Advertisement

ಪ್ರಧಾನಿ ನಿವಾಸ ಸಂಪರ್ಕಕ್ಕೆ ಸುರಂಗ!

12:09 AM Mar 05, 2021 | Team Udayavani |

ಹೊಸದಿಲ್ಲಿ: ರಾಜಧಾನಿಯಲ್ಲಿ ಹೊಸ ಸಂಸತ್‌ ಭವನ ನಿರ್ಮಾಣವಾದ ಮೇಲೆ ಜನರಿಗೆ ವಿವಿಐಪಿಗಳ ಓಡಾಟ, ಟ್ರಾಫಿಕ್‌ ಕಿರಿಕಿರಿಯ ಕಾಟ ತಪ್ಪಲಿದೆ!

Advertisement

ಬಹುನಿರೀಕ್ಷಿತ ಸೆಂಟ್ರಲ್‌ ವಿಸ್ತಾ ಯೋಜನೆಯಡಿ ಹೊಸ ಸಂಸತ್‌ ಕಟ್ಟಡ ನಿರ್ಮಾಣವಾಗುತ್ತಿದ್ದು, ಪ್ರಧಾನಿ, ಉಪರಾಷ್ಟ್ರಪತಿ ಮತ್ತು ಸಂಸದರ ಚೇಂಬರ್‌

ಗಳ ಸಂಪರ್ಕಕ್ಕೆ ನೆಲದಡಿ ಪ್ರತ್ಯೇಕ ಸುರಂಗ ನಿರ್ಮಾಣ ಮಾಡಲಾಗುತ್ತದೆ.

ಈಗಿರುವ ಸೆಂಟ್ರಲ್‌ ವಿಸ್ತಾ ಯೋಜನೆ ಪ್ರಕಾರ, ಪ್ರಧಾನಿಯವರ ಹೊಸ ನಿವಾಸ ಮತ್ತು ಕಾರ್ಯಾಲಯವು ಸೌತ್‌ ಬ್ಲಾಕ್‌ ಕಡೆ ಇರಲಿದೆ. ಉಪರಾಷ್ಟ್ರಪತಿಗಳ ಹೊಸ ನಿವಾಸವು ನಾರ್ತ್‌ ಬ್ಲಾಕ್‌ ಕಡೆ ತಲೆಎತ್ತಲಿದೆ. ಸಂಸದರ ಚೇಂಬರ್‌ಗಳ ಕಟ್ಟಡವು ಹಾಲಿ ಸಾರಿಗೆ ಮತ್ತು ಶ್ರಮ ಶಕ್ತಿ ಭವನವಿರುವ ಕಡೆಯಲ್ಲಿ  ನಿರ್ಮಾಣವಾಗಲಿದೆ.

ಏಕಮಾರ್ಗ :

Advertisement

ಮೂಲಗಳ ಪ್ರಕಾರ ಈ ಸುರಂಗಗಳು ಏಕಮಾರ್ಗವನ್ನು ಹೊಂದಿರುತ್ತವೆ. ಅಷ್ಟೇನೂ ದೊಡ್ಡದಾಗಿ ಇರುವುದಿಲ್ಲ. ಈ ಮಾರ್ಗಗಳಲ್ಲಿ ಕೇವಲ ವಿವಿಐಪಿಗಳಷ್ಟೇ ಓಡಾಡುತ್ತಾರೆ. ಇದಕ್ಕಾಗಿ ಗಾಲ್ಫ್ ಕಾರ್ಟ್‌ನಂಥ ವಾಹನ ಬಳಕೆ ಮಾಡಲಾಗುತ್ತದೆ. ಸೆಂಟ್ರಲ್‌ ವಿಸ್ತಾ ಯೋಜನೆಯಡಿ ಸಾರಿಗೆ ಸಮಸ್ಯೆಯನ್ನು ಹೋಗಲಾಡಿಸುವುದು ಕೂಡ ಪ್ರಮುಖ ಉದ್ದೇಶವಾಗಿದೆ. ಹೀಗಾಗಿ ಸುರಂಗ ನಿರ್ಮಿಸಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ರಾಷ್ಟ್ರಪತಿ ಭವನಕ್ಕೆ ಬೇಕಿಲ್ಲ :

ಸದ್ಯ ಪ್ರಧಾನಿ ನಿವಾಸ, ಉಪರಾಷ್ಟ್ರಪತಿ ನಿವಾಸ ಮತ್ತು ಸಂಸದರ ಚೇಂಬರ್‌ಗಳಿಗೆ ಮಾತ್ರ ಸುರಂಗ ನಿರ್ಮಿಸಲಾಗುತ್ತಿದೆ. ಆದರೆ ರಾಷ್ಟ್ರಪತಿ ನಿವಾಸಕ್ಕೆ ಪ್ರತ್ಯೇಕ ಸುರಂಗ ಇರುವುದಿಲ್ಲ. ರಾಷ್ಟ್ರಪತಿಗಳು ಸಂಸತ್‌ ಭವನಕ್ಕೆ ಬರುವ ಸಂದರ್ಭಗಳು ಕಡಿಮೆ ಇರುವುದೇ ಇದಕ್ಕೆ ಕಾರಣ.

Advertisement

Udayavani is now on Telegram. Click here to join our channel and stay updated with the latest news.

Next