Advertisement

ತುಳು ಸಂಘ ಬರೋಡಾ: “ಓ ಮನಸೇ ತಲ್ಲಣಿಸದಿರು’ಕೃತಿ ಬಿಡುಗಡೆ

05:15 PM Jun 26, 2018 | Team Udayavani |

ಬರೋಡಾ: ಹೊರನಾಡಿನ ಹಿರಿಯ ಕನ್ನಡ ಲೇಖಕರ ಲ್ಲೊಬ್ಬರಾದ ಎಸ್ಕೆ ಹಳೆಯಂಗಡಿ ಅವರನ್ನು ಕಳೆದ 3-4 ದಶಕಗಳಿಂದ ಅವರ ಪತ್ರಿಕಾ ಲೇಖನಗಳಿಂದ ಬಹಳಷ್ಟು ಸಮೀಪದಲ್ಲಿ ಬಲ್ಲವ ನಾಗಿದ್ದೇನೆ. ಪ್ರಸ್ತುತ ಅವರ ದ್ವಿತೀಯ ಆಯ್ದ ಲೇಖನಗಳ ವಿನೂತನ ಸಂಕಲನ “ಓ ಮನಸೆ ತಲ್ಲಣಿಸದಿರು’ ಕೃತಿ ಬಿಡುಗಡೆಗೊಳಿಸುವ ಅವಕಾಶ ದೊರಕಿರುವುದು ನನಗೆ ಸಂತೋಷ ತಂದಿದೆ. ಎಸ್ಕೆ ಹಳೆಯಂಗಡಿ ಅವರೋರ್ವ ಅಪ್ಪಟ ಕನ್ನಡ ಸಾಹಿತ್ಯಪ್ರೇಮಿ. 84 ರ ಹರೆಯದಲ್ಲೂ ಅವರ ನಿರಂತರವಾದ ಬರವಣಿಗೆಯ ತುಡಿತ ಎಲ್ಲರಿಗೂ ಸ್ಫೂರ್ತಿ ಹಾಗೂ ಪ್ರೇರಣದಾಯಕವಾಗಿದೆ. ಅವರ ಈ ವಿನೂತನ ಕೃತಿಯು ಓದುಗರ ಮನ ಸೂರೆಗೊಳ್ಳುತ್ತದೆ. ಅವರ ಎಲ್ಲ ಲೇಖನಗಳು ಮಾನವೀಯ ಮೌಲ್ಯಾಧಾರಿತ ವೈಚಾರಿಕ ನೆಲೆಗಟ್ಟಿ ನಿಂದ ಕೂಡಿವೆ. ಇಲ್ಲಿದ ಅವರ ಚಿಂತನ-ಮಂಥನಗಳು ಸಂಪೂರ್ಣ ವಾಗಿ ಲೋಕ ಕಲ್ಯಾಣ ಕಾರಕ ವಾದವುಗಳು. ಅವರ ಆಧ್ಯಾತ್ಮಿಕ ಚಿಂತನೆ ಅವರ ವೈಯಕ್ತಿಕವಾದುದು. ಎಸ್ಕೆಹಳೆಯಂಗಡಿ ಅವರು ಬಾಬಾರನ್ನು ನಂಬುವಂತೆ, ಸ್ವಾಮಿ ವಿವೇಕಾನಂದರ ವಿಚಾರ ಧಾರೆಗಳಿಗೂ ಮಾರು ಹೋದವರು. ಎಸ್ಕೆ ವಿಚಾರಧಾರೆ ವೈಚಾರಿಕೆಯಿಂದ ಕೂಡಿದ್ದು, ಅಂಧಶ್ರದ್ಧೆ, ಮೂಢನಂಬಿಕೆ, ಜನರ ಮೌಡ್ಯವನ್ನು ಅವರು ಬಲವಾಗಿ ಖಂಡಿಸುತ್ತಾರೆ ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರು ನುಡಿದರು.

