ಬರೋಡ: ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಗುಜರಾತ್ ಘಟಕದ ಉದ್ಘಾಟನ ಸಮಾರಂಭವು ನ. 2ರಂದು ಬರೋಡದ ಗುಜರಾತ್ ರಿಫೈನರಿ ಟೌನ್ ಶಿಪ್ ಅಲ್ಲಿನ ಸ್ಪಂದನ ಕಮ್ಯೂನಿಟಿ ಸಭಾಗೃಹ ದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ಉದ್ಘಾಟನ ಸಮಾರಂಭದಲ್ಲಿ ತುಳು ಸಂಘ ಬರೋಡ ಇದರ ವತಿಯಿಂದ ಪ್ರಸಿದ್ಧ ಯಕ್ಷಗಾನ ಕಲಾವಿದರುಗಳಾದ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ರಾಧಾಕೃಷ್ಣ ನಾವುಡ, ಸೀತಾರಾಮ ಕುಮಾರ ಕಟೀಲು, ಪದ್ಮನಾಭ ಉಪಾಧ್ಯ ಇವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗೌರವಿಸಲಾಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಗುಜರಾತ್ ಘಟಕದ ಪರವಾಗಿ ಅಂಕ್ಲೇಶ್ವರ್, ಸೂರತ್, ಬರೋಡ ವಿಭಾಗಗಳಿಂದ ಯಕ್ಷಧ್ರವ ಪಟ್ಲ ಫೌಂಡೇಷನ್ ಇದರ ಯಕ್ಷ ಪಟ್ಲಾಶ್ರಯ ಯೋಜನೆಗೆ ಮೂರು ಮನೆಗಳ ಕೊಡುಗೆಯನ್ನಾಗಿಸಿ 15 ಲಕ್ಷಕ್ಕೂ ಅಧಿಕ ಮೊತ್ತದ ಚೆಕ್‌ಅನ್ನು ಟ್ರಸ್ಟ್‌ನ ಸಂಸ್ಥಾಪಕಾಧ್ಯಕ್ಷ, ಯಕ್ಷಚಕ್ರೇಶ್ವರ ಸತೀಶ್ ಶೆಟ್ಟಿ ಪಟ್ಲ ಅವರಿಗೆ ಹಸ್ತಾಂತರಿಸಿ, ಅವರನ್ನು ಸಮ್ಮಾನಿಸಿದರು.
ತುಳು ಸಂಘ ಬರೋಡ ಇದರ ಗೌರವಾಧ್ಯಕ್ಷ, ಕಲ್ಲಾಡಿ ಕೊರಗ ಶೆಟ್ಟಿ ಮತ್ತು ವಿಠಲ ಶೆಟ್ಟಿ ಪ್ರತಿಷ್ಠಾನ ಇರಾ ಮಂಗಳೂರು ಇದರ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಗುಜರಾತ್ ಬಿಲ್ಲವರ ಸಂಘದ ಸ್ಥಾಪಕ ರೂವಾರಿ ಪ್ರಸಕ್ತ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ, ಗೌರವ ಅತಿಥಿಗಳಾಗಿ ಉದ್ಯಮಿಗಳಾದ ರಾಧಾ ಕೃಷ್ಣ ಶೆಟ್ಟಿ ಸೂರತ್, ರಾಮಚಂದ್ರ ವಿ. ಶೆಟ್ಟಿ ಸೂರತ್, ಅಪ್ಪು ಶೆಟ್ಟಿ ಅಹ್ಮದಾಬಾದ್, ಬಾಲಕೃಷ್ಣ ಶೆಟ್ಟಿ ಬರೋಡ, ರವಿನಾಥ್ ಶೆಟ್ಟಿ, ಶಂಕರ್ ಶೆಟ್ಟಿ ಅಂಕ್ಲೇಶ್ವರ್, ಮನೋಜ್ ಸಿ. ಪೂಜಾರಿ ಸೂರತ್, ಡಾ| ಶರ್ಮಿಳಾ ಎಂ. ಜೈನ್ ಬರೋಡ, ಸೂರತ್‌ನ ಹೊಟೇಲ್ ಉದ್ಯಮಿ ಶಿವರಾಮ ಶೆಟ್ಟಿ ಸೂರತ್, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಟ್ರಸ್ಟ್‌ನ ಗುಜರಾತ್ ಘಟಕದ ಅಧ್ಯಕ್ಷ ಅಜಿತ್ ಶೆಟ್ಟಿ ಅಂಕ್ಲೇಶ್ವರ್, ಪ್ರಮೀಳಾ ಶಶಿಧರ್ ಶೆಟ್ಟಿ, ಸುಜತಾ ದಿನಕರ್ ಶೆೆಟ್ಟಿ, ದಯಾನಂದ್ ಸಾಲ್ಯಾನ್ ಬರೋಡ, ತುಳು ಸಂಘದ ವಾಸು ಪಿ. ಸುವರ್ಣ, ಎಸ್. ಕೆ. ಹಳೆಯಂಗಡಿ, ಮದನ್‌ಕುಮಾರ್ ಗೌಡ, ಬಾಲಕೃಷ್ಣ ಎ. ಶೆಟ್ಟಿ, ಇಂದುದಾಸ್ ಶೆಟ್ಟಿ, ಕುಶಲ್ ಶೆಟ್ಟಿ, ರಂಜನಿ ಪ್ರವೀಣ್ ಶೆಟ್ಟಿ ಸೂರತ್, ರಾಧಾಕೃಷ್ಣ ಮೂಲ್ಯ, ಶಾಂತಾರಾಮ ಶೆಟ್ಟಿ ಸೂರತ್ ಮತ್ತಿತರ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಅಹ್ಮದಾಬಾದ್, ಬರೋಡಾ, ಸೂರತ್, ಅಂಕ್ಲೇಶ್ವರ್ ವಿಭಾಗಗಳ ಮುಖ್ಯಸ್ಥರು, ತುಳು ಸಂಘ ಬರೋಡಾ ಮತ್ತು ಕರ್ನಾಟಕ ಸಮಾಜ ಗುಜರಾತ್ ರಿಫೈನರಿ ಬರೋಡಾ, ಇನ್ನಿತರ ಸಂಸ್ಥೆಗಳ ಪ್ರತಿನಿಧಿಗಳು, ರಾಕೇಶ್ ಪೂಂಜಾ, ರವಿಚಂದ್ರ ಶೆಟ್ಟ್, ಸತೀಶ್ ಶೆಟ್ಟಿ ಎಕ್ಕಾರು, ಪ್ರಸನ್ನ ಮಂಗಳೂರು, ಅಶ್ವಿತ್ ಶೆಟ್ಟಿ, ಲೋಕೇಶ್ ಭರಣಿ, ದುರ್ಗಾಪ್ರಸಾದ್ ಈರೋಡ್, ಉಮೇಶ್ ಇನ್‌ಲಾÂಂಡ್ ಮಂಗಳೂರು, ಕರ್ನಾಟಕ ಸಂಘ ಬರೋಡಾ ಇದರ ಸಿ. ಮಹೇಂದ್ರ ಬರೋಡ, ಡಿ. ನರಸಿಂಹ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗುಜರಾತ್ ಘಟಕದ ಪ್ರಧಾನ ಸಂಘಟಕ ಹಾಗೂ ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ವೈಷ್ಣವಿ ಶೆಟ್ಟಿ ಪ್ರಾರ್ಥನೆಗೈದರು. ಕರ್ನೂರು ಮೋಹನ್ ರೈ ನಿರೂಪಿಸಿದರು. ಟ್ರಸ್ಟ್‌ನ ಗುಜರಾತ್ ಘಟಕದ ಗೌರವ ಪ್ರಧಾನ ಕಾರ್ಯದರ್ಶಿ ವಿಶಾಲ್ ಸಾಂತ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರು ಪಟ್ಲ ಸತೀಶ್ ಶೆಟ್ಟಿ ಅವರ ಪ್ರಧಾನ ಭಾಗವತಿಕೆಯಲ್ಲಿ “ಶನೀಶ್ವರ ಮಹಾತೆ¾’ ಯಕ್ಷಗಾನ ಪ್ರದರ್ಶನಗೊಂಡಿತು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್.