Advertisement
ತುಂಗಭದ್ರಾ ಡ್ಯಾಂನಲ್ಲಿ 100 ಟಿಎಂಸಿ ನೀರು ಸಂಗ್ರಹವಿದೆ. ಆದರೆ 19ನೇ ಗೇಟ್‌ಗೆ ಹೊಸ ಗೇಟ್ ಅಳವಡಿಕೆ ಮಾಡಬೇಕೆಂದರೆ ಕನಿಷ್ಠ 20 ಅಡಿಯಷ್ಟು ನೀರಿನ ಮಟ್ಟವನ್ನು ಕೆಳಗೆ ಇಳಿಸಬೇಕಾಗಿದೆ. ಅಂದರೆ ಡ್ಯಾಂನಲ್ಲಿ 60 ಟಿಎಂಸಿ ನೀರನ್ನು ನದಿಪಾತ್ರಕ್ಕೆ ಹೊರ ಬಿಡಬೇಕಿದೆ. ಪ್ರತಿ ದಿನವು 10 ಟಿಎಂಸಿ ನೀರು ನದಿಪಾತ್ರದಿಂದ ಹೊರಗೆ ಹೋದರೆ ಆರು ದಿನಕ್ಕೆ 60 ಟಿಎಂಸಿ ನೀರು ಡ್ಯಾಂನಿಂದ ಹೊರಗೆ ನೀರು ಹರಿಯಲಿದೆ. ಆರನೇ ದಿನದ ಬಳಿಕ ಹೊಸ ಗೇಟ್ ಅಳವಡಿಕೆಯ ಸ್ಥಿತಿಗತಿ ಏನಾಗಿದೆ ಎಂದು ನೋಡಲು ಸಾಧ್ಯವಾಗಲಿದೆ. ಅಂದರೆ ಹೊಸ ಗೇಟ್ ಅಳವಡಿಕೆಗೆ ಕನಿಷ್ಠ ಇನ್ನೂ ಆರು ದಿನ ಕಾಯುವ ಪರಿಸ್ಥಿತಿ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೊಸ ಗೇಟ್ ಅಳವಡಿಕೆಗೆ ಈಗಾ ಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತುಂಗಭದ್ರಾ ಮಂಡಳಿಗೆ ಸೂಚನೆ ನೀಡಿದ್ದು, ಬೋರ್ಡ್ ಸಹ ಹೊಸಪೇಟೆಯ ನಾರಾಯಣ ಎಂಜಿನಿಯರಿಂಗ್ ಕಂಪೆನಿಗೆ ನಿರ್ಮಾಣದ ಹೊಣೆ ನೀಡಿದೆ. ಒಂದು ಗೇಟ್ 24 ಅಡಿ ಅಗಲ, 21 ಅಡಿ ಎತ್ತರ ಹಾಗೂ 48 ಟನ್ ತೂಕ ಹೊಂದಿದೆ. ಇಂದು ಡ್ಯಾಂಗೆ ಸಿಎಂ ಭೇಟಿ
ಕ್ರಸ್ಟ್‌ಗೇಟ್ ತುಂಡಾದ ಘಟನೆ ಕುರಿತಂತೆ ಜಲ ಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮಂಗಳವಾರ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
Related Articles
ತುಂಗಭದ್ರಾ ಜಲಾಶಯವನ್ನು 1945ರ ಕಾಲಘಟ್ಟದಲ್ಲಿ ನಿರ್ಮಾಣ ಮಾಡುವ ವೇಳೆ ತುಂಗಭದ್ರಾ ಸ್ಟೀಲ್ ಕಂಪೆನಿಯೇ ಎಲ್ಲ ಉತ್ಪಾದಕಗಳನ್ನು ಪೂರೈಕೆ ಮಾಡಿದ್ದು, ಡ್ಯಾಂನ ಸಂಪೂರ್ಣ ನಿರ್ಮಾಣ ಜವಾಬ್ದಾರಿ ಇವರಿಗೆ ಹಿಂದೆ ವಹಿಸಿತ್ತು. ಈಗಲೂ ಸಹಿತ ಡ್ಯಾಂ ಗೇಟ್ ಮುರಿದಿದ್ದು, ಅವರ ಉಸ್ತುವಾರಿಯಲ್ಲಿ ಹೊಸ ಗೇಟ್ ನಿರ್ಮಾಣಕ್ಕೆ ಅಣಿ ಮಾಡಲಾಗಿದೆ.
Advertisement
ಮುಂಬಯಿ, ಹೈದರಾಬಾದ್ ತಜ್ಞರ ಜತೆ ಚರ್ಚೆತುಂಗಭದ್ರಾ ಡ್ಯಾಂ ಗೇಟ್ ಮುರಿದ ಬೆನ್ನಲ್ಲೇ ನೀರಾವರಿ ವಿಭಾಗದಲ್ಲಿ ಅತ್ಯಂತ ನುರಿತ ನೀರಾವರಿ ತಜ್ಞರೊಂದಿಗೆ ಟಿಬಿ ಬೋರ್ಡ್ ಅಧಿಕಾರಿಗಳು ಚರ್ಚೆ ನಡೆಸಿದ್ದು, ಹೈದರಾಬಾದ್ ಹಾಗೂ ಮುಂಬಯಿ ತಜ್ಞರು ಕೆಲವೊಂದು ಸಲಹೆಗಳನ್ನು ನೀಡಿರುವ ಮಾಹಿತಿ ಲಭ್ಯವಾಗಿದೆ. ಇದಲ್ಲದೇ ಕೆಲವು ಪರಿಣತರನ್ನು ಡ್ಯಾಂನ ಸ್ಥಳಕ್ಕೆ ಕರೆಯಿಸಲಾಗಿದೆ. 3.5 ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ ಏನೆಲ್ಲ ಅಪಾಯ?
