Advertisement
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಗೆ ಸಂಬಂಧಿಸಿದಂತೆ ಕರೆಯಲಾದ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಟ್ಟು 178 ಕಾಮಗಾರಿ ಗಳ ಪೈಕಿ 132 ಕಾಮಗಾರಿಗಳನ್ನು ಸುಮಾರು 462 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದ್ದು, ಪ್ರಗತಿಯ ಹಂತದಲ್ಲಿರುವ 50 ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
Related Articles
Advertisement
ನಿರ್ವಹಣೆಗೆ ಅವಕಾಶ: ಸ್ಮಾರ್ಟ್‌ಸಿಟಿ ಲಿಮಿಟೆಡ್ ವತಿಯಿಂದ ನಿರ್ಮಿಸಿರುವ ಉದ್ಯಾನವನಗಳನ್ನು ನಿರ್ವಹಣೆ ಮಾಡಲು ಸಂಘ-ಸಂಸ್ಥಗೆಳು, ವಿವಿಧ ಕಂಪನಿಗಳಿಂದ ಸಿಎಸ್‌ಆರ್ ಅನುದಾನ ದಲ್ಲಿ ನಿರ್ವಹಿಸಲು ಹಾಗೂ ಶಾಲಾ-ಕಾಲೇಜುಗಳೊಂದಿಗೆ ಮಾತನಾಡಿ, “ಸ್ಟೂಡೆಂಟ್ ಸೋಯಲ್ ರೆಸ್ಪಾನ್ಸಿಬಿಲಿಟಿ’ ಕಾರ್ಯಕ್ರಮದಡಿ ನಿರ್ವಹಣೆಗೆ ಅವಕಾಶ ಕಲ್ಪಿಸಕೊಡಲು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಶಾಸಕರು ಸೂಚಿಸಿದರು. ಸಭೆಯಲ್ಲಿ ಪಾಲಿಕೆ ಆಯುಕ್ತರಾದ ರೇಣುಕಾ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ವೀರಭದ್ರಯ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿ ಗಳು ಉಪಸ್ಥಿತರಿದ್ದರು.
ಕಟ್ಟಡಗಳ ವಾಸ್ತವಿಕ ಸ್ಥಿತಿ ಅರಿವಿರಲಿಪಿಪಿಪಿ ಮಾದರಿಯಡಿ ಸರ್ಕಾರಿ ಕಟ್ಟಡಗಳ ಮೇಲೆ ಅಳವಡಿಸುತ್ತಿರುವ ಸೋಲಾರ್ ರೂಫ್ಟಾಪ್ ಕಾಮಗಾರಿಯನ್ನು ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ಅಳವಡಿಸುವುದು ಸೂಕ್ತವಲ್ಲ. ಕೆಲವೊಂದು ಕಟ್ಟಡಗಳು ಹಳೆಯದಾಗಿದೆ. ಸದರಿ ವ್ಯವಸ್ಥೆಯನ್ನು ಅಳವಡಿಸುವುದರಿಂದ ಕಟ್ಟಡದ ಚಾವಣಿಗಳು ಹಾಳಾಗಬಹು ದಾಗಿದ್ದು, ಕಟ್ಟಡಗಳ ವಾಸ್ತವಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಾಮಗಾರಿ ಕೈಗೊಳ್ಳುವಂತೆ ಮತ್ತು ಸೋಲಾರ್ ರೂಫ್ಟಾಪ್ ಅಳವಡಿಸಿರುವ ಕಟ್ಟಡಗಳಲ್ಲಿ ನೀರು ಹರಿದು ಹೋಗುವ ವ್ಯವಸ್ಥೆ ಕಲ್ಪಿಸುವಂತೆ ಸಭೆಯಲ್ಲಿ ಉಪಸ್ಥಿತರಿದ್ದಂತಹ ಸಂಸದ ಜಿ.ಎಸ್. ಬಸವಾರಾಜು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ನಿರ್ಮಿಸಿರುವ ಕನ್ಸರ್ವೆನ್ಸಿ ಜಾಗವನ್ನು ಬಳಸಿಕೊಳ್ಳುವ ಸಂಬಂಧ ಪಾಲಿಕೆ ವತಿಯಿಂದ ಶುಲ್ಕವನ್ನು ನಿಗದಿಪಡಿಸಿ ಗುತ್ತಿಗೆ ನೀಡಲು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈಗಾಗಲೇ ನಿರ್ಣಯಿಸಲಾಗಿದ್ದು, ಅವಶ್ಯಕತೆ ಇರುವ ರಸ್ತೆಗಳಲ್ಲಿ ಕನ್ಸರ್ವೆನ್ಸಿ ಪಾರ್ಕಿಂಗ್ ಜಾಗಗಳನ್ನು ಬಳಸಿ ಕೊಳ್ಳಲು ದರ ನಿಗದಿಪಡಿಸಿ ಒಂದೇ ಪ್ಯಾಕೇಜಿನಂತೆ ಟೆಂಡರ್ ಕರೆಯಬೇಕು. ●ಜಿ.ಬಿ.ಜ್ಯೋತಿಗಣೇಶ್, ಶಾಸಕ