Advertisement

ತುಂಗಭದ್ರಾ ನೀರು ಸರಬರಾಜಿಗೆ ಬರ

03:21 PM Apr 21, 2019 | pallavi |

ಲಕ್ಷ್ಮೇಶ್ವರ: ಪಟ್ಟಣಕ್ಕೆ ಸರಬರಾಜಾಗುವ ತುಂಗಭದ್ರಾ ನದಿ ನೀರು ಕಳೆದ ಕೆಲ ದಿನಗಳಿಂದಲೂ ಮರೀಚಿಕೆಯಾಗಿದ್ದು, ಜನರು ಟ್ಯಾಂಕರ್‌ ನೀರು, ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಮೊರೆ ಹೋಗಿದ್ದಾರೆ.

Advertisement

ಮೇವುಂಡಿಯ ಜಾಕ್‌ವೆಲ್ನಿಂದ ತುಂಗಭದ್ರಾ ನದಿಯ ನೀರು ನೇರವಾಗಿ ಸೂರಣಗಿಯ ಶುದ್ಧೀಕರಣ ಘಟಕದಲ್ಲಿ ಸಂಸ್ಕರಣಗೊಂಡು ಅಲ್ಲಿಂದ ಪಟ್ಟಣಕ್ಕೆ ತಲುಪುತ್ತದೆ. ಆದರೆ ಶುದ್ಧೀಕರಣ ಘಟಕದಲ್ಲಿರುವ 250 ಅಶ್ವಶಕ್ತಿಯ 2 ನೀರೆತ್ತುವ ಪಂಪ್‌ಗ್ಳು ದುರಸ್ತಿಗೊಳಗಾಗಿದ್ದರಿಂದ ನದಿಯಲ್ಲಿ ನೀರಿದ್ದರೂ ಜನತೆಗೆ ಸವಳು ನೀರೆ ಗತಿಯಾಗಿದೆ.

ಚುನಾವಣೆಯ ಭರದಲ್ಲಿರುವ ಅಧಿಕಾರಿಗಳು ನೀರಿಗಾಗಿ ಪರಿತಪಿಸುತ್ತಿರುವ ಜನತೆಯ ಗೋಳನ್ನೂ ಕೇಳಲೂ ಸಮಯವಿಲ್ಲದಂತೆ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ನಿತ್ಯದ ಕುಡಿಯುವ ನೀರಿನ ಭವಣೆಗೆ ತುತ್ತಾಗಿದ್ದಾರೆ. ಅಧಿಕಾರಿಗಳು ಪಂಪ್‌ಗ್ಳ ದುರಸ್ತಿ ಕುರಿತಂತೆ ನಾಳೆ ನಾಳೆ ಎಂದು ಸಬೂಬು ಹೇಳುತ್ತಿದ್ದು ಆಗಲೇ 15 ದಿನ ಗತಿಸಿವೆ.

ಈಮಧ್ಯೆ ಆಯ್ಕೆಯಾಗಿರುವ ಸ್ಥಳೀಯ ಪುರಸಭೆ ಸದಸ್ಯರು ಇನ್ನೂ ಅಧಿಕಾರ ಸ್ವೀಕರಿಸದಿದ್ದರೂ ಲೋಕಸಭೆಯ ಚುನಾವಣೆಯ ದೃಷ್ಟಿಯಿಂದ ತಮ್ಮ ತಮ್ಮ ವಾರ್ಡ್‌ಗಳಲ್ಲಿ ಸದ್ದಿಲ್ಲದೇ ಸ್ವಂತ ಖರ್ಚಿನಿಂದ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ಇದು ಅಪರೋಕ್ಷವಾಗಿ ಅಧಿಕಾರಿಗಳಿಗೆ ಹೆಚ್ಚು ತಲೆನೋವಾಗುವುದನ್ನು ತಪ್ಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next