Advertisement
ಸುದ್ದಿಗಾರರೊಂದಿಗೆ ಮಾತನಾಡಿ ‘ ಡ್ಯಾಂ ವಿಚಾರದಲ್ಲಿ ನಿಮಿಷವೂ ವಿಳಂಬ ಮಾಡದೇ ದಿನದ 24 ಗಂಟೆ ಕೆಲಸ ಮಾಡಿದ್ದೇವೆ. ನಮ್ಮ ಸಚಿವರು, ಶಾಸಕರು ಹಗಲು ರಾತ್ರಿ ನಿದ್ದೆ ಮಾಡದೇ ಜಾಗೃತಿ ವಹಿಸಿದ್ದರು. ಅವಘಡ ನಡೆದ ತತ್ ಕ್ಷಣವೇ ತಜ್ಞ ಕನ್ನಯ್ಯ ನಾಯ್ಡು ಸೇರಿದಂತೆ ಜಿಂದಾಲ್ ಕಂಪನಿಯನ್ನು ಸಂಪರ್ಕ ಮಾಡಿದೆವು. ಜಿಂದಾಲ್, ನಾರಾಯಣ ಮತ್ತು ಹಿಂದೂಸ್ಥಾನ್ ಈ ಮೂರು ಕಂಪನಿಗಳು ನಾಲ್ಕು ದಿನಗಳ ಕಾಲ ಶ್ರಮಿಸಿದರು. ನಾಲ್ಕು ದಿನದಲ್ಲಿ ಕಾರ್ಯಾಚರಣೆ ಯಶಸ್ವಿ ಮಾಡಿದೆವು’ ಎಂದು ತಿಳಿಸಿದರು.
Related Articles
Advertisement
‘ತುಂಗಭದ್ರಾ ತುಂಬಿದ ನಂತರ ಬಾಗಿನ ಅರ್ಪಿಸಲು ಬರುತ್ತೇವೆ.ಗೇಟ್ ಅಳವಡಿಕಗೆ ಶ್ರಮಿಸಿದವರನ್ನು ಸತ್ಕರಿಸುತ್ತೇವೆ’ ಎಂದು ಡಿಸಿಎಂ ಹೇಳಿದರು.
ಸುರಕ್ಷತೆಗೆ ಸಮಿತಿ ರಚನೆ
ಸಚಿವ ಎಂ ಬಿ ಪಾಟೀಲ್ ಮಾತನಾಡಿ ‘ಡ್ಯಾಂ ನಿರ್ಮಾಣ ಮಾಡುವಾಗ ಪ್ರತಿ ವರ್ಷ 0.5 ಟಿಎಂಸಿ ಹೂಳು ತುಂಬುತ್ತದೆ. ಇದನ್ನು ನಮ್ಮ ಹಿರಿಯರು ಮೊದಲೇ ಹೇಳಿದ್ದಾರೆ. ಡ್ಯಾಂ ನಿರ್ಮಾಣವಾಗಿ ಈಗ 70 ವರ್ಷ ಆಗಿದೆ. 35 ಟಿಎಂಸಿ ಯಷ್ಟು ಹೂಳು ತುಂಬಿದೆ’ ಎಂದು ತಿಳಿಸಿದರು.
‘ಪ್ರತಿ ನೂರು ವರ್ಷಕ್ಕೆ ಹೊಸ ಡ್ಯಾಂ ಕಟ್ಟಬೇಕಾಗುತ್ತದೆ. ಈಗಾಗಲೇ ತುಂಗಭದ್ರಾ ಡ್ಯಾಂ ವಿಚಾರದಲ್ಲಿ ಸಮಿತಿ ರಚನೆ ಮಾಡಲಾಗಿದೆ.ಡ್ಯಾಂ ಗೇಟ್ ಸೇರಿ ಸುರಕ್ಷತೆಗೆ ಏನು ಮಾಡಬೇಕು ಎಲ್ಲವನ್ನೂ ಮಾಡುತ್ತೇವೆ. ಸರಕಾರ ಡ್ಯಾಂ ಸುರಕ್ಷತೆಗೆ ಸಮಿತಿ ರಚನೆ ಮಾಡಿದೆ. ವರದಿ ಅನುಸಾರ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.