Advertisement

ಕಾಶ್ಮೀರದಲ್ಲಿ ಮೊದಲ ಮಹಾಯುದ್ಧದ ಸ್ಥಿತಿ ; ಪಾಕ್‌ ಸಂಸತ್‌ನಲ್ಲಿ ಟರ್ಕಿ ಅಧ್ಯಕ್ಷ ಅಣಿಮುತ್ತು!

09:53 AM Feb 16, 2020 | Hari Prasad |

ಇಸ್ಲಾಮಾಬಾದ್‌/ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿನ ಸ್ಥಿತಿ ಈಗ ಮೊದಲ ಮಹಾಯುದ್ಧದ ಬಳಿಕದ ಸ್ಥಿತಿ ಇದೆ ಎಂಬ ಅರ್ಥವಿಲ್ಲದ ಹೇಳಿಕೆಯನ್ನು ಟರ್ಕಿ ಅಧ್ಯಕ್ಷ ರೆಸೆಪ್‌ ತಯ್ಯೀಪ್‌ ಎರ್ಡೋಗನ್‌ ನೀಡಿದ್ದಾರೆ. ಪಾಕ್‌ ಪ್ರವಾಸದಲ್ಲಿರುವ ಅವರು ಶುಕ್ರವಾರ ಅಲ್ಲಿನ ಸಂಸತ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು.

Advertisement

ಭಾರತದ ಆಕ್ಷೇಪದ ಹೊರತಾಗಿಯೂ ಪಾಕಿಸ್ತಾನ ಪ್ರವಾಸದಲ್ಲಿರುವ ಅವರು ಕಾಶ್ಮೀರ ವಿಚಾರ ಪ್ರಸ್ತಾಪಿಸಿ, ಮೊದಲ ಮಹಾಯುದ್ಧದ ವೇಳೆ, ಒಟ್ಟೊಮನ್‌ ಚಕ್ರಾಧಿಪತ್ಯದ ವಿರುದ್ಧ ಟರ್ಕಿಯ ಹೋರಾಟ ಗಾರರು ನಡೆಸಿದ ಯುದ್ಧದ ವೇಳೆ ಟರ್ಕಿಯವರು ಅನುಭವಿಸಿದ ನೋವಿ ಗೂ, ಸದ್ಯ ಕಾಶ್ಮೀರದ ಜನತೆ ಅನುಭವಿ ಸುತ್ತಿರುವ ನೋವಿಗೂ ಯಾವುದೇ ವ್ಯತ್ಯಾಸವಿಲ್ಲ ಎಂಬ ಅರ್ಥವಿಲ್ಲದ ಹೋಲಿಕೆಯನ್ನು ಅವರು ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಕಾಶ್ಮೀರದ ವಿಚಾರ ಪಾಕಿಸ್ತಾನಕ್ಕೆ ಎಷ್ಟು ಹತ್ತಿರವಾಗಿದೆಯೋ ಟರ್ಕಿಗೂ ಅಷ್ಟೇ ಹತ್ತಿರವಾಗಿದೆ ಎಂದಿದ್ದಾರೆ.

ದಶಕಗಳಿಂದ ಸಂಕಷ್ಟಗಳನ್ನು ಅನುಭವಿಸು ತ್ತಿರುವ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ವಿಶೇಷ ಸ್ಥಾನಮಾನ ರದ್ದಾದ ಅನಂತರ, ಬಾಣಲೆಯಿಂದ ನೇರವಾಗಿ ಬೆಂಕಿಗೆ ಬಿದ್ದಂತಾಗಿದೆ. ಕಾಶ್ಮೀರದಲ್ಲಿರುವ ನಮ್ಮ ಸಹೋದರ, ಸಹೋದರಿಯರು ದಬ್ಟಾಳಿಕೆ ಯಡಿ ಜೀವನ ನಡೆಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಕಾಶ್ಮೀರ ವಿಚಾರದಲ್ಲಿ ಪಾಕ್‌ಗೆ ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ.

ಉಗ್ರರಿಗೆ ವಿತ್ತೀಯ ನೆರವು ನೀಡುತ್ತಿರುವ ಆರೋಪದಡಿ ಭಯೋತ್ಪಾದನಾ ಧನಸಹಾಯ ಕಣ್ಗಾವಲು ಪಡೆಯ (ಎಫ್ಎಟಿಎಫ್) ಕಂದು ಪಟ್ಟಿಗೆ ಸೇರ್ಪಡೆಯಾಗಿರುವ ಪಾಕಿಸ್ಥಾನವನ್ನು ಆದಷ್ಟು ಬೇಗನೇ ಆ ಪಟ್ಟಿಯಿಂದ ಹೊರತರುತ್ತೇವೆ ಎಂದು ತಿಳಿಸಿದ್ದಾರೆ.

ಶೆಲ್‌ ದಾಳಿಗೆ ಓರ್ವ ಬಲಿ
ಭಾರತ-ಪಾಕಿಸ್ಥಾನದ ನಡುವಿನ ಎಲ್‌ಒಸಿ ಬಳಿಯಿರುವ, ಪೂಂಚ್‌ ಜಿಲ್ಲೆಗೆ ಸೇರಿದ ಹಳ್ಳಿಗಳ ಮೇಲೆ ಪಾಕಿಸ್ತಾನದ ಸೈನಿಕರು ಅಪ್ರಚೋದಿತವಾಗಿ ನಡೆಸಿದ ಶೆಲ್‌ ಹಾಗೂ ಗುಂಡಿನ ದಾಳಿಯಿಂದಾಗಿ ಸ್ಥಳೀಕ ಅಸುನೀಗಿ ದ್ದಾರೆ. ಈ ಘಟನೆಯಲ್ಲಿ ಇತರ ನಾಲ್ವರು ಗಾಯಗೊಂಡಿದ್ದಾರೆ.

Advertisement

ಶಹ್ಲಾಪುರ್‌ ಹಾಗೂ ಕೆರ್ನಿ ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ಥಾನ ಸೈನಿಕರು 120 ಎಂಎಂ ಮೊರ್ಟಾರ್‌ ಶೆಲ್‌ಗ‌ಳ ದಾಳಿಯನ್ನು ನಡೆಸಿದ್ದಾರೆಂದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಾಕ್‌ ಸಂಸತ್‌ನಲ್ಲಿ ರೆಸೆಪ್‌ ಅವರು ಕಾಶ್ಮೀರದ ವಿಚಾರ ಪ್ರಸ್ತಾವ ಮಾಡಿರುವುದು ಅತ್ಯಂತ ಖೇದಕರ ವಿಚಾರ. ಸಮಸ್ಯೆಯನ್ನು ಮೊದಲು ಆಮೂಲಾಗ್ರವಾಗಿ ಅಧ್ಯಯನ ಮಾಡಿ ಆನಂತರ ಅವರು ಮಾತನಾಡಬೇಕಿತ್ತು.
– ರವೀಶ್‌ ಕುಮಾರ್‌, ವಿದೇಶಾಂಗ ಇಲಾಖೆ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next