ಹೆಣ್ಣಿನ ಮಾತಿನಲ್ಲೂ ಒಂದು ಪವರ್ ಇದೆ. ಆ ಶಕ್ತಿಯೇ ಅನೇಕರ ಬದುಕಿಗೆ ಟರ್ನಿಂಗ್ ಪಾಯಿಂಟ್ ನೀಡಿರುತ್ತದೆ. ಬದುಕಿನ ಪಥ ಬದಲಿಸಿದ ಅಂಥ ನಮ್ಮ ಅಕ್ಕಪಕ್ಕದ ಸಾಧಕಿಯರ ಮೆಲುಕುಗಳ ಗೊಂಚಲೊಂದು ನಿಮ್ಮ ಮುಂದೆ…
1. ಕಚೇರಿ ಬಾಗಿಲಲ್ಲಿ, ರಾಜೀನಾಮೆ ಪತ್ರ ಹಿಡಿದು ನಿಂತಿದ್ದೆ
ಹುಟ್ಟೂರಲ್ಲಿ, ಸ್ಥಳೀಯ ಪತ್ರಿಕೆಯೊಂದರಲ್ಲಿ 4 ವರ್ಷಗಳ ಕಾಲ ದುಡಿದೆ. ಸಂಬಳ ತುಂಬಾ ಕಡಿಮೆಯಿತ್ತು. ಬೆಂಗಳೂರಿಗೆ ಬಂದು ಹೆಚ್ಚಿನ ಸಂಬಳದ ಕೆಲಸ ಹುಡುಕುವುದು ಲೇಸೆನ್ನಿಸಿತು. ಬೆಂಗಳೂರಿನ ಬಸ್ಸು ಹತ್ತಲು ಎÇÉಾ ಸಿದ್ಧತೆಗಳನ್ನು ಮಾಡಿಕೊಂಡಿ¨ªೆ. ಅಂತಿಮವಾಗಿ ಕಚೇರಿ ಬಾಗಿಲಲ್ಲಿ ನಿಂತು, ರಾಜೀನಾಮೆ ಪತ್ರವನ್ನು ಕೈಯಲ್ಲಿ ಹಿಡಿದು ಪತ್ನಿಗೆ ಫೋನು ಹಚ್ಚಿದೆ.
ಅವಳು “ಇವತ್ತೂಂದು ದಿನ ಸುಮ್ಮನಿರಿ, ನಾಳೆ ಕೊಟ್ಟರಾಯಿತು’ ಎಂದಳು. ಇಷ್ಟು ದಿನ ನನ್ನೊಂದಿಗೆ ಸೇರಿ ಬೆಂಗಳೂರಿನ ಕನಸು ಕಾಣುತ್ತಿದ್ದವಳು ಈಗೇಕೆ ಹೀಗಂದಳು ಎಂದು ಯೋಚಿಸುತ್ತಾ ಮನೆಗೆ ಬಂದೆ. ಅವಳು ನಮ್ಮ ತಿಂಗಳ ಖರ್ಚು ವೆಚ್ಚಗಳ ಪಟ್ಟಿ ತಯಾರಿಸಿ ಕಾಯುತ್ತಿದ್ದಳು. ನನ್ನ ಆಗಿನ ಕಡಿಮೆ ಸಂಬಳಕ್ಕೆ ಹೊಂದುವ ಬಜೆಟನ್ನು ಅವಳು ತಯಾರಿಸಿದ್ದಳು. ಹೆಚ್ಚಿನ ಸಂಬಳ ಸಿಕ್ಕರೂ ಬೆಂಗಳೂರಿನ ವಾಸಕ್ಕೆ ಅದು ಕಡಿಮೆಯೇ, ಆಗಲೂ ನಮ್ಮ ಬವಣೆ ತಪ್ಪಿದ್ದಲ್ಲ. ಅದರ ಬದಲು ಇಲ್ಲಿದ್ದುಕೊಂಡೇ ವೆಚ್ಚ ಸರಿದೂಗಿಸಿದರಾಯಿತು ಎನ್ನುವುದು ಅವಳ ಸಲಹೆ. ನಾನು “ಹೂಂ’ ಅಂದೆ.
