Advertisement

UPAನಿಂದ ರೈತರ 70 ಸಾವಿರ ಕೋಟಿ ಸಾಲ ಮನ್ನಾ, ಬಿಜೆಪಿಗೆ ಯಾಕೆ ಆಗಲ್ಲ!

05:05 PM Mar 16, 2017 | Team Udayavani |

ನವದೆಹಲಿ: ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ದಿನೇ, ದಿನೇ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಕಳೆದ 5 ವರ್ಷಗಳಿಂದ ಭೀಕರ ಬರಗಾಲವಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ 1 ಸಾವಿರ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ದೇಶದ ಬೆನ್ನೆಲುಬು ರೈತರ ಹಿತಾಸಕ್ತಿ ಯಾಕೆ ಕಾಪಾಡುತ್ತಿಲ್ಲ? ರೈತರ ಆತ್ಮಹತ್ಯೆ ಯಾವುದೇ ಸರ್ಕಾರಕ್ಕಾದರೂ ಅಪಮಾನಕರ. ರೈತರ ರಕ್ಷಣೆಗೆ ಸರ್ಕಾರ ಮುಂದಾಗಬೇಕೆಂದು ತುಮಕೂರು ಸಂಸದ ಎಸ್.ಪಿ.ಮುದ್ದಹನುಮೇಗೌಡ ಲೋಕಸಭೆ ಕಲಾಪದಲ್ಲಿ ಆಗ್ರಹಿಸಿದರು.

Advertisement

ಗುರುವಾರ ಲೋಕಸಭೆ ಕಲಾಪದ ಕೃಷಿ ಇಲಾಖೆ ಬೇಡಿಕೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಹಣಕಾಸು ಶಿಸ್ತು ಕಾಪಾಡಲು ರೈತರ ಸಾಲ ಮನ್ನಾ ಸರಿಯಲ್ಲ ಎಂದು ಎಸ್ ಬಿಐ ಅಧ್ಯಕ್ಷರು ಹೇಳಿದ್ದಾರೆ. ಆದರೆ ಕೇಂದ್ರ ಸರ್ಕಾರ ಕಾರ್ಪೊರೇಟ್ ವಲಯಕ್ಕೆ 6 ಲಕ್ಷ ಕೋಟಿ ರೂಪಾಯಿ ಇನ್ಸೆಂಟೀವ್ ನೀಡಿದೆ. ನಾವು ಪದೇ, ಪದೇ ಕೊಬ್ಬರಿ, ಅಡಕೆಗೆ ಬೆಂಬಲ ಬೆಲೆ ಹೆಚ್ಚಳಕ್ಕೆ ಮನವಿ ಮಾಡಿದ್ದೇವೆ. ಕೊಬ್ಬರಿ 1 ಕ್ವಿಂಟಾಲ್ ಗೆ 6,400 ರೂ. ಬೆಂಬಲ ಬೆಲೆ ಇದೆ. ಹೀಗಾಗಿ ಕೊಬ್ಬರಿ ಬೆಂಬಲ ಬೆಲೆ ಹೆಚ್ಚಿಸಬೇಕೆಂದು ಮನವಿ ಮಾಡಿಕೊಂಡರು.

ಕೇಂದ್ರ ಸರ್ಕಾರ ರೈತರ ರಕ್ಷಣೆಗೆ ಮುಂದಾಗಬೇಕೆಂದ ಮುದ್ದಹನುಮೇಗೌಡ, ಹಿಂದಿನ ಯುಪಿಎ ನೇತೃತ್ವದ ಮನಮೋಹನ್ ಸಿಂಗ್ ಸರ್ಕಾರ ರೈತರ 70 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಆದರೆ ಬಿಜೆಪಿ ನೇತೃತ್ವದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next