Advertisement

Tumakuru: ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣು

11:40 PM Nov 26, 2023 | Team Udayavani |

ತುಮಕೂರು: ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭಾನುವಾರ ಸದಾಶಿವ ನಗರದಲ್ಲಿ ನಡೆದಿದೆ. ಸಾವಿಗೀಡಾದವರು ಗರೀಬ್ ಸಾಬ್, ಸುಮಯ್ಯ, ಹಾಜಿರಾ, ಮೊಹಮ್ಮದ್ ಸುಭಾನ್, ಮೊಹಮ್ಮದ್ ಮುನೀರ್ ಎಂದು ತಿಳಿದು ಬಂದಿದೆ.

Advertisement

ಸಾವಿಗೂ ಮುನ್ನ ಗರೀಬ್ ಸಾಬ್ ದೊಡ್ಡಮ್ಮನಿಗೆ ಡೆತ್ ನೋಟ್ ಬರೆದಿದ್ದಾರೆ‌. ದೊಡ್ಡಮ್ಮನಿಗೆ ನಮಸ್ಕಾರಗಳು. ನಮಗೆ ಸಾಲ ಹೆಚ್ಚಾಗಿದೆ. ವ್ಯಾಪಾರದಲ್ಲಿ ಲಾಭ ಇಲ್ಲ. ಕೆಲಸಕ್ಕೆ ಹೋದರೆ ಹಣ ಬರ್ತಿಲ್ಲ.ಹೀಗಾಗಿ ಸಂಸಾರ ಮಾಡೋದು ಕಷ್ಟವಾಗಿದೆ.ಊಟ ಮಾಡೋಕು ಕಷ್ಟ ಆಗಿದೆ. ಊರಲ್ಲಿದ್ದಾಗ ಹೆಂಡತಿ ಅಣ್ಣ ಸಾದಿಕ್, ಹೆಂಡತಿಯ ತಂಗಿ ಯಾಸಿನ್ ನಮ್ಮ ಮೇಲೆ ವಿಷ ಕಾರಿದ್ದರು. ಅದಕ್ಕೆ ನಾವು ಇಲ್ಲಿಗೆ ಬಂದಿದ್ದೇವೆ. ಇಲ್ಲಿ ಸಾಲ ಕಟ್ಟೋದು ಹೆಚ್ಚಾಗಿದೆ. ಬಾಡಿಗೆ ಮನೆಗೆ ನಲವತ್ತೈದು ಸಾವಿರ ಅಡ್ವಾನ್ಸ್ ಕೊಟ್ಟಿದ್ದೀವಿ. ಮೂರು ತಿಂಗಳ ಬಾಡಿಗೆ ಕೊಡೋದು ಬಾಕಿಯಿದೆ.

ಉಳಿದ ಹಣವನ್ನ ನಮ್ಮ ದೊಡ್ಡಮ್ಮನಿಗೆ ವಾಪಾಸು ಕೊಡಿ.ಮನೆ ವಸ್ತುಗಳನ್ನ ನೀವು ತಗೋಳಿ.ಹದಿನೈದು ಸಾವಿರ ಹಣವನ್ನ ಜರಿನಾ ಆಂಟಿಗೆ ಕೊಡಿ. ನಮ್ಮ ಬೈಕ್ ನ ನಮ್ಮ ಹಿರಿಯಣ್ಣ ಅಜಾಜ್ ಗೆ ಕೊಡಿ. ಅತ್ತಿಗೆ ಪರ್ವೀನ್ ಮತ್ತು ಅಣ್ಣನಿಗೆ ಫೋನ್ ಕೊಡಿ. ದೊಡ್ಡಮ್ಮ ನೀವು ಬೇಕಾದ ವಸ್ತುಗಳನ್ನ ಇಟ್ಟುಕೊಳ್ಳಬಹುದು ಅಥವಾ ಮಾರಿಕೊಳ್ಳಬಹುದು. ತುಂಬಾ ವಿಷಯ ಇದೆ. ಆದ್ರೆ ಇದರಲ್ಲಿ ಬರೆಯೋಕಾಗಲ್ಲ. ಈ ಪತ್ರವನ್ನ ಪೊಲೀಸರಿಗೆ ತೋರಿಸಿ ಎಂದು ಬರೆಯಲಾಗಿದೆ.

ಮತ್ತರ್ ಮಾಮನಿಗೆ ಕೊನೆಯ ನಮಸ್ಕಾರಗಳು. ನಮಗೆ ಊಟಕ್ಕೆ ಅಕ್ಕಿ ಕೊಟ್ಟಿದ್ದೀರಾ, ಅದಕ್ಕೆ ನಿಮಗೆ ಮೆಳೇಕೋಟೆಯಲ್ಲಿರೋ ಅಂಗಡಿಯಲ್ಲಿರೋ ಸಾಮಾನುಗಳು ಮತ್ತೆ ಅದರಲ್ಲಿ ಐದು ಸಾವಿರ ಇಟ್ಟಿದ್ದೀವಿ. ಒಂದು ತಿಂಗಳು ಬಾಡಿಗೆ 2000 ರೂ. ಕೊಡಬೇಕು. ಸದಾಶಿವನಗರದ ಮೂರನೇ ಬಿ ಮುಖ್ಯರಸ್ತೆಯಲ್ಲಿರುವ ನಾವು ವಾಸಿಸುವ ಮನೆಯ ಕೆಳಗಿನವರು ನಮಗೆ ತುಂಬಾ ಕಾಟ ಕೊಟ್ಟಿದ್ದಾರೆ.
ನಮಗೆ ಯಾರಾದರೂ ಸಹಾಯ ಮಾಡಿದರೆ ಅವರಿಗೆ ಇಲ್ಲಸಲ್ಲದನ್ನ ಹೇಳ್ತಿದರು. ನಾವು ಅವರು ಹೇಳಿದಂತೆ ಕೇಳಬೇಕಿತ್ತು. ಇಲ್ಲವಾದರೆ ಅವರು ನಮ್ಮ ಜತೆ ಜಗಳ ಮಾಡುತಿದ್ದರು.ಶಬಾನಾ ನಮಗೆ ಏಳು ತಿಂಗಳ ಹಣ ಕೊಟ್ಟಿರಲಿಲ್ಲ. ಹಣ ಕೇಳಿದ್ದಕ್ಕೆ ನಮ್ಮ ಮೇಲೆ ವಿಷ ಕಾರುತ್ತಿದ್ದಾಳೆ. ನಮ್ಮ ಸಾವಿಗೆ ಐದು ಜನರೇ ಕಾರಣ. ನಮ್ಮ ಮನೆಯ ಕೆಳಗಿನ ಖಲಂದರ್, ಅವನ ಮಗಳು ಸಾನಿಯಾ,ಅವನ ಹಿರಿಯ ಮಗ, ಮಹಡಿ ಮನೆಯ ಶಬಾನಾ, ಮತ್ತು ಅವಳ ಮಗಳು ಸಾನಿಯಾ ಈ ಎಲ್ಲರೂ ನಮ್ಮ ಸಾವಿಗೆ ಕಾರಣ ಎಂದು ಬರೆಯಲಾಗಿದೆ.

ನಮ್ಮ ಸಾವಿಗೆ ಗೃಹ ಮಂತ್ರಿ ಸರ್ ಕಾನೂನು ರೀತಿ ಶಿಕ್ಷೆ ಕೊಡಬೇಕು ಎಂದು ಬೇಡಿಕೊಳ್ತೀನಿ.ಇವರ ಕಾಟಕ್ಕೆ ನಮ್ಮ ಪ್ರಾಣ ಕೊಟ್ಟಿದ್ದೇವೆ. ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕೈ ಮುಗಿದು ಕೇಳಿಕೊಳ್ಳುತ್ತೇವೆ. ನಮ್ಮ ದೇಹವನ್ನ ಪೋಸ್ಟ್ ಮಾರ್ಟಮ್ ಮಾಡಬೇಕು. ಇನ್ನೂ ವಿಷಯ ಫೋನ್ ನಲ್ಲಿದೆ. ಇಂತಿ ನಿಮ್ಮ ಗರೀಬ್ ಸಾಬ್, ಸುಮಯ್ಯ, ಹಾಜಿರಾ, ಮೊಹಮ್ಮದ್ ಸುಭಾನ್, ಮೊಹಮ್ಮದ್ ಮುನೀರ್ ಎಂದು ಬರೆಯಲಾಗಿದೆ.

Advertisement

ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next