Advertisement

ಸಂಸದರಿಂದ ತುಂಗಾ ಏತ ನೀರಾವರಿ ಕಾಮಗಾರಿ ವೀಕ್ಷಣೆ

01:16 PM Jun 30, 2020 | mahesh |

ಶಿಕಾರಿಪುರ: ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತಿದ್ದ ತುಂಗಾನದಿಯ ನೀರನ್ನು ಸದ್ಬಳಕೆ ಮಾಡಿಕೊಂಡು ಶಿಕಾರಿಪುರ ಮತ್ತು ಹಿರೇಕೇರೂರು ತಾಲೂಕಿನ 7,000 ಹೆಕ್ಟೇರ್‌ ಭೂಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ, 225 ಕೆರೆಗಳಿಗೆ ನೀರು ತುಂಬಿಸುವ ಹಾಗೂ ಈ ಭಾಗದಲ್ಲಿ ಬತ್ತಿಹೋಗುತ್ತಿದ್ದ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ 661ಕೋಟಿ ರೂ. ವೆಚ್ಚದ ತುಂಗಾ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ರಟ್ಟಿಹಳ್ಳಿ ತಾಲೂಕಿನ ಚಟ್ನಳ್ಳಿಯ ನದಿ ತೀರದ ಜಾಕ್‌ವೆಲ್‌ನ ಪಾಯಿಂಟ್‌ನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪರಿಶೀಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, ಆರಂಭಗೊಂಡ ಈ ಕಾಮಗಾರಿಯು ಯಾವುದೇ ಕಾರಣಕ್ಕೆ ನಿಲ್ಲದಂತೆ ಮುಂದುವರೆಸುವಂತೆ ನೋಡಿಕೊಳ್ಳಲಾಗುವುದು. ಅಲ್ಲದೇ ಅಗತ್ಯವಿರುವ ವಿದ್ಯುತ್‌ ಅನ್ನು ಸರಬರಾಜು ಮಾಡಲು 110ಕೆ.ವಿ. ವಿದ್ಯುತ್‌ ಸ್ಟೇಷನ್‌ ಆರಂಭಿಸಿ, ವಿದ್ಯುತ್‌ ಒದಗಿಸುವ ಕಾಮಗಾರಿಯೂ ಜೊತೆಯಲ್ಲಿಯೇ ಸಾಗಿದೆ. ಈ ಯೋಜನಾ ವ್ಯಾಪ್ತಿಯ ಒಟ್ಟು ಕೆರೆಗಳಲ್ಲಿ ಈಗಾಗಲೇ 75 ಕೆರೆಗಳ ಹೂಳೆತ್ತುವ, ಏರಿ ದುರಸ್ತಿ, ಕಾಲುವೆ, ಗೇಟು ನಿರ್ಮಾಣ ಮುಂತಾದ ಕಾಮಗಾರಿಗಳಿಗೆ ಯೋಜನಾ ವೆಚ್ಚದ 100ಕೋಟಿ ರೂ. ಬಳಸಿಕೊಳ್ಳಲಾಗುವುದು ಎಂದರು.  ಈಗಾಗಲೇ ಈ ಕಾಮಗಾರಿ ಅಧೀಕೃತವಾಗಿ ಆರಂಭಗೊಂಡಿದ್ದು, ಮುಂದಿನ ಒಂದು ವರ್ಷದ ಅವ ಧಿಯೊಳಗಾಗಿ ಪೂರ್ಣಗೊಳಿಸುವ ವಿಶ್ವಾಸವಿದೆ. ರೈತಸ್ನೇಹಿ ಯೋಜನೆ ಪೂರ್ಣಗೊಳಿಸುವಲ್ಲಿ ಅಗತ್ಯವಿರುವ ಅನುದಾನವನ್ನು ಕಾಯ್ದಿರಿಸಲಾಗಿದೆ. ಅಲ್ಲದೇ ನಬಾಡ್‌ ìನಿಂದ 500ಕೋಟಿ ರೂ. ಕಾಯ್ದಿರಿಸಲಾಗಿದೆ ಎಂದರು.

ತುಂಗಾನದಿಯ 250ಮೀ. ಅಗಲ ಎರಡೂ ಬದಿ ಸೇರುವವರೆಗೆ ಮೂರು ಮೀ. ಎತ್ತರದವರೆಗೆ ಬ್ಯಾರೇಜ್‌ ನಿರ್ಮಾಣ ಮಾಡಲಾಗುವುದು. ಈ ಯೋಜನೆಗಳಲ್ಲದೇ ಶಿವಮೊಗ್ಗ ತಾಲೂಕಿನ ಹೊಸಹಳ್ಳಿ, ಶಿಕಾರಿಪುರ ತಾಲೂಕಿನ ತಾಳಗುಂದ, ಉಡುಗುಣಿ ಮತ್ತು ಹೊಸೂರು, ಸೊರಬ ತಾಲೂಕಿನ ಮೂಗೂರು, ಮೂಡಿ ಮತ್ತು ಕಚವಿ ಏತನೀರಾವರಿ ಯೋಜನೆ, ಅಲ್ಲದೇ ನೆರೆಯ ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳ ಏತ ನೀರಾವರಿ ಯೋಜನೆಗಳಿಗೆ ಸುಮಾರು 2,500ಕೋಟಿ ರೂ. ಅನ್ನು ಸರ್ಕಾರ ಈಗಾಗಲೇ ಮಂಜೂರು ಮಾಡಿದ್ದು, ಕಾಮಗಾರಿ ಆರಂಭಗೊಂಡಿದೆ ಎಂದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಬೈಂದೂರಿನ ಸೌಕೂರು-ಸಿದ್ದಾಪುರ ಏತ ನೀರಾವರಿ ಯೋಜನೆ, ಬೈಂದೂರು ನಗರಕ್ಕೆ ನೀರು ಒದಗಿಸುವ
ಯೋಜನೆಯೂ ಪ್ರಗತಿಯಲ್ಲಿದೆ. ಶಿಕಾರಿಪುರ ತಾಲೂಕಿನ ಕಸಬಾ ಹೋಬಳಿಯ ಹಾಗೂ ಹಿರೇಕೇರೂರು ತಾಲೂಕಿನ ಸರ್ವಜ್ಞ ಏತ ನೀರಾವರಿ ಯೋಜನೆಗೆ ಶೀಘ್ರದಲ್ಲಿ
ಸರ್ಕಾರದಿಂದ ಅನುಮೋದನೆ ದೊರೆಯುವ ನಿರೀಕ್ಷೆ ಇದೆ. ಅಂತೆಯೇ ಹಾನಗಲ್‌ ತಾಲೂಕಿನಲ್ಲಿ 350ಕೋಟಿ ವೆಚ್ಚದ ಏತ ನೀರಾವರಿ ಯೋಜನೆಗೂ ಚಾಲನೆ ದೊರೆಯಲಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next