ಜಮಖಂಡಿಯ ರಬಕವಿ ಬನಹಟ್ಟಿ ಸಮೀಪದ ಗೋಲಬಾವಿ ಗ್ರಾಮದ ಪ್ರಗತಿಪರ ರೈತ ಸುರೇಶ ವಿರೂಪಾಕ್ಷ ಸಿದ್ಧಾಪುರ ಕೈ ತುಂಬ ಆದಾಯ ಗಳಿಸಿದ್ದಾರೆ. ಇದಕ್ಕೆ ಕಾರಣ ಅರಿಷಿಣ. ಇದಕ್ಕೆ ಹನಿನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಎಕರೆಯಲ್ಲಿ ಇಷ್ಟೊಂದು ಬೆಳೆಯಬಹುದೇ ಅಂತ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.
ಬೆಳೆದದ್ದು ಹೇಗೆ?
ಇವರು ಒಂದು ಏಕರೆ ಜಮೀನಿನಲ್ಲಿ ಮೊದಲು 20 ಟನ್‌ಗೂ ಹೆಚ್ಚು ತಿಪ್ಪೆಗೊಬ್ಬರ ಹಾಕಿದ್ದು, ನಂತರ 80 ಕೆಜಿ ಡಿಎನ್‌ಪಿ, 40 ಕೆಜಿ
ಡಿಎಪಿ, 40ಕೆಜಿ ಎಂಒಪಿ ಗೊಬ್ಬರವನ್ನು ಮಣ್ಣಲ್ಲಿ ಮಿಶ್ರಣ ಮಾಡಿದ್ದಾರೆ. 3 ಅಡಿಗೆ ಒಂದರಂತೆ ಸಾಲುಗಳನ್ನು ಬಿಟ್ಟು ಅರಿಷಿಣ ಬೀಜವನ್ನು ನಾಟಿಮಾಡಲಾಗಿದೆ. ನಾಟಿ ಮಾಡಿದ 45 ದಿನಗಳ ಬಳಿಕ 40 ಕೆಜಿ ಡಿಎನ್‌ಪಿ, 40ಕೆಜಿ 20;20;0;13 ಗೊಬ್ಬರವನ್ನು ಹನಿ ನೀರಾವರಿ ಮೂಲಕವೇ ನೀಡಿದ್ದಾರೆ. ಅಲ್ಲದೆ ಡ್ರಿಪ್ ಪೈಪ್‌ಗ್ಳ ಮೂಲಕ ಬಂಪರ್ ಕ್ರಾಪ್ ಜೀವಾಣು ಗೊಬ್ಬರದ ಒಂದು ಕಿಟ್ಟನ್ನೂ ಕೂಡಾ ನೀರಿನಲ್ಲಿ ಮಿಶ್ರಣಮಾಡಿ ಬೆಳೆಗೆ ನೀಡಬೇಕು ಎನ್ನುತ್ತಾರೆ ರೈತ ಸುರೇಶ.
ನಾಟಿ ಮಾಡಿದ 90 ದಿನಗಳಿಗೆ ಬದು ಏರಿಸಬೇಕು. ಹೀಗೆ ಮಾಡುವಾಗ 80 ಕೆ.ಜಿ ಡಿಎನ್‌ಪಿ, 40ಕೆ.ಜಿ 24;24;00, 40 ಕೆಜಿ ಎಂಓಇ. 10 ಕೇಜಿ ಪಿಎಚ್-50, 12 ಕೆಜಿ ಮೆಗ್ನಿàಷಿಯಂ ಸಲ್ಪೇಟ್ ಕೊಟ್ಟು ಬದು ಏರಿಸಿ ನೀರುಣಿಸಬೇಕು. ಇದರಿಂದ ಬೆಳೆಗೆ ಮತ್ತಷ್ಟು ಶಕ್ತಿ ಬಂದು ನೆಲದಲ್ಲಿ ಅರಿಷಿಣ ಕವಲೊಡೆದು ಗಡ್ಡೆಗಳು ದೊಡ್ಡದಾಗಿ ಬೆಳೆಯುತ್ತವೆ. ಈ ರೀತಿ ಮಾಡುವುದರಿಂದ ಇಳುವರಿ ಹೆಚ್ಚಾಗುತ್ತದೆ. ನಂತರ 150 ದಿನಕ್ಕೆ 40ಕೆಜಿ ಡಿಎನ್‌ಪಿ, 40ಕೆಜಿ ಅಮೋನಿಯಂ ಸಲ್ಪೇಟ್, 40ಕೆಜಿ ಎಂಒಪಿ, 10ಕೆಜಿ ಪಿಎಚ್-50, 1ಕಿಟ್ ನೀರಿನಲ್ಲಿ ಬಿಡಬೇಕು. ಈ ಪದ್ಧತಿ ಮಾಡುವುದರಿಂದ ನೆಲದಲ್ಲಿನ ಅರಿಷಿಣದ ಗಡ್ಡೆಗಳು ಒಂದಕ್ಕೊಂದು ಹೊಂದಾಣಿಕೆ ಮಾಡಿಕೊಂಡು ದೊಡ್ಡದಾಗಿ ಬೆಳೆಯಲು ಬಲು ಸಹಕಾರಿಯಾಗುತ್ತದೆ ಎನ್ನುತ್ತಾರ ರೈತ ಸುರೇಶ. ಈ ರೀತಿ ವೈಜ್ಞಾನಿಕ ತಳಹದಿಯಲ್ಲಿ ಬೆಳೆ ಬೆಳೆದಿದ್ದರಿಂದ ಕೇವಲ ಒಂದು ಎಕರೆಯಲ್ಲಿ 42 ಕ್ವಿಂಟಲ್ ಸರಾಸರಿ ಅರಿಷಿಣ ಬೆಳೆದಿದ್ದಾರೆ. ಈಗ ಪ್ರತಿ ಕ್ವಿಂಟಲ್‌ಗೆ ಸರಾಸರಿ ರೂ.9 ಸಾವಿರದಿಂದ 10 ಸಾವಿರ ರೂ. ಬೆಲೆ ಇದೆ. ಒಟ್ಟು 4 ಲಕ್ಷ ರೂ. ಆದಾಯ ದೊರೆತಿದೆ. ಖರ್ಚೆಲ್ಲೆ ಕಳೆದ 3.5 ಲಕ್ಷ ಲಾಭವಾಗಿದೆಯಂತೆ.
ಮಾಹಿತಿಗೆ-9901408593
ಕಿರಣ ಶ್ರೀಶೈಲ ಆಳಗಿ