Advertisement
ಸಮಾರಂಭದ ಅಧ್ಯಕ್ಷತೆಯನ್ನು ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ ಬೆಳ್ತಂಗಡಿ ಅವರು ವಹಿಸಿದ್ದರು. ದಯಾನಂದ ಬೋಂಟ್ರಾ, ಎಸ್ಕೆ ಹಳೆಯಂಗಡಿ, ವಾಸು ಪೂಜಾರಿ, ಬಾಲಕೃಷ್ಣ ಶೆಟ್ಟಿ, ಸರಳಾ ಬಿ. ಶೆಟ್ಟಿ ಹಾಗೂ ಸಂಸ್ಥೆಯ ಹಿರಿಯ ಗಣ್ಯರು ಉಪಸ್ಥಿತರಿದ್ದರು. ರಾಷ್ಟ್ರಗೀತೆಯೊಂದಿಗೆ ವಾರ್ಷಿಕ ಮಹಾಸಭೆಯು ನಡೆಯಿತು.
Related Articles
Advertisement
ಅಧ್ಯಕ್ಷ ಶಶಿಧರ ಬಿ. ಶೆಟ್ಟಿ ಬೆಳ್ತಂಗಡಿ ಅವರು ಮಾತನಾಡಿ, ಕಳೆದ ಮೂರು ದಶಕಗಳ ತುಳು ಸಂಘದ ಸಾಧನೆಗಳು ನಾಡು, ಸೇರಿದಂತೆ ದೇಶ-ವಿದೇಶಗಳ ತುಳು-ಕನ್ನಡಿಗ ಬಾಂಧವರ ಮನಸೂರೆಗೊಂಡಿದೆ. ಒಳ್ಳೆಯ ಸಾಧನೆಗಳಿಗೆ ಎಲ್ಲರ ಪ್ರೋತ್ಸಾಹ, ಸಹಕಾರ ಸದಾಯಿರಬೇಕು. ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ತಾಯಿ ನುಡಿಯ ಸೇವೆಯನ್ನು ಮಾಡುವ ಸಂಕಲ್ಪ ನಮ್ಮದು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಜಿನರಾಜ್ ಪೂಜಾರಿ ನೂತನ ಕಾರ್ಯಕಾರಿ ಸಮಿತಿಯನ್ನು ಘೋಷಿಸಿರು. ಮಕ್ಕಳಿಗಾಗಿ ತುಳು ಭಾಷಣ ಸ್ಪರ್ಧೆ, ದೇಶಭಕ್ತಿ, ಛದ್ಮವೇಷ ಇತ್ಯಾದಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪದಾಧಿಕಾರಿಗಳು ಬಹುಮಾನ ವಿತರಿಸಿ ಶುಭ ಹಾರೈಸಿದರು. ವಂದನಾ ಆರ್. ಸಾಲ್ಯಾನ್ ಮತ್ತು ತಂಡದವರಿಂದ ಮಕ್ಕಳ ಶೈಕ್ಷಣಿಕ ಕಾರ್ಯಕ್ರಮ ನಡೆಯಿತು. ಸ್ಫರ್ಧೆಗಳ ತೀರ್ಪುಗಾರರಾಗಿ ಶರ್ಮಿಳಾ ಜೈನ್, ಮಂಜುಳಾ ಗೌಡ, ಸುನೀತಾ ಪೂಜಾರಿ ಅವರು ಸಹಕರಿಸಿದರು.