Advertisement

ಜೂ. 23 ರಂದು ಸ್ಥಳೀಯ ಗುಜ ರಾತ್‌ ರಿಫೈನರಿಯ ಕಮ್ಯುನಿಟಿ ಸಭಾಗೃಹದಲ್ಲಿ ತುಳು ಸಂಘ ಬರೋಡಾ ನಿಯೋಜಿತ ಹಿರಿಯ ಲೇಖಕ, ಪತ್ರಕರ್ತ, ಉದ್ಯಮಿ ಎಸ್ಕೆ ಹಳೆಯಂಗಡಿ ಅವರ ‘ಓ ಮನಸೇ ತಲ್ಲಣಿಸದಿರು’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಂಕಲನದ ಶೀರ್ಷಿಕೆಯ ಲೇಖನದಲ್ಲೇ ಸಂಕಲ್ಪಗಳ ದೊಡ್ಡ ಸಮೂಹವೇ ಮನಸ್ಸು. ಆದ್ದರಿಂದ ಮನಸ್ಸಿನ ಚಲನವಲನಗಳ ಬಗ್ಗೆ ನಾವು ನಾವೇ ಎಚ್ಚರ ವಹಿಸುವುದು ನಮಗೂ, ಸಮಾಜಕ್ಕೂ ಶ್ರೇಯಸ್ಕರ ವಾಗಿದೆ. ಮಾನವ ಮನಸ್ಸಿನ ಬಗ್ಗೆ ಅರ್ಥವತ್ತಾಗಿ ಎಸ್ಕೆ ಹಳೆಯಂಗಡಿ  ಬರೆದಿದ್ದಾರೆ. ಅವರ ವೈಚಾರಿಕ ಬರಹಗಳಿಗೆ ಅವರದ್ದೆ ಆದ ಭಾಷಾ ಶೈಲಿಯಿದ್ದು, ಇದು ಅವರ ಬರಹಗಳ ಮೌಲ್ಯವನ್ನು ಹೆಚ್ಚಿಸಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ತುಳು ಸಂಘದ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ ಬೆಳ್ತಂಗಡಿ ಅವರು ವಹಿಸಿ ಆರಂಭದಲ್ಲಿ ಅತಿಥಿ-ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತ
ನಾಡಿದರು. ಗೌರವಾಧ್ಯಕ್ಷ ದಯಾ ನಂದ ಬೋಂಟ್ರಾ ಹಾಗೂ ಎಸ್‌. ಜಯರಾಮ ಶೆಟ್ಟಿ ಅವರು ಅತಿಥಿಗಳನ್ನು ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆಯನ್ನಿತ್ತು ಗೌರವಿಸಿದರು. ಸಾಹಿತಿ ಎಸ್ಕೆ ಹಳೆಯಂಗಡಿ ಅವರು ತನ್ನ ಕೃತಿ ಬೆಳಕು ಕಾಣುವಲ್ಲಿ ಸಹ
ಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ವಾಸು ಪೂಜಾರಿ, ಶಶಿಧರ ಬಿ. ಶೆಟ್ಟಿ, ದಯಾನಂದ ಬೋಂಟ್ರಾ, ಎಸ್‌. ಜಯರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಎಸ್‌. ಜಯರಾಮ ಶೆಟ್ಟಿ, ದಯಾನಂದ ಬೋಂಟ್ರಾ ಮತ್ತು ವಾಸು ಪೂಜಾರಿ ಮೊದಲಾದವರು ಲೇಖಕ ಎಸ್ಕೆ ಹಳೆಯಂಗಡಿ ಅವರ ಸುದೀರ್ಘ‌ ಕಾಲದ ಸಾಹಿತ್ಯಕ ಚಟುವಟಿಕೆಗಳ ಬಗ್ಗೆ ಮಾತನಾಡಿ ಶುಭಹಾರೈಸಿದರು.

ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ವಿಶಾಲ್‌ ಶಾಂತಾ ಅವರು ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಂಜೇಶ್ವರ ಶಾರದಾ ಆರ್ಟ್ಸ್ ತಂಡದವರಿಂದ ನಿತ್ಯೆ ಬನ್ನಗ ತುಳು ನಾಟಕ ಪ್ರದರ್ಶನಗೊಂಡಿತು. ತುಳು ಸಂಘ ಬರೋಡಾದ ಪದಾಧಿಕಾರಿ ಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದವರು, ಸಾಹಿತ್ಯಾ ಭಿಮಾನಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next