ಕೆಜಿಎಫ್: ಕರಾವಳಿಯ ವಿಭಿನ್ನ ಸಂಸ್ಕೃತಿ, ಆಚಾರ ವಿಚಾರಗಳು ಪ್ರಸಿದ್ಧವಾಗಿವೆ. ಕರಾವಳಿ ಜನ ಎಲ್ಲಿಗೇ ಹೋದರೂ ಅವರನ್ನು ತಮ್ಮ ಛಾಯೆಯನ್ನು ಬಿತ್ತರಿಸುತ್ತಾರೆ ಎಂದು ಸಾಹಿತಿ ಪುರುಷೋತ್ತಮ ಬಿಳಿಮಲೆ ಹೇಳಿದರು.
ಬೆಮಲ್‌ನಗರದ ಕರಾವಳಿ ಸಾಂಸ್ಕೃತಿಕ ಸಂಘವು ಹಮ್ಮಿಕೊಂಡಿದ್ದ 50ನೇ ವರ್ಷದ ಸಂಭ್ರಮಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕರಾವಳಿ ಜನರ ಪ್ರಮುಖ ಭಾಷೆಯಾದ ತುಳುವಿಗೆ ಸಲ್ಲಬೇಕಾದ ಸವಲತ್ತು ಸಿಕ್ಕಿಲ್ಲ. 8ನೇ ಪರಿಚ್ಚೇದದಲ್ಲಿ ಅದನ್ನು ಸೇರಿಸುವ ವಿಚಾರವಾಗಿ ರಾಜ್ಯದ ಸಂಸದರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ವಿಷಾದಿಸಿದರು.
ರಂಗ ಶಿಕ್ಷಕ ಜೀವನರಾಂಸುಳ್ಳು ರಂಗಮನೆ ಮಾತನಾಡಿ, ಸಾಂಸ್ಕೃತಿಕ ಪ್ರಜ್ಞೆ ಮಕ್ಕಳಲ್ಲಿ ಬೆಳೆಸಬೇಕು. ಇದರಿಂದಾಗಿ ವಿದ್ಯೆಯ ಜೊತೆಗೆ ಮಾನವೀಯತೆ ಬೆಳೆಯುತ್ತದೆ ಎಂದರು. ಬೆಮಲ್ ಸಂಕೀ ರ್ಣದ ಕಾರ್ಯನಿರ್ವಾಹಕ ನಿರ್ದೇಶಕ ವಿ.ಈಶ್ವರಭಟ್, ಮಾನವ ಸಂಪನ್ಮೂಲ ಇಲಾಖೆಯ ನೆಹರೂಬಾಬು, ಕಾರ್ಮಿಕ ಸಂಘದ ಅಧ್ಯಕ್ಷ ಆಂಜನೇಯರೆಡ್ಡಿ, ನಾಗೇಶ್ ಪ್ರಭು, ರಾಜೀವಾಕ್ಷ ಸರಳಾಯ ಮಾತನಾಡಿದರು.
ಇದನ್ನೂ ಓದಿ:- ಜೋಯಿಡಾ : ರೈತರಿಗೆ ಒಂದು ಕಡೆ ಮಳೆಯ ಸಮಸ್ಯೆಯಾದರೆ ಇನ್ನೊಂದೆಡೆ ಆನೆಗಳ ಹಾವಳಿ
ಸಾಧಕರಾದ ಸಬಿತಾ ಮೋನಿಸ್, ತಬಸ್ಸುಮ್, ರವಿ ಕಟಪಾಡಿ, ಅಚ್ಯುತ, ಕೆ.ಲಕ್ಷ್ಮಣಕುಮಾರ್, ಕೆ.ಗಂಗಾಧರ, ರಾಮಚಂದ್ರ ಮುಲ್ಕಿ, ಧರ್ಮೇಂದ್ರ ಆಚಾರ್ಯ, ಕೆ.ಶೀನಶೆಟ್ಟಿ, ಸಂಗೀತ, ಫ್ರೋರಾ ಅಚ್ಯುತ, ಶಕೀಲಾ ಮುಲ್ಕಿ ಅವರನ್ನು ಸನ್ಮಾನಿಸಲಾಯಿತು. ಮುಲ್ಕಿಯ ವಿನಾಯಕ ಯಕ್ಷ ಕಲಾ ತಂಡದಿಂದ ಕದಂಬ ಕೌಶಿಕೆ ಪ್ರದರ್ಶನಗೊಂಡಿತು.