ಇದಾದ ಕೆಲವೇ ತಿಂಗಳಲ್ಲಿ ನನಗೆ ಪತ್ರಿಕೋದ್ಯಮ ಪ್ರಶಸ್ತಿಯೊಂದು ಹುಡುಕಿಕೊಂಡು ಬಂತು. ಕೆಲ ವರ್ಷದಲ್ಲಿಯೇ ಸಂಬಳ ಆಗಿನದಕ್ಕಿಂತ ನಾಲ್ಕು ಪಟ್ಟು ಹೆಚ್ಚಿತು. ಅವಳ ಮಾತಿಗೆ ಪೂರಕವಾಗಿ, ಸುಮಾರು 5.50 ಲಕ್ಷ ಪ್ರಸಾರವನ್ನು ಹೊಂದಿರುವ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಪ್ರಕಟವಾಗುತ್ತಿರುವ “ನಿರಂತರ ಪ್ರಗತಿ’ ಮಾಸಪತ್ರಿಕೆಯ ಸಂಪಾದಕತ್ವ ನನ್ನ ಹೆಗಲೇರಿತು. ನನ್ನ ಬದುಕನ್ನು ಪೂರ್ಣಗೊಳಿಸುತ್ತಿರುವ ಪ್ರೇಮಾಳಿಗೆ ನನ್ನ ಪ್ರೀತಿ ಮತ್ತು ಅಭಿನಂದನೆಗಳು.
– ಚಂದ್ರಹಾಸ ಚಾರ್ಮಾಡಿ
– – – –
2. ಸೀರೆ ನೇಯ್ದಿದ್ದು ಸಾಕು, ಕ್ಲಾಸ್‌ಗೆ ಹೋಗು…
ನಮುª ನೇಕಾರಿಕೆ ಕುಟುಂಬ. ಮನೇಲಿ ತುಂಬಾ ಬಡತನ. ನಾನು, ಅಣ್ಣ ಇಬ್ರೂ ಶಾಲೆಗೆ ಹೋಗ್ತಿದ್ವಿ. ಆದ್ರೆ ನಮ್ಮಲ್ಲೊಬ್ಬರು ದುಡಿಯುವ ಅಗತ್ಯ ತುಂಬಾ ಇತ್ತು. ಹೀಗಾಗಿ ನಮ್ಮ ಅಪ್ಪಾವ್ರು ಅಣ್ಣನನ್ನ ಓದಲು ಬಿಟ್ಟು ನನ್ನನ್ನ ಶಾಲೆ ಬಿಡಿÕದ್ರು. 7ನೇ ತರಗತಿ ಓದಿ¤ಧ್ದೋನು, ಮುಂದೆ ಓದುವ ಆಸೆ ಇದ್ರೂ ಸೀರೆ ನೇಯುವ ಕೆಲಸ ಮಾಡಬೇಕಾಯ್ತು. ನನ್ನ ಓದು ಅಲ್ಲಿಗೇ ಮುಕ್ತಾಯವಾಯ್ತು ಅಂದುಕೊಂಡೆ. ಓದೋ ಆಸೆಯನ್ನೇ ಬಿಟ್ಟು ಬಿಟ್ಟಿದ್ದೆ. 7 ವರ್ಷಗಳ ಕಾಲ ದುಡಿದೆ. ಅಷ್ಟರಲ್ಲಾಗಲೇ ಅಣ್ಣ ಎಸ್ಸೆಸ್ಸೆಲ್ಸಿ ಮುಗಿಸಿ ಕಾಲೇಜು ದಾಟಿಕೊಂಡಿದ್ದ. ಅಷ್ಟು ದೀರ್ಘ ಸಮಯ ನನ್ನಲ್ಲಿ ಓದೋ ಆಸೆಯನ್ನು ಜೀವಂತವಾಗಿರಿಸಿದ್ದು ನನ್ನವ್ವ.
