Advertisement
ಹಳೆಯದಾಗಿರುವ ಮೋರಿಯ ಎರಡೂ ಬದಿಗಳಲ್ಲಿ ಕಲ್ಲುಗಳು ಮುರಿದು ಬಿದ್ದಿವೆ. ಲೋಕೋಪಯೋಗಿ ಇಲಾಖೆಯು ಮೋರಿಯ ಒಂದು ಬದಿಗೆ ನೀರು ಹರಿಯಲು ಪೈಪ್ ಹಾಕಿ ಕಾಂಕ್ರೀಟ್ ಹಾಗೂ ಮಣ್ಣು ಹಾಕಿ ಅರ್ಧದಷ್ಟು ತುಂಬಿಸಲಾಗಿದೆ. ಆದರೆ ಇಲ್ಲಿ ಇನ್ನೊಂದು ಬದಿಯೂ ಕೂಡ ಮುರಿದಿದೆ.
Related Articles
ಈ ರಸ್ತೆಗೆ ಪರ್ಯಾಯ ರಸ್ತೆಯೂ ಇದೆ. ಕಾಮಗಾರಿ ವೇಳೆ ಇದನ್ನು ಬಳಸಬಹುದು. ಬಡಗ ಎಕ್ಕಾರು ಮುಚ್ಚಾರು ರಸ್ತೆಯನ್ನು ಬಳಸಿ ಅರಸು ಪದವು ಆಗಿ, ಮಾಲೇವು ಚೆನ್ನಯ್ಯ ಪೂಜಾರಿ ರಸ್ತೆಯಾಗಿ ಹುಣ್ಸೆಕಟ್ಟೆಗೆ ಬರಬಹುದಾಗಿದೆ. ಈ ರಸ್ತೆ ಸುಮಾರು 2 ಕಿ.ಮೀ. ಹೆಚ್ಚು ದೂರವಾಗುತ್ತದೆ.
Advertisement
ಇದರಿಂದ ರಾಜ್ಯ ಹೆದ್ದಾರಿಯನ್ನು 4-5 ಗಂಟೆಗಳ ಕಾಲ ಮುಚ್ಚಿ ಈ ಕಾಮಗಾರಿಯನ್ನು ಪೂರ್ತಿಗೊಳಿಸಲು ಸಾಧ್ಯವಿದೆ. ಈ ಅವಧಿಯಲ್ಲಿ ಪರ್ಯಾಯ ರಸ್ತೆ ಬಳಸಲು ಸೂಚಿಸಬಹುದು.
ಕಾಮಗಾರಿ ನಡೆಸಲು ಬಂದವರು ವಾಪಸ್ಗ್ರಾಮ ಪಂಚಾಯತ್ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರು. ಅದರಂತೆ ಮೋರಿಗೆ ಪೈಪ್ ಹಾಕಲು ಗುತ್ತಿಗೆದಾರರು ಜೆಸಿಬಿಯೊಂದಿಗೆ ಬಂದಿದ್ದರು. ಆದರೆ ಬಜಪೆ ಪೊಲೀಸ್ ಈ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಲು ಅನುಮತಿ ನೀಡದ ಕಾರಣ ಅವರು ಹಿಂತಿರುಗಬೇಕಾಯಿತು. ಮೋರಿ ಕುಸಿತ ಸಂಚಾರಕ್ಕೆ ಅಪಾಯ
ಇಲ್ಲಿನ ಸಮಸ್ಯೆಯ ಬಗ್ಗೆ ಶಾಸಕ ಮತ್ತು ಸಂಬಂಧ ಪಟ್ಟ ಇಲಾಖೆಯ ಗಮನಕ್ಕೆ ತರಲಾಗುವುದು. ಮೋರಿ ಕುಸಿತದಿಂದ ವಾಹನ ಸಂಚಾರಕ್ಕೆ ಅಪಾಯವಿದೆ. ಪರ್ಯಾಯ ರಸ್ತೆ ಇರುವ ಕಾರಣ ವಾಹನ ಸಂಚಾರಕ್ಕೆ ಹೆಚ್ಚು ತೊಂದರೆಯಾಗದಂತೆ ಇಲ್ಲಿ ಕಾಮಗಾರಿ ನಡೆಸಬಹುದು. ಕಲ್ಲುಗಳು ಕುಸಿದಲ್ಲಿ ವಾಹನ ಸಂಚಾರವೇ ಅಸಾಧ್ಯವಾಗಬಹುದು.
– ಸುರೇಶ್ ಶೆಟ್ಟಿ,
ಎಕ್ಕಾರು ಗ್ರಾ.ಪಂ. ಅಧ್ಯಕ್ಷರು ಸುಬ್ರಾಯ ನಾಯಕ್ ಎಕ್ಕಾರು