Advertisement

Para Badminton ವಿಶ್ವ ಚಾಂಪಿಯನ್‌ಶಿಪ್‌: ಯತಿರಾಜ್‌, ಕೃಷ್ಣ, ಪ್ರಮೋದ್‌ಗೆ ಚಿನ್ನ

11:41 PM Feb 25, 2024 | Team Udayavani |

ಪಟ್ಟಾಯ (ಥಾಯ್ಲೆಂಡ್‌): ಭಾರತದ ಸುಹಾಸ್‌ ಯತಿರಾಜ್‌, ಪ್ರಮೋದ್‌ ಭಗತ್‌ ಮತ್ತು ಕೃಷ್ಣ ನಗರ್‌ ಅವರು ಪ್ಯಾರಾ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್‌ನ ತಮ್ಮ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

Advertisement

ವಿಶ್ವದ ಮೂರನೇ ರ್‍ಯಾಂಕಿನ ಯತಿರಾಜ್‌ ಎಸ್‌ಎಲ್‌4 ವಿಭಾಗದಲ್ಲಿ ಇಂಡೋನೇಶ್ಯದ ಫ್ರೆಡಿ ಸೆತಿಯಾವಾನ್‌ ಅವರನ್ನು 21-18, 21-18 ಗೇಮ್‌ಗಳಿಂದ ಉರುಳಿಸಿ ಚೊಚ್ಚಲ ವಿಶ್ವ ಪ್ರಶಸ್ತಿ ಗೆದ್ದರು. ಕರ್ನಾಟಕ ಮೂಲದ 40ರ ಹರೆಯದ ಯತಿರಾಜ್‌ 2007ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದಾರೆ.

ಟೋಕಿಯೊ ಪ್ಯಾರಾಲಿಪಿಂಕ್‌ ಚಿನ್ನ ವಿಜೇತ ಪ್ರಮೋದ್‌ ಭಗತ್‌ ಎಸ್‌ಎಲ್‌3 ವಿಭಾಗದಲ್ಜಿಲ ಇಂಗ್ಲೆಂಡಿನ ಡೇನಿಯಲ್‌ ಬೆಥೆಲ್‌ ಅವರನ್ನು 14-21, 21-15, 21-14 ಗೇಮ್‌ಗಳಿಂದ ಕೆಡಹಿದರು. ಅವರು ಚೀನದಲ್ಲಿ ನಡೆದಿದ್ದ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಮತ್ತು ಎರಡು ಕಂಚು ಜಯಿಸಿದ್ದರು. ಎಸ್‌ಎಚ್‌6 ವಿಭಾಗದಲ್ಲಿ ಕೃಷ್ಣ ನಗರ್‌ ಚೀನದ ಲಿನ್‌ ನೈಲಿ ಅವರನ್ನು 22-20, 22-20 ಗೇಮ್‌ಗಳಿಂದ ಸೋಲಿಸಿ ಚಿನ್ನ ಗೆದ್ದರು.

Advertisement

Udayavani is now on Telegram. Click here to join our channel and stay updated with the latest news.

Next