Advertisement

ತುಂಗಭದ್ರಾ ಎಡದಂಡೆ ಕಾಲುವೆ ಕಾಮಗಾರಿ ವೀಕ್ಷಣೆ

11:23 AM Jul 20, 2020 | Suhan S |

ಕಾರಟಗಿ: ತಾಲೂಕಿನ ಸೋಮನಾಳ ಬಳಿ ತುಂಗಭದ್ರಾ ಎಡದಂಡೆ ಕಾಲುವೆಯ ಆಧುನೀಕರಣ ಕಾಮಗಾರಿಯನ್ನು ಕಾರಟಗಿ- ಕನಕಗಿರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರುಗಳ ನೇತೃತ್ವದ ಕಾಂಗ್ರೆಸ್‌ ನಿಯೋಗ ರವಿವಾರ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿತು.

Advertisement

ನಂತರ ಮಾತನಾಡಿದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರುಗಳು, ಅನಗತ್ಯವಾಗಿ ಕಾಮಗಾರಿ ವಿಳಂಬ ಮಾಡದೇ ನಿಗ ತ ಸಮಯದೊಳಗೆ ಕಾಮಗಾರಿ ಮುಗಿಸಿ. ಅಲ್ಲದೇ ಭತ್ತ ನಾಟಿ ಕಾರ್ಯಕ್ಕೆ ರೈತರಿಗೆ ತೊಂದರೆಯಾಗದಂತೆ ಜು.25ಕ್ಕೆ ಕಾಲುವೆಗೆ ನೀರು ಹರಿಸಬೇಕು. ಕಾಮಗಾರಿಯಲ್ಲಿ ಗುಣಮಟ್ಟದ ಸಲಕರಣೆ ಉಪಯೋಗಿಸುತ್ತಿಲ್ಲ ಎಂದು ದೂರಿದರು.

ಇದಕ್ಕೆ ಎಇಇ ಸೂಗಪ್ಪ ಪ್ರತಿಕ್ರಿಯಿಸಿ, ಕಾಮಗಾರಿಯಲ್ಲಿ ಗುಣಮಟ್ಟದ ಸಲಕರಣೆಗಳನ್ನೇ ಬಳಸಲಾಗಿದೆ. ಟ್ಯಾಂಪ್ಲೇಟ್‌ ಗಟ್ಟಿಮುಟ್ಟಾಗಿದೆ. ಅದಕ್ಕೆ ಹಳೆಯದನ್ನೇ ಉಳಿಸಿದ್ದೇವೆ. ಇನ್ನು ಕಂಕರ್‌, ರಾಡ್‌, ಮಣ್ಣು ಅಥವಾ ಕ್ಯೂರಿಂಗ್‌ ಸಮರ್ಪಕವಾಗಿ ನಿರ್ವಹಿಸಿದ್ದೇವೆ. ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಾಗಿದ್ದರಿಂದ ಕಾಮಗಾರಿ ಅರ್ಧ ಕಿ.ಮೀ ವಿಸ್ತರಿಸಿದ್ದೇವೆ. ಜು.21ರೊಳಗೆ ಕಾಮಗಾರಿ ಮುಗಿಸಲಾಗುವುದು ಎಂದರು.

ನಿಯೋಗದ ಪ್ರಮುಖರು ಮಾತನಾಡಿ, ಬಿಲ್‌ ಎತ್ತುವಳಿ ಸಂಬಂಧ ಕಾಮಗಾರಿ ಅವಸರದಲ್ಲಿ ನಡೆಸುತ್ತಿದ್ದು ತರಾತುರಿಯಲ್ಲಿ ಕಾಮಗಾರಿ ಗುಣಮಟ್ಟ ಕಾಪಾಡುವುದಾದರು ಹೇಗೆ? ಮುಂದೆ ರೈತರು ಸಂಕಟ ಪಡುವ ಸ್ಥಿತಿ ಬರಬಾರದು. ಒಂದು ವೇಳೆ ಅಂತಹ ಸ್ಥಿತಿ ಉದ್ಭವವಾದರೆ ಶಿವರಾಜ ತಂಗಡಗಿಯವರೊಂದಿಗೆ ಸೇರಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ನಿಯೋಗದ ರೆಡ್ಡಿ ಶ್ರೀನಿವಾಸ್‌, ಅಂಬಣ್ಣ ನಾಯಕ, ತಾಪಂ ಸದಸ್ಯ ಪ್ರಕಾಶ ಬಾವಿ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಶರಣಬಸವರಾಜ ರೆಡ್ಡಿ, ತಾಪಂ ಸದಸ್ಯ ದಾನನಗೌಡ ಪನ್ನಾಪುರ, ಮುಖಂಡರಾದ ಗದ್ದೆಪ್ಪ ನಾಯಕ, ಶಿವರಡ್ಡಿ ನಾಯಕ, ಅಯ್ಯಪ್ಪ ಉಪ್ಪಾರ, ಬಾಬುಸಾಬ ಬಳಿಗಾರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next