ತುಂಗಭದ್ರಾ ಜಲಾಶಯದಿಂದ ನದಿಪಾತ್ರಕ್ಕೆ 3.5 ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ ಹಂಪಿಯ ಕೆಲವು ಸ್ಮಾರಕಗಳು ಮುಳುಗಡೆಯಾಗಿ, ಗದ್ದೆಗಳಿಗೆ ಹಾಗೂ ಕೆಲವು ಹಳ್ಳಿಗಳಿಗೆ ನೀರು ನುಗ್ಗಿ ತೊಂದರೆ ಎದುರಾಗಲಿದೆ. ಪ್ರಸ್ತುತ 1 ಲಕ್ಷ ಕ್ಯೂಸೆಕ್ ನೀರು ಹರಿಯ ಬಿಡಲಾಗಿದೆ. 2.25 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಬಿಟ್ಟರೆ ನದಿಯ ಕೆಳ ಭಾಗದ ಕಾರಟಗಿ ತಾಲೂಕಿನ ಉಳೆಬೆನ್ನೂರು ಸೇರಿ ಇತರ ಗ್ರಾಮಗಳ ಗದ್ದೆಗೆ ನೀರು ನುಗ್ಗಲಿದೆ. ಆನೆಗೊಂದಿಯ ಸಾಲು ಮಂಟಪ, ಕಂಪ್ಲಿ ಸಂಪೂರ್ಣ ಸೇತುವೆ ಮುಳುಗಡೆಯಾಗಲಿದೆ. ಇನ್ನು 3.50 ಲಕ್ಷ ಕ್ಯೂಸೆಕ್ ನೀರು ನದಿಪಾತ್ರಕ್ಕೆ ಹರಿಬಿಟ್ಟರೆ ಹಂಪಿಯ ಸ್ಮಾರಕಗಳು ಮುಳುಗಡೆಯಾಗಲಿವೆ. ನದಿಪಾತ್ರದ ಋಷಿಮುಖ ಪರ್ವತ, ನವವೃಂದಾವನ ಸೇರಿದಂತೆ ಇತರೆ ಸ್ಮಾರಕಗಳು ಸಂಪೂರ್ಣ ಮುಳುಗಡೆಯಾಗಿ, ಕೆಲವು ಹಳ್ಳಿಗಳಿಗೆ ಅಪಾಯ ಎದುರಾಗಲಿದೆ. “ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯ ದಿಂದ ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್ ಚೈನ್ ಲಿಂಕ್ ಮುರಿದು ಬಿದ್ದಿದೆ. ಡ್ಯಾಂನ ಹೊರಹರಿವು ಏರಿಕೆಯಾಗಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದರಿಂದ ನದಿ ಪಾತ್ರದ ರೈತರನ್ನು ಚಿಂತೆಗೀಡು ಮಾಡಿದೆ.” -ಆರ್.ಅಶೋಕ್ , ವಿಧಾನಸಭೆ ವಿಪಕ್ಷ ನಾಯಕ “ಡ್ಯಾಂನಲ್ಲಿ ಅವಘಡವಾದ್ದರಿಂದ ಈ ಬಾರಿ ರೈತರಿಗೆ ತೊಂದರೆ ಎದುರಾಗಿದೆ. 60 ಟಿಎಂಸಿ ನೀರು ಹೊರ ಹೋದರೆ 40 ಟಿಎಂಸಿ ನೀರು ಉಳಿಯಲಿದೆ. ಇನ್ನೂ ಒಳ ಹರಿವಿನ ಪ್ರಮಾಣವಿದ್ದು, ಅಷ್ಟರೊಳಗೆ ಹೊಸ ಗೇಟ್ ಅಳವಡಿಕೆ ಮಾಡಿದರೆ ಮೊದಲ ಬೆಳೆಗೆ ನೀರು ಲಭಿಸುವ ವಿಶ್ವಾಸವಿದೆ.” -ಶಿವರಾಜ ತಂಗಡಗಿ, ಸಚಿವ “ಈಗಾಗಲೇ ಹೊಸ ಗೇಟ್ ಸಿದ್ಧತೆಗೆ ಸರಕಾರದಿಂದ ಆದೇಶ ಮಾಡಲಾಗಿದೆ. ಗೇಟ್ ನಿರ್ಮಾಣಕ್ಕೆ ಸಮಯ ಬೇಕು ಜತೆಗೆ ಡ್ಯಾಂನಲ್ಲಿ 60 ಟಿಎಂಸಿ ನೀರು ಖಾಲಿಯಾಗಬೇಕು. ಆಗ ಮಾತ್ರ ಹೊಸ ಗೇಟ್ ಅಳವಡಿಕೆ ಮಾಡಲು ಸಾಧ್ಯವಿದೆ.” – ಹಸನ್ ಸಾಬ ದೋಟಿಹಾಳ , ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