Advertisement

ತುಳು ಸಂಘ ಬೊರಿವಲಿ: ಎಂಟನೇ ವಾರ್ಷಿಕೋತ್ಸವಕ್ಕೆ ಚಾಲನೆ

04:23 PM Dec 04, 2018 | Team Udayavani |

ಮುಂಬಯಿ: ತುಳು ಸಂಘ ಬೊರಿವಲಿ ಇದರ ಎಂಟನೇ ವಾರ್ಷಿಕೋತ್ಸವ ಸಂಭ್ರಮವು ಡಿ. 2ರಂದು ಅಪರಾಹ್ನ 4.30ರಿಂದ  ಬೊರಿವಲಿ ಪಶ್ಚಿಮದ ಓಂ ಶಕ್ತಿ ಪಾರ್ಕ್‌ ದೇವಿದಾಸ್‌ ಲೇನ್‌, ಜ್ಞಾನ್‌

Advertisement

ಸಾಗರ್‌ ಆ್ಯಂಪಿ ಥಿಯೇಟರ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

ಸಂಘದ ಗೌರವಾಧ್ಯಕ್ಷ ವಿರಾರ್‌ ಶಂಕರ್‌ ಶೆಟ್ಟಿ ಅವರ ಅಧ್ಯಕ್ಷತೆ ಯಲ್ಲಿ ನಡೆದ ಸಮಾರಂಭಕ್ಕೆ ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ರಿಜೆನ್ಸಿ ಗ್ರೂಪ್‌ ಆಫ್‌ ಹೊಟೇಲ್ಸ್‌ ಇದರ ಸಿಎಂಡಿ ಕಡಂದಲೆ ಜಯರಾಮ ಎನ್‌. ಶೆಟ್ಟಿ ಅವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಸಾಧಕರು ಮತ್ತು ದಾನಿಗಳಾದ ಕಾಂದಿವಲಿ ಪೂರ್ವದ ಹೊಟೇಲ್‌ ಅವೆನ್ಯೂ ಮಾಲಕ ರಘುರಾಮ ಕೆ. ಶೆಟ್ಟಿ ಹಾಗೂ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ವಿರಾರ್‌ ಶಂಕರ್‌ ಬಿ. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಅಲ್ಲದೆ ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಷ, ಧಾರ್ಮಿಕ ಚಿಂತಕ ಶ್ರೀನಿವಾಸ ಪಿ. ಸಾಫಲ್ಯ, ರಂಗನಟ, ಸಂಘಟಕ ಗುಣಪಾಲ್‌ ಉಡುಪಿ ಮೀರಾರೋಡ್‌ ಇವರನ್ನು ಸತ್ಕರಿಸಲಾಯಿತು. ವಿರಾರ್‌ ಶಂಕರ್‌ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕಡಂದಲೆ ಜಯರಾಮ ಶೆಟ್ಟಿ ಅವರನ್ನು  ಗೌರವಿಸಿದರು.

ಬೊರಿವಲಿ ಮಹಿಷ ಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್‌ ಭಟ್‌ ಮುದ್ರಾಡಿ ಯವರು ಆಶೀರ್ವಚನ ನೀಡಿದರು. 

Advertisement

ಸಂಸ್ಥೆಯ ಅಧ್ಯಕ್ಷ ವಾಸು ಕೆ. ಪುತ್ರನ್‌, ಉಪಾಧ್ಯಕ್ಷ ಕರುಣಾಕರ ಎಂ. ಶೆಟ್ಟಿ, ಗೌರವ ಕಾರ್ಯದರ್ಶಿ ಕೃಷ್ಣರಾಜ್‌ ಸುವರ್ಣ, ಗೌರವ ಕೋಶಾಧಿಕಾರಿ ಹರೀಶ್‌ ಜಿ. ಮೈಂದನ್‌, ಜತೆ ಕಾರ್ಯದರ್ಶಿ ದಿವಾಕರ ಬಿ. ಕರ್ಕೇರ, ಜತೆ ಕೋಶಾಧಿಕಾರಿ ಟಿ. ವಿ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸವಿತಾ ಸಿ. ಶೆಟ್ಟಿ, ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್‌ ಎ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ತಿಲೋತ್ತಮಾ   ವೈದ್ಯ ಹಾಗೂ ಸಲಹೆಗಾರರುಗಳಾದ ಸಂಸದ ಗೋಪಾಲ್‌ ಸಿ. ಶೆಟ್ಟಿ, ಮುಂಡಪ್ಪ ಎಸ್‌. ಪಯ್ಯಡೆ, ಬಾಬು ಎಸ್‌. ಪೂಜಾರಿ, ದಾಮೋದರ ಸಿ. ಕುಂದರ್‌, ಶ್ರೀನಿವಾಸ ಸಾಫಲ್ಯ, ಪ್ರದೀಪ್‌ ಸಿ. ಶೆಟ್ಟಿ, ಸಿಎ ಶ್ರೀನಿವಾಸ ಪುತ್ರನ್‌ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸದಸ್ಯ ಬಾಂಧವರಿಂದ ಮತ್ತು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ನೃತ್ಯ ವೈವಿಧ್ಯ ಮತ್ತು  ಸಭಾ ಕಾರ್ಯಕ್ರಮದ ಬಳಿಕ ಅಭಿನಯ ಮಂಟಪ ಮುಂಬಯಿ ಇದರ ಪ್ರಬುದ್ಧ ಕಲಾವಿದರ ಕೂಡುವಿಕೆಯಲ್ಲಿ ಪುರ್ಸೊತ್ತಿಜ್ಜಿ ನಾಟಕ ಪ್ರದರ್ಶನಗೊಂಡಿತು.  

ಚಿತ್ರ-ವರದಿ : ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next