Advertisement

ನಾಳೆ ತುಮಕೂರು ವಿವಿ 14ನೇ ಘಟಿಕೋತ್ಸವ

09:36 PM Mar 04, 2021 | Team Udayavani |

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ 14ನೇ ಘಟಿಕೋತ್ಸವ ಸಮಾರಂಭ ವಿವಿಯ ಡಾ. ಶ್ರೀಶಿವಕುಮಾರಮಹಾಸ್ವಾಮೀಜಿ ಸಭಾಂಗಣದಲ್ಲಿ ಮಾ.5 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ಈಬಾರಿಯ ಘಟಿಕೋತ್ಸವದಲ್ಲಿ ಒಟ್ಟು 9853ಅಭ್ಯರ್ಥಿಗಳು ಪದವಿ ಸ್ವೀಕರಿಸಲು ಅರ್ಹರಾಗಿದ್ದಾರೆಎಂದು ವಿವಿ ಕುಲಪತಿ ಡಾ. ಸಿದ್ದೇಗೌಡ ತಿಳಿಸಿದರು.

Advertisement

ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಟ್ಯ,ಸಮಾಜ ಸೇವೆ ಹಾಗೂ ಇತಿಹಾಸ ವಿಭಾಗದಲ್ಲಿಸಾಧನೆಗೈದಿರುವ ಮೂರು ಅಭ್ಯರ್ಥಿಗಳಿಗೆ ಡಿ.ಲಿಟ್‌ಪದವಿ, 145 ಅಭ್ಯರ್ಥಿಗಳಿಗೆ ಪಿಹೆಚ್‌ಡಿ ಪದವಿ,1,716 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ7,992 ಅಭ್ಯರ್ಥಿಗಳಿಗೆ ಸ್ನಾತಕ ಪದವಿ ಪ್ರದಾನಮಾಡಲಾಗುವುದು ಎಂದರು.ವಿಶ್ವವಿದ್ಯಾಲಯವು ಎಲ್ಲ ಸ್ನಾತಕೋತ್ತರಪದವಿಗಳಿಗೆ ತಲಾ 5 ರ್‍ಯಾಂಕ್‌ಗಳನ್ನು, ಸೆಮಿಸ್ಟರ್‌ಪದ್ಧತಿಗಳಿಗೆ ತಲಾ 10 ರ್‍ಯಾಂಕ್‌, ಬಿಎಫ್ಎ 1 ರ್‍ಯಾಂಕ್‌,ಬಿ.ವೊಕ್‌-3, ಬಿಸಿಎಗೆ 5 ಹಾಗೂ ಬಿಎ ಇಂಟಿಗ್ರೇಟೆಡ್‌ಕನ್ನಡ ಪಂಡಿತ್‌ಗೆ 2 ರ್‍ಯಾಂಕ್‌ ಘೋಷಿಸಲಾಗಿದೆ. ಒಟ್ಟು73 ವಿದ್ಯಾರ್ಥಿಗಳಿಗೆ 92 ಚಿನ್ನದ ಪದಕಗಳು ಹಾಗೂ 6ನಗದು ಬಹುಮಾನಗಳನ್ನು ಈ ಬಾರಿಯಘಟಿಕೋತ್ಸವದಲ್ಲಿ ವಿವಿಯು ಪ್ರದಾನ ಮಾಡಲಿದೆ ಎಂದರು.

ಮಾ. 5 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ14ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಿವಿ ಕುಲಾಧಿಪತಿಗಳೂ ಆಗಿರುವರಾಜ್ಯಪಾಲರಾದ ವಜುಭಾಯಿರೂಢಾಬಾಯಿವಾಲಾ ವಹಿಸುವರು. ಡಿಸಿಎಂ ಹಾಗೂ ವಿವಿಸಮಕುಲಾಧಿಪತಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ್ನಾರಾಯಣ ಉಪಸ್ಥಿತರಿರುವರು.

ರಾಜಸ್ಥಾನ ಕೇಂದ್ರೀಯ ವಿವಿ ಕುಲಾಧಿಪತಿಗಳಾದ ಡಾ.ಕೃಷ್ಣಸ್ವಾಮಿ, ಕಸ್ತೂರಿರಂಗನ್‌ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡುವರು. ತುಮಕೂರು ವಿವಿ ಕುಲಪತಿ ಡಾ.ಸಿದ್ಧೇಗೌಡ ಅವರು ವಿಶ್ವವಿದ್ಯಾಲಯದ ವಾರ್ಷಿಕವರದಿ ಮಂಡಿಸುವರು ಎಂದು ತಿಳಿಸಿದರು.ಈ ಬಾರಿಯ ಗೌರವ ಡಾಕ್ಟರೇಟ್‌ ಪದವಿಗಾಗಿ 17ಮಂದಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ 5 ಜನರನ್ನು ವಿವಿಸಿಂಡಿಕೇಟ್‌ ಸಮಿತಿ ಆಯ್ಕೆ ಮಾಡಿ ಅನುಮೋದನೆಗಾಗಿರಾಜ್ಯಪಾಲರಿಗೆ ಕಳುಹಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next