“ನೀನು ತುಂಬಾ ಶಾಣ್ಯಾ ಇದ್ದೀ, ಯಾವಾಗ ಪುಸ್ತಕ ಹಿಡಿದರೂ ಪಾಸಾಗ್ತಿ’ ಅನ್ನುತ್ತಿದ್ದಳಾಕೆ. ಅವ್ವನ ಮಾತಿನಂತೆ 7 ವರ್ಷದ ನಂತರ ನೇರವಾಗಿ ಬಾಹ್ಯ ವಿದ್ಯಾರ್ಥಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಕಟ್ಟಿದೆ. ಫಲಿತಾಂಶ ಬಂತು. ನಾನು ಪಾಸಾದ ಸಂಗತಿ ತಿಳಿದು ನನಗಿಂತಲೂ ಖುಷಿ ಪಟ್ಟವಳು ನನ್ನವ್ವ. “ನಾನು ಹೇಳಿದ್ದೆ ನೀ ಪಾಸಾಗ್ತಿಯಂತ’ ಎಂದು ಕುಣಿದಾಡಿಬಿಟ್ಟಳು. ಈಗ ನಾನು ಶಿಕ್ಷಕನಾಗಿ ನಾಲ್ಕಾರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದೇನೆಂದರೆ, ಅದಕ್ಕೆ ನನ್ನವ್ವನೇ ಕಾರಣ.
– ಅಶೋಕ ಬಳ್ಳಾ, ಹೊನ್ನರಹಳ್ಳಿ, ಹುನಗುಂದ
3. ಪೊರ್ಕಿಯನ್ನ ಬದಲಾಯಿಸಿದಾಕೆ…
ಶಾಲೆ ಕಾಲೇಜು ದಿನಗಳಲ್ಲಿ ನಾನು ಲಾಸ್ಟ್ ಬೆಂಚಿನಲ್ಲಿ ಕೂರುತ್ತಿದ್ದುದು ಮಾತ್ರವಲ್ಲ, ಓದಿನಲ್ಲೂ ಹಿಂದಿದ್ದವನು. ಅಟೆಂಡೆನ್ಸ್ ಶಾಟೇìಜ್, ಮಾಸ್ ಬಂಕ್, ಇಂಟರ್ನಲ್ಸ್ ಅಂಕಗಳ ಕೊರತೆ, ಜಗಳ- ಹೊಡೆದಾಟಗಳು ಇವೆಲ್ಲದರಿಂದಾಗಿ ಕ್ಯಾಂಪಸ್‌ನಲ್ಲೇ ಪ್ರಖ್ಯಾತನಾಗಿದ್ದೆ. ಡಿಗ್ರಿಯ ಮೊದಲೆರಡು ವರ್ಷ ಕಾಲೇಜಿಗೆ ಹೋಗಿದ್ದೇ ಅಪರೂಪ. ಆ ದಿನಗಳಲ್ಲಿ ನಾನು ಅದೆಷ್ಟು ಹುಂಬನಾಗಿದ್ದೆ ಎಂದರೆ ಹುಡುಗನೊಬ್ಬನನ್ನು ಏರೋಪ್ಲೇನ್ ಹತ್ತಿಸುವ ಸಲುವಾಗಿಯೇ ಅವನು ಹೋಗುತ್ತಿದ್ದ ಕಂಪ್ಯೂಟರ್ ಕ್ಲಾಸ್ ಸೇರಿದ್ದೆ. ಆ ಹುಡುಗ ನನ್ನ ಗೆಳೆಯನ ತಂಗಿಯನ್ನು ಚುಡಾಯಿಸುತ್ತಿದ್ದನಂತೆ. ಅದೊಂದು ದಿನ ಅವನೊಂದಿಗೆ ಹೊಡೆದಾಟಕ್ಕೆ ಸಿದ್ಧನಾಗಿಯೇ ಮನೆಯಿಂದ ಹೊರಬಿದ್ದಿದ್ದೆ. ದಾರಿಯಲ್ಲಿ ಗೆಳೆಯನ ತಂಗಿ ಗೀತಾ ಕೂಡಾ ಸಿಕ್ಕಳು. ಅವಳು ತನ್ನ ಗೆಳತಿ ವಿಜಯಲಕ್ಷಿ$¾ಯನ್ನು ಜೊತೆಯಲ್ಲಿ ಕರೆತಂದಿದ್ದಳು. ಇನ್ನೇನು ಕೈ ಕೈ ಮಿಲಾಯಿಸಲು ಮುನ್ನುಗ್ಗಬೇಕು ಎನ್ನುವಷ್ಟರಲ್ಲಿ ವಿಜಯಲಕ್ಷಿ$¾ ನನ್ನನ್ನು ತಡೆದಳು. ನನ್ನದೇ ಕಾಲೇಜಿನಲ್ಲಿ ಓದುತ್ತಿದ್ದ ಅವಳಿಗೆ ನನ್ನ ಬಗ್ಗೆ ತುಂಬಾ ಗೊತ್ತಿತ್ತು.
ಮೇಲ್ನೋಟಕ್ಕೆ ಪೊರ್ಕಿಯಂತೆ ವರ್ತಿಸುತ್ತಿದ್ದರೂ, ನಿಜಕ್ಕೂ ನಾನು ಅಂಥವನಲ್ಲ ಅನ್ನೋದು ಅವಳಿಗೆ ಅರ್ಥವಾಗಿತ್ತು. “ನಿನ್ನ ಹತ್ರ ಟ್ಯಾಲೆಂಟ್ ಇದೆ, ಪ್ರೀತಿ- ಹೊಡೆದಾಟ ಎಲ್ಲಾ ಬಿಟ್ಟು ಓದಿನ ಕಡೆ ಗಮನ ಕೊಡು’ ಅಂತ ಹೇಳಿ ಕೈಗೆ ನೋಟ್‌ಬುಕ್ಕುಗಳನ್ನು ಕೊಟ್ಟು ಅಕ್ಕರೆ ತೋರಿದಳು. ಯಾಕೋ ಏನೋ ಗುರು- ಹಿರಿಯರ ಮಾತಿಗೇ ಬಗ್ಗದವನು ಅವಳ ಮಾತಿಗೆ ಬಗ್ಗಿದೆ. ಹೊಡೆದಾಟ ಮಾಡಲಿಲ್ಲ. ಆವತ್ತಿನಿಂದ ನನ್ನ ಸೋದರಿಯ ಸ್ಥಾನವನ್ನು ತುಂಬಿದಳು ವಿಜಿ. ಅವಳಿದಾಗಿ ಎಲ್ಲರಿಗೂ ಆಶ್ಚರ್ಯವಾಗುವಷ್ಟರ ಮಟ್ಟಿಗೆ ನಾನು ಬದಲಾದೆ.
– ಬಸವರಾಜ ಕರುಗಲ್
4. 65 ವರ್ಷಗಳ ಹಿಂದೆ ಹೂವಕ್ಕ ಹೇಳಿದ್ದು!
