Advertisement

ತುಂಗಭದ್ರಾ ನದಿಗೆ ನಿರ್ಮಿಸಿದ್ದ ರಸ್ತೆ ಮೇಲ್ಸೇತುವೆ ಕುಸಿತ ; ಆತಂಕದಲ್ಲಿ ವಾಹನ ಸವಾರರು

02:34 PM Sep 24, 2020 | sudhir |

ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ಬಳಿ ತುಂಗಭದ್ರಾ ನದಿಗೆ ಕಟ್ಟಲಾಗಿರುವ ರಸ್ತೆ ಮೇಲ್ಸೇತುವೆ ಬುಧವಾರ ಬೆಳಗಿನ ಜಾವದಲ್ಲಿ ಒಂದು ಅಡಿ ಆಳಕ್ಕೆ ಕುಸಿದಿದೆ. ಇದರಿಂದ ವಾಹನಗಳ ಸವಾರರಲ್ಲಿ ಆತಂಕ ಸೃಷ್ಟಿಸಿದ್ದಲ್ಲದೇ, ಸಂಚಾರಕ್ಕೆ ಕೆಲಕಾಲ ತೊಂದರೆ ಉಂಟಾಗಿತ್ತು.

Advertisement

ಮುಂಡರಗಿ-ಹೂವಿನ ಹಡಗಲಿ ತಾಲೂಕಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, 18 ವರ್ಷಗಳ ಹಿಂದೆ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಸೇತುವೆ ಯಾವುದೇ ಭಾಗದಲ್ಲಿ ಬಿರುಕುಗಳಿಲ್ಲ. ಆದರೆ ಬುಧವಾರ ಬೆಳಗಿನ ಜಾವ ಬಳ್ಳಾರಿ ಜಿಲ್ಲೆಯ ಮದಲಗಟ್ಟಿ ಭಾಗದಲ್ಲಿ ಸೇತುವೆ ಸುಮಾರು 10 ಅಡಿ ವಿಸ್ತೀರ್ಣದಲ್ಲಿ 1 ಅಡಿಯಷ್ಟು ಕೆಳಕ್ಕೆ ಕುಸಿದಿದೆ. ಇದರಿಂದ ಕಾರು ಅಪಘಾತಕ್ಕೀಡಾಗಿದ್ದು, ಭಾಗಶಃ ಜಖಂಗೊಂಡಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಈ ಘಟನೆಯಿಂದ ಸಹಜವಾಗಿಯೇ ಸೇತುವೆ ಮೇಲೆ ಸಂಚರಿಸುವ ವಾಹನ ಸವಾರರಲ್ಲಿ ಆತಂಕ ಮೂಡಿಸಿತ್ತು. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕೆಆರ್‌ಡಿಸಿಎಲ್‌ ಅಧಿಕಾರಿಗಳು ಸೇತುವೆ ಕುಸಿತಗೊಂಡ ಭಾಗದಲ್ಲಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next