Advertisement

ಸ್ಮಾರ್ಟ್‌ಸಿಟಿ ನಗರಕ್ಕೆಖಾಲಿ ನಿವೇಶನಗಳೇ ಕಂಟಕ

03:23 PM Jul 13, 2021 | Team Udayavani |

ಚಿ.ನಿ.ಪುರುಷೋತ್ತಮ್‌

Advertisement

ತುಮಕೂರು: ಸಾವಿರಾರು ಖಾಲಿ ನಿವೇಶನ. ಈ ನಿವೇಶನದಲ್ಲಿ ಬೆಳೆದ ಗಿಡ ಗಂಟಿಗಳಲ್ಲಿ ವಿಷಪೂರಿತ ಹಾವುಗಳು. ಜನವಸತಿ ಪ್ರದೇಶದ ಖಾಲಿ ನಿವೇಶನ ಗಳಲ್ಲಿಯೂ ತುಂಬಿ ಹೋಗಿರುವ ಕಸ, ಕಡ್ಡಿ ಕೋಳಿ ತ್ಯಾಜ್ಯ. ದುರ್ನಾತದ ಜತೆಯಲ್ಲೇ ಜನತೆಯ ನಿತ್ಯ ಜೀವನ… ಈ ಸಮಸ್ಯೆಗಳೆಲ್ಲಾ ಇರುವುದು ಬೇರೆಲ್ಲೂ ಅಲ್ಲ, ಶೈಕ್ಷಣಿಕ ನಗರ ಹಾಗೂ ಸ್ಮಾರ್ಟ್‌ಸಿಟಿ ನಗರಗಳ ಪಟ್ಟಿಗೆ ಸೇರ್ಪಡೆಯಾಗಿರುವ ತುಮಕೂರು ನಗರದಲ್ಲಿ.

ಕಿರಿಕಿರಿ:ರಾಜಧಾನಿ ಬೆಂಗಳೂರಿಗೆ ಹೆಬ್ಬಾಗಿಲಾಗಿರುವ ತುಮಕೂರು ನಗರ ಸ್ವತ್ಛತೆಯಲ್ಲಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಈಗ ಮೊದಲನೇ ಸ್ಥಾನದ ಪ್ರಯತ್ನದಲ್ಲಿ ಇರುವ ಸ್ಮಾರ್ಟ್ ಸಿಟಿ ನ‌ಗರದಲ್ಲಿನ ಖಾಲಿ ನಿವೇಶನ ಗಳು ಜನ ಸಾಮಾನ್ಯರಿಗೆ ಕಿರಿಕಿರಿಯನ್ನುಂಟು ಮಾಡಿವೆ. ನಗರ ಹೊರವಲಯದ ಜನವಸತಿ ಪ್ರದೇಶದ ಜನ ನಿತ್ಯವೂ ಸುಟ್ಟ ಕೆಟ್ಟ ವಾಸನೆ, ನಿವೇಶನಗಳಲ್ಲಿ ವಾಸವಾಗಿರುವ ಹಾವುಗಳು, ದುರ್ವಾಸನೆ ಒಂದಲ್ಲ, ಎರಡಲ್ಲ ಹತ್ತಾರು ಸಮಸ್ಯೆ ನಿತ್ಯಕಾಡುತ್ತಿದೆ. ಗಿಡ-ಗಂಟಿ:ಹಣವಂತರು ತಮ್ಮ ಹಣವನ್ನು ದ್ವಿಗುಣಗೊಳಿಸಲು ನಗರದ ವಿವಿಧ ಬಡಾವಣೆಗಳಲ್ಲಿ ನಿವೇಶನ ಖರೀದಿಸಿ ದ್ದಾರೆ.

ಇನ್ನು ಬೆಂಗಳೂರು ಸೇರಿ ವಿವಿಧ ಭಾಗಗಳ ನಿವಾಸಿಗಳು ನಗರದಲ್ಲಿ ನಿವೇಶನ ಖರೀದಿಸಿದ್ದಾರೆ. ಆದರೆ, ನಿವೇಶನ ಖರೀದಿಸುವಾಗ ಬಂದವರು, ಮತ್ತೆ ಅತ್ತ ತಲೆ ಹಾಕುತ್ತಿಲ್ಲ. ಹೀಗಾಗಿ ಮನೆಗಳ ಪಕ್ಕದಲ್ಲಿರುವ ಈ ನಿವೇಶನಗಳು ಅಲ್ಲಿಯ ನಿವಾಸಿಗಳಿಗೆ ಕಂಟಕ ಪ್ರಾಯವಾಗಿವೆ. ಇತ್ತ ಗಿಡ ಗಂಟಿಗಳು ಬೆಳೆದು ಪೊದೆಗಳು ನಿರ್ಮಾಣವಾಗಿವೆ. ನಗರದ ಸದಾಶಿವನಗರ, ಸರಸ್ವತಿಪುರಂ, ಸರಸ್ವತಿ ಪುರಂ 2ನೇ ಹಂತ ನೀಲಗಿರಿ ತೋಪಿನ ಪ್ರದೇಶ, ವಿದ್ಯಾ ನಿಕೇತನ ಶಾಲೆಯ ಸಮೀಪ, ಸಪ್ತಗಿರಿ ಬಡಾವಣೆ, ಜಯನಗರ, ಬಡ್ಡಿಹಳ್ಳಿ, ಕ್ಯಾತ್ಸಂದ್ರ, ಶ್ರೀನಗರ, ಬಂಡೇಪಾಳ್ಯ, ಶಿರಾ ಗೇಟ್‌, ಅರಳೀ ಮರದಪಾಳ್ಯ, ಭೀಮ್‌ ಸಂದ್ರ, ಗಂಗ ಸಂದ್ರ, ರಾಜೀವ್‌ ಗಾಂಧಿ ನಗರ, ಕುರಿ ಪಾಳ್ಯ, ಇಸ್ಮಾಯಲ್‌ ನಗರ, ಮರಳೂರು ದಿಣ್ಣೆ, ಶೆಟ್ಟಿಹಳ್ಳಿ ಸೇರಿದಂತೆ ನಗರದ ಹೊರವಲಯ ವಲ್ಲದೇ ನಗರದ ಪ್ರಮುಖ ಬಡಾವಣೆಯಲ್ಲಿಯೇ ನಿವೇಶನಗಳು ಖಾಲಿ ಇದ್ದು ಜನರಿಗೆ ತೊಂದರೆ ನೀಡುತ್ತಿವೆ.

ಸರಸ್ವತಿ ಪುರಂ 2ನೇ ಹಂತದಲ್ಲಿ ನೀಲಗಿರಿ ಮರಗಳು ಬೆಳೆದು ನಿಂತಿದ್ದು ಅನೈತಿಕ ಚಟುವಟಿಕೆ ತಾಣವಾಗಿದೆ. ಜತೆಗೆ ಮದ್ಯವ್ಯಸನಿಗಳ ಜಾಗವೂ ಇದಾಗಿದೆ. ಅಲ್ಲದೇ, ಸತ್ತ ನಾಯಿ ಹಂದಿ, ದನ ಕಸ ತಂದು ಹಾಕುತ್ತಿದ್ದು ದುರ್ನಾತ ಬೀರುತ್ತಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next