ನನಗೀಗ 72 ವರ್ಷ. ನಾನೀಗ ಹೇಳುತ್ತಿರುವುದು ಸುಮಾರು 65 ವರ್ಷಗಳ ಹಿಂದಿನ ಕತೆ. ಶಿರಸಿ ಹತ್ತಿರದ ಹಳ್ಳಿ ನಮ್ಮೂರು. ಅಮ್ಮ ನನ್ನನ್ನು ಅಲ್ಲೊಬ್ಬರ ಮನೆಗೆ ಹಾಲು ತರಲು ಕಳಿಸುತ್ತಿದ್ದಳು. ದಿನಾ ಬೆಳಗ್ಗೆ ಅವರ ಮನೆಗೆ ಹೋಗಿ ಹಾಲು ತೆಗೆದುಕೊಂಡು ಬರುತ್ತಿದ್ದೆ. ಆ ಮನೆಯಲ್ಲಿ ಹೂವಕ್ಕ ಅಂತ ಒಬ್ಬಳಿದ್ದಳು. ನನ್ನನ್ನು ಕಂಡರೆ ಆ ಜೀವಕ್ಕೆ ಎಲ್ಲಿಲ್ಲದ ಪ್ರೀತಿ. ಕಂಡ ತಕ್ಷಣ ಹೂವು, ಹಣ್ಣು ಏನಾದರೂ ಸರಿಯೆ, ಕೊಟ್ಟು ಮುದ್ದು ಮಾಡುತ್ತಿದ್ದಳು. ಒಂದು ದಿನ ಆ ಮನೆಗೆ ಹೋಗುವಾಗ ಗೆಳೆಯನೊಬ್ಬ ಜೊತೆಗಿದ್ದ. ಹೂವಕ್ಕನ ಮನೆಯಲ್ಲಿ ಹೂವಿನ ಗಿಡ ಮತ್ತು ಪೇರಲೆ ಹಣ್ಣಿನ ಮರಗಳಿದ್ದವು. ಗೆಳೆಯ ಅದರಿಂದ ಹಣ್ಣುಗಳನ್ನು ಕೊಯ್ದು ಜೇಬಲ್ಲಿಟ್ಟುಕೊಂಡ. ಅಷ್ಟು ಸಾಲದು ಅಂತ ನನ್ನನ್ನೂ ತೆಗೆದುಕೊಳ್ಳುವಂತೆ ಪುಸಲಾಯಿಸಿದ. ನಾನೂ ಜೇಬು ತುಂಬಿಸಿಕೊಂಡೆ.
ಮನೆಯಲ್ಲಿ ಅಮ್ಮ ಕೇಳಿದಾಗ ಹೂವಕ್ಕನೇ ಕೊಟ್ಟಿದ್ದೆಂದು ಸುಳ್ಳು ಹೇಳಿದೆ. ಎರಡು ಮೂರು ದಿನ ಇದು ಮುಂದುವರಿಯಿತು. ಒಂದು ದಿನ ಹೂವಕ್ಕ ನೋಡಿಬಿಟ್ಟಳು. ಕೈಯಲ್ಲಿ ಅಡಗಿಸಿರುವುದು ಏನು ಎಂದು ಕೇಳಿದಳು. ನನಗೆ ಅವಳಿಂದ ಮುಚ್ಚಿಡಲಾಗಲಿಲ್ಲ. ಎಲ್ಲವನ್ನೂ ಹೇಳಿಬಿಟ್ಟೆ. ಒಬ್ಬರ ವಸ್ತುವನ್ನು ಕೇಳದೆ ಯಾವತ್ತೂ ತೆಗೆದುಕೊಳ್ಳಬಾರದು. ಇವಾಗೇನೋ ಚಿಕ್ಕೋನು, ಕೇಳದೆ ತೆಗೆದುಕೊಂಡ ಅನ್ನಬಹುದು. ಆದರೆ ನಾಳೆ ದೊಡ್ಡೋನಾದ ಮೇಲೂ ಇದನ್ನು ಮುಂದುವರಿಸಿದರೆ ಅದು ಕಳ್ಳತನವಾಗುತ್ತೆ ಅಂದಳು. 65 ವರ್ಷಗಳ ಹಿಂದೆ ಹೂವಕ್ಕ ಹೇಳಿದ್ದನ್ನು ಜೀವನವಿಡೀ ನೆನಪು ಮಾಡಿಕೊಂಡಿದ್ದಷ್ಟೇ ಅಲ್ಲ, ಪಾಲಿಸುತ್ತಲೇ ಬಂದೆ. ನಿಮಗೆ ಅವಳನ್ನು ತೋರಿಸೋಣವೆಂದರೆ, ಆಕೆಯ ಫೋಟೋ ನನ್ನ ಬಳಿಯಿಲ್ಲ.
