ನಾಸಿಕ್: ತುಳು ಸೇವಾ ಸಂಘ ನಾಸಿಕ್ ಇದರ ವಾರ್ಷಿಕ ಕ್ರೀಡಾಕೂಟವು ಡಿ. 22 ಮತ್ತು ಡಿ. 23 ರಂದು ನಾಸಿಕ್‌ನ ಸಿಬಿಎಸ್ ಇಲ್ಲಿ ವೈವಿಧ್ಯಮಯ ಕ್ರೀಡಾಸ್ಪರ್ಧೆಗಳೊಂದಿಗೆ ತುಳು ಸೇವಾ ಸಂಘ ನಾಸಿಕ್ ಇದರ ಅಧ್ಯಕ್ಷ ಎಡೆ¾àರು ಭಾಸ್ಕರ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ನಡೆಯಿತು.
ಕ್ರೀಡಾಕೂಟವನ್ನು ಅತಿಥಿಗಳಾಗಿ ಆಗಮಿಸಿದ ಶಂಕರ್ ಶೆಟ್ಟಿ ಮತ್ತು ಜಗದೀಶ್ ಶೆಟ್ಟಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಅಧ್ಯಕ್ಷ ಎಡೆ¾àರು ಭಾಸ್ಕರ್ ಶೆಟ್ಟಿ ಗೌರವ ಕಾರ್ಯದರ್ಶಿ ಸಂಜೀವ ಕೆ. ಬಂಗೇರ, ಗೌರವ ಕೋಶಾಧಿಕಾರಿ ಹರೀಶ್ ವಿ. ಶೆಟ್ಟಿ, ಮಹಿಳಾ ಸಮಿತಿಯ ಅಧ್ಯಕ್ಷೆ ಜಯಂತಿ ಅಳಪೆ ಅವರು ಉಪಸ್ಥಿತರಿದ್ದರು.
ವಿವಿಧ ವಯೋಮಿತಿಗೆ ಅನುಸಾರವಾಗಿ ವಿವಿಧ ಆಟೋಟ ಸ್ಪರ್ಧೆಗಳು ನಡೆದು. ಅಲ್ಲದೆ ತುಳು- ಕನ್ನಡಿಗರಿಗಾಗಿ ಕ್ರಿಕೆಟ್, ಕಬಡ್ಡಿ, ವಾಲಿಬಾಲ್ ಮತ್ತು ಮಹಿಳೆಯರಿಗೆ ತ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಮಹಿಳಾ ತ್ರೋಬಾಲ್‌ನಲ್ಲಿ ಶ್ರೀ ಕಟೀಲ್ ತಂಡ ಜಯಗಳಿಸಿದರೆ, ಶ್ರೀಸಾಯಿ ನಾಸಿಕ್‌ರೋಡ್ ತಂಡ ಎರಡನೇ ಸ್ಥಾನ ಪಡೆಯಿತು.
ಕ್ರಿಕೆಟ್ ಪಂದ್ಯಾಟದಲ್ಲಿ ಓಂಕಾರ್ ಬಾಯ್ಸ… ತಂಡವು ವಿಜಯಿಯಾದರೆ, ಇಂದಿರಾ ನಗರ ತಂಡ ಎರಡನೇ ಸ್ಥಾನ ಗಳಿಸಿತು. ವಾಲಿಬಾಲ್‌ನಲ್ಲಿ ನಾಸಿಕ್ ರೋಡ್ ತಂಡ ಜಯಗಳಿಸಿದರೆ, ಓಂಕಾರ್ ತಂಡ ರನ್ನರಪ್ ಸ್ಥಾನ ಗಳಿಸಿತು. ರೋಮಾಂಚನಕಾರಿಯಾಗಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ನಾಸಿಕ್ ರೋಡ್ ತಂಡ ವಿಜಯಗಳಿಸಿದರೆ, ಓಂಕಾರ್ ತಂಡ ದ್ವಿತೀಯ ಸ್ಥಾನ ಪಡೆಯಿತು.
ಎರಡು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ನೀರು- ಚಾ ತಿಂಡಿ- ಊಟದ ವ್ಯವಸ್ಥೆಯನ್ನು ಕ್ರಮವಾಗಿ ಉದ್ಯಮಿಗಳಾದ ರಾಮಚಂದ್ರ ಶೆಟ್ಟಿ, ಸಂಜೀವ ಕೆ. ಬಂಗೇರ ಹಾಗೂ ಉದಯ ಶೆಟ್ಟಿ ಇವರು ಪ್ರಾಯೋಜಿಸಿದ್ದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದವರು, ಕ್ರೀಡಾಭಿಮಾನಿಗಳು ಕ್ರೀಡೋತ್ಸವದ ಯಶಸ್ಸಿಗೆ ಸಹಕರಿಸಿದರು.
ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲರನ್ನು ಮೊಹಮದ್ ಶೇಖ್ ಸಾಹೇಬ್ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಪ್ರದೀಪ್ ರೈ ವಂದಿಸಿದರು. ಸಂಘದ ಸದಸ್ಯ ಬಾಂಧವರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡೋತ್ಸವದ ಯಶಸ್ಸಿಗೆ ಸಹಕರಿಸಿದರು.