ ಆ ವೇಳೆ ಮಗು ಆಕೆಯ ಜತೆ ಇಲ್ಲದಿರುವುದು ತಿಳಿದುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next