ಮಾ. 17ರಂದು ಮಧ್ಯಾಹ್ನ ತುಳು ವೆಲ್ಫೆàರ್ ಅಸೋಸಿಯೇಶನ್ ಡೊಂಬಿವಲಿ ಇದರ ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿಯ ವತಿಯಿಂದ ಸಂಸ್ಥೆಯ ಕಚೇರಿಯಲ್ಲಿ ನಡೆದ ದಾಸರ ಭಜನಾ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಿಸರದ ತುಳು-ಕನ್ನಡಿಗರು ಸಂಸ್ಥೆಯ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿದಾಗ ಕಾರ್ಯಕ್ರಮಗಳನ್ನು ಆಯೋಜಿಸಲು ಹುಮ್ಮಸ್ಸು ಬರುತ್ತದೆ. ಇಂತಹ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹವಿರಲಿ ಎಂದು ನುಡಿದರು.
ಸಂಘದ ಗೌರವಾಧ್ಯಕ್ಷ ಯು. ಲಕ್ಷ್ಮಣ್ ಸುವರ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹೆಚ್ಚಿನ ತುಳು-ಕನ್ನಡಿಗರು ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಶ್ಲಾಘನೀಯ. ದಾಸ ಸಾಹಿತ್ಯಕ್ಕೆ ಇದು ನಮ್ಮ ಕಿರು ಕೊಡುಗೆ ಎಂದು ಭಾವಿಸಿದ್ದೇವೆ. ನಿಮ್ಮೆಲ್ಲರ ಸಹಕಾರ ದೊರಕಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ನುಡಿದು ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿ ಶುಭ ಹಾರೈಸಿದರು.
Advertisement
ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಸಿ. ಮೂಲ್ಯ, ಕೋಶಾಧಿಕಾರಿ ಪ್ರಕಾಶ್ ಅಮೀನ್, ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಶೆಟ್ಟಿ, ಸ್ಪರ್ಧೆಯ ತೀರ್ಪುಗಾರರರಾದ ನಿತ್ಯಪ್ರಕಾಶ್ ಎನ್. ಶೆಟ್ಟಿ, ವಾಸಂತಿ ಕುಲಕರ್ಣಿ, ಶಿಲ್ಪಾ ದೇಶ್ಪಾಂಡೆ ಹಾಗೂ ಇತರ ಪದಾಧಿಕಾರಿಗಳು, ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Related Articles
Advertisement
ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಸಿ. ಮೂಲ್ಯ ವಂದಿಸಿದರು. ವಿಜೇತ ಸ್ಪರ್ಧಿಗಳಿಗೆ ಗಣ್ಯರುಬಹುಮಾನ ವಿತರಿಸಿ ಶುಭ ಹಾರೈಸಿ ದರು. ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯ-ಸದಸ್ಯೆಯರು ಸಹಕರಿಸಿದರು. ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 5 ರಿಂದ 10 ವರ್ಷದೊಳಗಿನ ವಿಭಾಗದಲ್ಲಿ ಕೌಶಿಕ್ ಎಸ್. ರೈ ಪ್ರಥಮ, ವಿನಿಶಾ ಜೆ. ಶೆಟ್ಟಿ ದ್ವಿತೀಯ, ವೈಷ್ಣವಿ ವಿ. ರೈ ತೃತೀಯ, ಹಂಸಿನಿ ರಾವ್ ಸಮಾಧಾನಕರ ಬಹುಮಾನ ಪಡೆದರು. 11 ರಿಂದ 18 ವರ್ಷದೊಳಗಿನ ವಿಭಾಗದಲ್ಲಿ ಮಾನಸ ಬಂಗೇರ ಮತ್ತು ತೃಷಾ ಜೆ. ಆಳ್ವ ಪ್ರಥಮ, ಆತ್ಮಿಕಾ ಬಿ. ರೈ ದ್ವಿತೀಯ, ಆಶಿಕಾ ಎಸ್. ಪ್ರಭು ತೃತೀಯ, ರತನ್ ಎಸ್. ಪ್ರಭು ಸಮಾಧಾನಕರ ಬಹುಮಾನ ಗಳಿಸಿದರು. 18 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಅಶೋಕ್ ಮೆಂಡನ್ ಪ್ರಥಮ, ಮಾಧವ ಮೊಗವೀರ ಮತ್ತು ಸುನೀತಾ ಶೆಟ್ಟಿ ದ್ವಿತೀಯ, ಅರ್ಚನಾ ತಡಕೋಡ ತೃತೀಯ, ಸವಿತಾ ಭಟ್ ತೃತೀಯ ಬಹುಮಾನ ಗಳಿಸಿದರು.