Advertisement

LS; 400 ಬಿಡಿ, ಕೊನೇ ಪಕ್ಷ 200ರಲ್ಲಿ ಗೆಲ್ಲಿ: ಬಿಜೆಪಿಗೆ ಮಮತಾ ಸವಾಲು

11:34 PM Mar 31, 2024 | Team Udayavani |

ಕೋಲ್ಕತಾ: ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಅಧಿಕ ಸ್ಥಾನಗಳನ್ನು ಗೆಲುವುದಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಹೇಳಿಕೊ ಳ್ಳುತ್ತಿದ್ದು, ಕೊನೇಪಕ್ಷ 200 ಕ್ಷೇತ್ರ ಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿ ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸವಾಲೊಡ್ಡಿದ್ದಾರೆ.

Advertisement

ಪಶ್ಚಿಮ ಬಂಗಾಲದ ಕೃಷ್ಣಾನಗರ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಮಹುವಾ ಮೊಯಿತ್ರಾ ಪರ ಪ್ರಚಾರದ ವೇಳೆ ಅವರು, “2021ರ ಪಶ್ಚಿಮ ಬಂಗಾಲ ವಿಧಾನಸಭೆ ಚುನಾವಣೆಯಲ್ಲೂ 200ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವುದಾಗಿ ಬಿಜೆಪಿ ನಾಯಕರು ಹೇಳಿಕೊಂಡಿದ್ದರು. ಆದರೆ ಗೆದ್ದದ್ದು 77 ಕ್ಷೇತ್ರಗಳಲ್ಲಿ’ ಎಂದರು.

ಪ.ಬಂಗಾಲದಲ್ಲಿ ಇಂಡಿಯಾ ಮೈತ್ರಿ ಇಲ್ಲ. ವಿಪಕ್ಷಗಳ ಒಕ್ಕೂಟಕ್ಕೆ ‘ಇಂಡಿಯಾ’ ಹೆಸರನ್ನು ನಾನೇ ಸೂಚಿಸಿದ್ದರೂ, ಕಾಂಗ್ರೆಸ್‌, ಸಿಪಿಎಂ ಪಕ್ಷಗಳು ಬಿಜೆಪಿ ಜತೆಗೆ ಕೈ ಜೋಡಿಸಿವೆ. ನೀವು ಕಾಂಗ್ರೆಸ್‌, ಸಿಪಿಎಂಗೆ ಮತನೀಡಿದರೆ, ಬಿಜೆಪಿಗೇ ನೀಡಿದಂತೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next