ಕಾಪು: ತುಳುನಾಡಿನ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರ ಮತ್ತು ಸಂಸ್ಕಾರವನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಇದೇ ಮಾದರಿಯ ಕಾರ್ಯಕ್ರಮಗಳನ್ನು ಮಹಿಳೆಯರು ನಿರಂತರವಾಗಿ ಆಯೋಜಿಸಿಕೊಂಡು ಬರುವಂತಾಗಬೇಕು. ಮಾತ್ರವಲ್ಲದೇ ಇಂತಹ ಕಾರ್ಯಕ್ರಮಗಳಿಗೆ ಮುಂದಿನ ಪೀಳಿಗೆಯ ಯುವಜನರನ್ನೂ ಸೇರಿಸಿಕೊಳ್ಳಬೇಕು. ಆಗ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೂ ತಿಳಿಸಿಕೊಟ್ಟಂತಾಗುತ್ತದೆ ಎಂದು ದ.ಕ. ಜಿಲ್ಲಾ ಮೊಗವೀರ ಮಹಿಳಾ ಸಂಘದ ಅಧ್ಯಕ್ಷೆ ಸರಳಾ ಬಿ. ಕಾಂಚನ್ ಹೇಳಿದರು.
ಕಾಪು ನಾಲ್ಕುಪಟ್ಣ ಮೊಗವೀರ ಮಹಿಳಾ ಒಕ್ಕೂಟದ ವತಿಯಿಂದ ಉಚ್ಚಿಲ ಮಹಾಲಕೀÒ$¾ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಆಟಿಡೊಂಜಿ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧರ ಕರ್ಕೇರ ಹೊಸಬೆಟ್ಟು ಮಾತನಾಡಿ, ಕಾಪು ನಾಲ್ಕು ಪಟ್ಣ ಮೊಗವೀರ ಮಹಿಳಾ ಒಕ್ಕೂಟವು ಅತ್ಯಂತ ಮಾದರಿಯಾದ ರೀತಿಯಲ್ಲಿ “ಆಟಿಡೊಂಜಿ’ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದೆೆ. ಇದನ್ನೇ ಮಾದರಿಯಾಗಿಟ್ಟುಕೊಂಡು ಇತರೆಲ್ಲಾ ಕಡೆಗಳಲ್ಲೂ ಆಟಿಡೊಂಜಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ನಮಗೆ ಹೆಮ್ಮೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ದ.ಕ. ಜಿಲ್ಲಾ ಮೀನು ಮಾರಾಟ ಮಹಾ ಮಂಡಳಿಯ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಶುಭಾಶಂಸನೆಗೈದರು.
ದ.ಕ. ಮೊಗವೀರ ಹಿತಸಾಧನಾ ವೇದಿಕೆಯ ಅಧ್ಯಕ್ಷ ಸರ್ವೋತ್ತಮ ಕುಂದರ್ ಪೊಲಿಪು, ಕಾರ್ಯದರ್ಶಿ ವಿಶ್ವನಾಥ ಕೂರಾಡಿ, ಕೋಶಾಧಿಕಾರಿ ಎನ್. ಡಿ. ಬಂಗೇರ, ಮೊಗವೀರ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ಭರತ್ ಕುಮಾರ್, ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಶರತ್ ಗುಡ್ಡೆಕೊಪ್ಲ, ಸಂಘದ ಸದಸ್ಯ ವೇದವ್ಯಾಸ ಬಂಗೇರ, ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಲಲಿತಾ ಸಾಲ್ಯಾನ್ ಉಪಸ್ಥಿತರಿದ್ದರು.
ಕಾಪು ನಾಲ್ಕು ಪಟ್ಣ ಮೊಗವೀರ ಮಹಿಳಾ ಒಕ್ಕೂಟದ ಅಧ್ಯಕ್ಷೆ ಯಶೋದಾ ಕುಂದರ್ ಸ್ವಾಗತಿಸಿದರು. ಕಾಪು ನಾಲ್ಕು ಪಟ್ಣ ಮೊಗವೀರ ಮಹಾಸಭಾದ ಅಧ್ಯಕ್ಷ ವೈ. ಗಂಗಾಧರ ಸುವರ್ಣ ಪ್ರಸ್ತಾವನೆಗೈದರು.
ಕಾರ್ಯದರ್ಶಿ ಸುನೀತಾ ಬಂಗೇರ ವರದಿ ವಾಚಿಸಿದರು. ಕೋಶಾಧಿಕಾರಿ ಕುಮುದಾ ಮೋಹನ್ ವಂದಿಸಿದರು. ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ನವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.