– ಡಿ.ವಿ. ಹೆಗಡೆ
5. ಅಮ್ಮನ ವಿರುದ್ಧ ಉಪವಾಸ ಸತ್ಯಾಗ್ರಹ!
6ನೇ ವಯಸ್ಸಿನಲ್ಲಿ ಯಾವುದೋ ಕಾರಣಕ್ಕೆ ಅಮ್ಮನೊಂದಿಗೆ ಮುನಿಸಿಕೊಂಡು ಊಟ ಮಾಡುವುದೇ ಇಲ್ಲವೆಂದು ಶಪಥಗೈದಿದ್ದೆ. ಸ್ವತಃ ಅಮ್ಮನೇ ಬಂದು “ತಪ್ಪಾಯ್ತು ಚಿನ್ನ. ಬಾ ಊಟ ಮಾಡು’ ಎಂದು ರಮಿಸುವ ತನಕ ಉಪವಾಸವನ್ನು ಕೈಬಿಡುವುದಿಲ್ಲ ಎಂದು ಹಟ ಹಿಡಿದೆ. ಬೆಳಗ್ಗೆ ಹೊಟ್ಟೆಗೆ ಹಾಕ್ಕೊಂಡಿದ್ದ ದೋಸೆ- ಚಟ್ನಿ ಖಾಲಿಯಾಗಿ ಗಂಟೆಗಳೇ ಕಳೆದಿದ್ದವು. ಮಧ್ಯಾಹ್ನ ಕಳೆಯಿತು. ಹೊಟ್ಟೆ ಚುರುಗುಟ್ಟತೊಡಗಿತು. ಅಮ್ಮ ನನ್ನ ಮುಂದೆಯೇ ಟೊಮೇಟೊ ಸಾರು- ಅನ್ನ ಕಲಸಿಕೊಂಡು ಊಟ ಮುಗಿಸಿದಳು. ನನಗೆ ಚಟೀರನೆ ಹೊಡೆದ ಅನುಭವ. ಅಮ್ಮ ಹೀಗೆ ಮಾಡಬಹುದಾ ಅಂತ ಸಂಕಟವಾಯ್ತು. ಏನೇ ಆದರೂ ಊಟ ಮಾಡೋ ಹಾಗಿಲ್ಲ. ನಾನು ಸೋಲಬಾರದು, ಅಮ್ಮನೇ ಬಂದು ತುತ್ತು ಬಾಯಿಗಿಟ್ಟಾಗಲೇ ನನಗೆ ಗೆಲುವು, ಸಮಾಧಾನ!
