Advertisement

ನಮ್ಮ ತುಳು ಭಾಷೆ ಉಳಿಸಿ, ಬೆಳೆಸಿ: ದುರ್ಗಾ ಪ್ರಸಾದ ಶೆಟ್ಟಿ 

12:45 PM Aug 15, 2018 | |

ಸುಂಕದಕಟ್ಟೆ: ತುಳು ಭಾಷೆಗೆ 8,900 ವರ್ಷಗಳ ಇತಿಹಾಸವಿದೆ. ಹಿಂದಿನ, ಇಂದಿನ ತುಳು ಭಾಷೆಯ ಬಗ್ಗೆ ಸರಿಯಾದ ವಿಚಾರ ವಿಮರ್ಶೆ ಆಗಬೇಕಾಗಿದೆ. ಮಕ್ಕಳಲ್ಲಿ ತುಳು ಜಾಗೃತಿ, ಸಂಶೋಧನೆ ಆಗಬೇಕು. ತಮ್ಮ ಮಾತೃ ಭಾಷೆ ತುಳುವನ್ನು ಉಳಿಸಿ, ಬೆಳೆಸಿ ಎಂದು ಗುರುಪುರ ಗೋಳಿದಡಿಗುತ್ತು ಗಡಿಕಾರ ವರ್ದಮಾನ ದುರ್ಗಾಪ್ರಸಾದ ಶೆಟ್ಟಿ ಹೇಳಿದರು.

Advertisement

ಅವರು ಮಂಗಳವಾರ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿಪೂರ್ವ ಕಾಲೇಜು ಇದರ ವಿದ್ಯಾರ್ಥಿ ಸಂಘ ಮತ್ತು ತುಳು ಸಂಘದ ಜಂಟಿ ಆಶ್ರಯದಲ್ಲಿ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಸಭಾಭವನದಲ್ಲಿ ನಡೆದ ತುಳುನಾಡ ಪರ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾರ್ಯಕ್ರಮವನ್ನು ತುಳುಚಲನ ಚಿತ್ರ ನಿರ್ಮಾಪಕ ಮಹೇಂದ್ರ ಕುಮಾರ್‌ ಅವರು ಆಟಿಕಳಂಜದವರಿಗೆ ಕಳಸೆ ಭತ್ತ ದಾನ ನೀಡುವ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮೂಡಬಿದಿರೆ ಎಕ್ಸಲೆಂಟ್‌ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್‌ ಜೈನ್‌ ಅವರು ವಹಿಸಿದ್ದರು.

ಈ ಸಂದರ್ಭದಲ್ಲಿ ಥಂಡರ್‌ ಗೈಸ್‌ ಪ್ರತಿಷ್ಠಾನದ ಅಧ್ಯಕ್ಷ ಸೂರಜ್‌ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ವಿಶ್ವ ತುಳುವೆರೆ ಆಯನೊ ಕೂಟದ ಸಂಚಾಲಕ ಡಾ| ರಾಜೇಶ್‌ ಆಳ್ವ, ಮೂಡಬಿದಿರೆ ತುಳುಕೂಟದ ಅಧ್ಯಕ್ಷ ಚಂದ್ರಹಾಸ ದೇವಾಡಿಗ, ಉದ್ಯಮಿ ಸದಾಶಿವ ಪೂಜಾರಿ, ಮಜಲು ಮೂಡುಪೆರಾರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಡಿ.ಎಂ. ಕುಲಾಲ್‌, ಪಡುಪೆರಾರ ಗ್ರಾಮ ಪಂಚಾಯತ್‌ ಸದಸ್ಯ ಭಾಸ್ಕರ ಮಲ್ಲಿ, ನಾಗಬ್ರಹ್ಮ ಯುವಕ ಮಂಡಲ ಪಡುಪೆರಾರ ಇದರ ಅಧ್ಯಕ್ಷ ಶೇಖರ್‌ ಸಾಲ್ಯಾನ್‌, ಎಸ್‌. ಎನ್‌. ಎಸ್‌. ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ನಾರಾಯಣ ಎನ್‌. ಪೂಜಾರಿ, ಜ್ಯೋತಿ ನಾರಾಯಣ ಪೂಜಾರಿ, ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿಪೂರ್ವ ಕಾಲೇಜಿ ಪ್ರಾಂಶುಪಾಲೆ ಅಹಲ್ಯ ಕೆ., ಕಾಲೇಜಿನ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಭರತ್‌ ಎಸ್‌. ಕರ್ಕೇರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧನಂಜಯ ಹೆಗ್ಡೆ , ತುಳು ಸಂಘದ ಉಜ್ವಲ್‌, ಯೋಗಿನಿ, ಸನತ್‌, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಅಮೃತಾ, ಉಪಾಧ್ಯಕ್ಷೆ ಸ್ನೇಹ, ಕಾರ್ಯದರ್ಶಿ ಕಾರ್ತಿಕ್‌, ಉಪಾಧ್ಯಕ್ಷೆ ಮಮತಾ, ತುಳು ಪರ್ಬದ ಕಾರ್ಯದರ್ಶಿ ಲಕ್ಷ್ಮೀ ಉಪಸ್ಥಿತರಿದ್ದರು. 

ಕಾರ್ಯಕ್ರಮ ಸಂಯೋಜಕ ಹಾಗೂ ಉಪನ್ಯಾಸಕ ಸುಧಾಕರ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ಕವಿತಾ ಅಭಿನಂದನಾ ಭಾಷಣ ಮಾಡಿದರು. ಕಾರ್ಯಕ್ರಮವನ್ನು ಪುರುಷೋತ್ತಮ ಗೋಳಿಪಲ್ಕೆ ನಿರೂಪಿಸಿದರು. ತುಳು ಸಂಘದ ಕಾರ್ಯದರ್ಶಿ ಚರಣ್‌ ವಂದಿಸಿದರು.

Advertisement

ಸಾಧನೆ ಮುಖ್ಯ
ಇಲ್ಲಿ ಬಡತನ ವರವಾದರೂ ಸಾಧನೆ ಮುಖ್ಯವಾಗಿದೆ. ನಿರಂಜನ ಸ್ವಾಮೀಜಿಯವರ ಹೆಸರು ರಸ್ತೆಗೆ, ಅಕಾಡೆಮಿಗೆ ನೀಡಬೇಕು.
 - ದಯಾನಂದ ಕತ್ತಲ್‌ ಸಾರ್‌,
    ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next