ಹೊಟ್ಟೆ ಹಿಡಿದು ನೋವಿನ ನಾಟಕವಾಡಿದೆ. ಊಹೂಂ, ಅಮ್ಮ ನನ್ನತ್ತ ಕಣ್ಣೆತ್ತಿಯೂ ನೋಡಲಿಲ್ಲ. ದಿನಪತ್ರಿಕೆ ತಿರುಗಿಸುತ್ತಾ ಕುಳಿತುಬಿಟ್ಟಳು. ನನಗೆ ಸಿಡಿಲಿನ ಆಘಾತ, ನನ್ನ ಅಹಂಗೆ ಪೆಟ್ಟು! ಅಷ್ಟೊತ್ತಿಗಾಗಲೇ ನಿಜಕ್ಕೂ ಹಸಿವು ಹೊಟ್ಟೆಯಲ್ಲಿ ಉರಿ ಹತ್ತಿಸಿತ್ತು. ಕಣ್ಣಲ್ಲಿ ದಳ ದಳನೆ ನೀರು. ಈಗ ಅಮ್ಮ ಎದ್ದು ಬಂದು ನನ್ನನ್ನು ಕುರ್ಚಿ ಮೇಲೆ ಕೂರಿಸಿ ಬಾಯಿಗೆ ತುತ್ತಿಟ್ಟಳು. ಇನ್ಯಾವತ್ತೂ ಹೀಗೆ ಹಟ ಹಿಡಿದು ಕೂರಬೇಡ, ಈಗ ಅಡುಗೆಯಾದರೂ ಮಾಡಿದ್ದೀನಿ, ಆಮೇಲೆ ಅದನ್ನೂ ಮಾಡೋದಿಲ್ಲ ಎಂದು ಗಾಬರಿ ದಿಗಿಲು ಹುಟ್ಟಿಸಿದಳು. ಆವತ್ತಿಗೆ ಅಮ್ಮ ಹಾಗೆ ನಡೆದುಕೊಳ್ಳದೆ ಇರುತ್ತಿದ್ದರೆ ಬಹುಶಃ ನನಗೆ ಹಟಮಾರಿತನ ಅಭ್ಯಾಸವಾಗಿರುತ್ತಿತ್ತು. ಆವತ್ತಿನಿಂದ ಏನೇ ಕೋಪ ತಾಪ ಅಸಹನೆ ಬಂದರೂ ತಿನ್ನೋ ಅನ್ನದ ಮೇಲೆ ಸಿಟ್ಟು ಮಾಡಿಕೊಂಡಿಲ್ಲ. ಊಟದಲ್ಲಿ ಉಪ್ಪು ಹುಳಿ ಖಾರ ಏನು ಹೆಚ್ಚು ಕಡಿಮೆಯಾದರೂ ಅದೊಂದು ಸಮಸ್ಯೆಯೆನ್ನಿಸದು. ಹೀಗೆ ಒಂದೇ ಘಟನೆಯಿಂದ ಅಮ್ಮ ನನಗೆ ಹತ್ತು ಹಲವು ಗುಣಗಳನ್ನು ಕಲಿಸಿಕೊಟ್ಟಳು.
– ಗುರುರಾಜ ಕೊಡ್ಕಣಿ
6. ಪ್ರಿನ್ಸಿಪಾಲರಿಗೇ ಕ್ಲಾಸ್ ತೆಗೆದುಕೊಂಡ ಅಮ್ಮ!
ನಮಗೆ ಕೋರ್ಸುಗಳ ಕುರಿತು ಹೇಳಿಕೊಡುವವರ್ಯಾರೂ ಇರಲಿಲ್ಲ. ಹೀಗಾಗಿ ಪಿಯುಸಿ ಆದ ನಂತರ ಏನು ಮಾಡಬೇಕೆಂದು ಗೊತ್ತಾಗದೆ, ಗುಂಪಿನಲ್ಲಿ ಗೋವಿಂದ ಎನ್ನುವಂತೆ ಓರಗೆಯವರ ಜೊತೆ ನಾನೂ ಬಿಬಿಎಂ ಸೇರಿಕೊಂಡೆ. ವಾಣಿಜ್ಯ ವಿಷಯದÇÉೇ ಪಿಯುಸಿ ಮಾಡಿದ್ದರೂ ಬಿಬಿಎಂ ಸೇರಿದ ಕೆಲವೇ ದಿನಗಳಲ್ಲಿ ಅಕೌಂಟು, ಡೆಬಿಟ್- ಕ್ರೆಡಿಟ್‌ಗಳಲ್ಲಿ ಆಸಕ್ತಿಯೇ ಹೋಯಿತು. ನಾನು ಸುಮ್ಮನೆ ಬಿಬಿಎಂ ಸೇರಿ ಜೀವನ ಹಾಳು ಮಾಡಿಕೊಂಡೆ ಅನ್ನಿಸತೊಡಗಿತು. ಅದೇ ಸಂದರ್ಭದಲ್ಲಿ ಸಾಹಿತ್ಯ, ಫೋಟೋಗ್ರಫಿ ಆಸಕ್ತಿ ಜಾಸ್ತಿಯಾಗತೊಡಗಿತು. ನನ್ನ ಸಾಹಿತ್ಯಾಸಕ್ತಿಯ ಬಗ್ಗೆ ತಿಳಿದಿದ್ದ ಸಂಬಂಧಿಕರೊಬ್ಬರು “ನೀನು ಚಂದ ಬರೆಯುತ್ತೀಯ. ಪತ್ರಿಕೋದ್ಯಮ, ಇಂಗ್ಲಿಷ್ ಸಾಹಿತ್ಯ ಓದಬಹುದಿತ್ತಲ್ಲ ಸುಮ್ಮನೆ ಬಿಬಿಎಂ ಯಾಕೆ?’ ಅಂತ ಹೇಳಿದಾಗಲೇ ಗೊತ್ತಾಗಿದ್ದು, ಸಾಹಿತ್ಯ ಓದೋವಂಥ ಕೋರ್ಸ್ ಒಂದಿದೆ ಅಂತ. ಅಷ್ಟೊತ್ತಿಗೆ ವಾಣಿಜ್ಯ ವಿಷಯದ ಕುರಿತು ಆಸಕ್ತಿಯೂ ಹೊರಟು ಹೋಗಿತ್ತು. ಪ್ರಾಂಶುಪಾಲರಿಗೆ ಪತ್ರ ಬರೆದು ಬಿಎ ಪತ್ರಿಕೋದ್ಯಮ ಮಾಡಲು ಅವಕಾಶ ಮಾಡಿಕೊಡುವಂತೆ ಬಿನ್ನವಿಸಿಕೊಂಡೆ. ಪ್ರಾಂಶುಪಾಲರು ಅಮ್ಮನನ್ನು ಕರೆಸಿ, “ಏನು ನಿಮ್ಮ ಮಗನ ಕತೆ? ಬಿಎ ಮಾಡ್ತಾನಂತೆ. ಒಂದು ವರ್ಷ ವೇÓr… ಆಯ್ತಲ್ಲ’ ಅಂದರು. ಅದಕ್ಕೆ ಅಮ್ಮ ಕೊಟ್ಟ ಉತ್ತರ ನನ್ನ ಬದುಕನ್ನೇ ಬದಲಿಸಿತು. “ಅವನು ಇಷ್ಟವಿಲ್ಲದೇ ಹೋದರೂ ಬಿಬಿಎಂನಲ್ಲೇ ಮುಂದುವರಿದರೆ ಅವನ ಮುಂದಿನ ಬದುಕೇ ವೇÓr… ಆಗಲ್ವಾ ಸರ್? ಅದಕ್ಕಿಂತ ಬಿ.ಎ. ಸೇರಲಿ. ಮೂರು ವರ್ಷ ಅವನ ಇಷ್ಟದ ವಿಷಯವನ್ನೇ ಕಲಿತುಕೊಂಡು ಆರಾಮಾಗಿರ್ತಾನೆ’ ಎಂದ ಅಮ್ಮನ ಮಾತಿಗೆ ಪ್ರಾಂಶುಪಾಲರು ದಂಗಾಗಿ ಹೋಗಿದ್ದರು. ಅಮ್ಮನ ಆ ಮಾತೇ ನನ್ನ ಬದುಕಿಗೆ ಟರ್ನಿಂಗ್ ಪಾಯಿಂಟ್. ಈಗ ನಾನು ಬಿಎ ತರಗತಿಯಲ್ಲಿ ಉಪನ್ಯಾಸಕನಾಗಿರುವುದಕ್ಕೆ ಅಮ್ಮನೇ ಕಾರಣ.
– ಪ್ರಸಾದ್ ಶೆಣೈ, ಕಾರ್ಕಳ