Advertisement

ತುಳು ಸಂಘ ಪಿಂಪ್ರಿ-ಚಿಂಚ್ವಾಡ್‌ ವಿದ್ಯಾನಿಧಿ ವಿತರಣೆ

04:58 PM Jul 04, 2019 | Vishnu Das |

ಪುಣೆ: ನಮ್ಮ ಜೀವನದಲ್ಲಿ ವಿದ್ಯೆಗೆ ಮಹತ್ತರವಾದ ಸ್ಥಾನವಿದೆ. ವಿದ್ಯೆಗೆ ಪ್ರೋತ್ಸಾಹ ನೀಡುವಂತಹ ಕಾರ್ಯವನ್ನು ಪಿಂಪ್ರಿ-ತುಳು ಸಂಘವು ಮಾಡುತ್ತಿರುವುದು ಅಭಿನಂದನಾರ್ಹವಾಗಿದೆ. ಇಲ್ಲಿ ಸಂಘದಿಂದ ಸಹಾಯ ಪಡೆದಂತಹ ವಿದ್ಯಾರ್ಥಿಗಳು ಮುಂದೆ ವಿದ್ಯಾವಂತರಾಗಿ ಉತ್ತಮ ಸಂಪಾದನೆಯನ್ನು ಗಳಿಸುವಂತಹ ಕಾಲದಲ್ಲಿ ಸಂಘವನ್ನು ಮರೆಯದೆ ನೆರವು ನೀಡುವಂತಾಗಬೇಕಾಗಿದೆ ಎಂದು ಪಿಂಪ್ರಿ-ಚಿಂಚ್ವಾಡ್‌ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಎರ್ಮಾಳ್‌ ಸೀತಾರಾಮ ಶೆಟ್ಟಿ ಅವರು ಅಭಿಪ್ರಾಯಿಸಿದರು.

Advertisement

ಅವರು ಜೂ. 29 ರಂದು ನಗರದ ತೃಷ್ಣಾ ಗಾರ್ಡನ್‌ ಹೊಟೇಲ್‌ ಸಭಾಂಗಣದಲ್ಲಿ ನಡೆದ ತುಳುಸಂಘ ಪಿಂಪ್ರಿ-ಚಿಂಚಾÌಡ್‌ ಇದರ ವಿದ್ಯಾನಿಧಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಸಂಘವು ಎಲ್ಲರನ್ನೂ ಒಗ್ಗೂಡಿಸಿಕೊಂಡು ಮಾಡುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳಿಗೆ ತುಳು- ಕನ್ನಡಿಗರು ಸಹಕಾರ ನೀಡಬೇಕು ಎಂದು ವಿನಂತಿಸಿದರು.

ಅತಿಥಿಗಳಾಗಿದ್ದ ಡಾ| ಕಲ್ಮಾಡಿ ಶ್ಯಾಮರಾವ್‌ ಕನ್ನಡ ಮಾಧ್ಯಮ ಹೈಸ್ಕೂಲಿನ ನಿವೃತ್ತ ಮುಖ್ಯಶಿಕ್ಷಕಿ, ಯೋಗ ಶಿಕ್ಷಕಿ ಸುನೀತಾ ಶಿರಗುಪ್ಪಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ನಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳುವಲ್ಲಿ ಕಾಳಜಿವಹಿಸಬೇಕಾಗಿದೆ. ವಿದ್ಯೆಯೊಂದಿಗೆ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗಾಭ್ಯಾಸ ರೂಢಿಸಿಕೊಳ್ಳುವುದು ಉತ್ತಮ. ಈ ನಿಟ್ಟಿನಲ್ಲಿ ತುಳುಸಂಘಕ್ಕೆ ನೆರವಾಗಲು ಬಯಸುತ್ತೇನೆ ಎಂದರು.
ವೇದಿಕೆಯಲ್ಲಿ ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಅಧ್ಯಕ್ಷರಾದ ವಿಜಯ ಶೆಟ್ಟಿ ಬೋರ್ಕಟ್ಟೆ, ಮಾಜಿ ನಗರ ಸೇವಕ ಪ್ರಸಾದ ಶೆಟ್ಟಿ, ಉದ್ಯಮಿ ರಮೇಶ ಕೋರೆ, ಉಪಾಧ್ಯಕ್ಷರುಗಳಾದ ದಿನೇಶ್‌ ಶೆಟ್ಟಿ ಉಜಿರೆ, ಶೇಖರ ಪೂಜಾರಿ ಚಿತ್ರಾಪು, ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ನಿತಿನ್‌ ಶೆಟ್ಟಿ ನಿಟ್ಟೆ, ಪ್ರಧಾನ ಕಾರ್ಯದರ್ಶಿ ವಿನಯ್‌ ಶೆಟ್ಟಿ, ಕೋಶಾಧಿಕಾರಿ ಗಣೇಶ ಅಂಚನ್‌ ಉಪಸ್ಥಿತರಿದ್ದರು. ಅತಿಥಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್‌ಎಸ್‌ಸಿ ಹಾಗೂ ಎಚ್‌ಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾನಿಧಿಯನ್ನು ವಿತರಿಸಲಾಯಿತು.

ಶಿಕ್ಷಣ ಮತ್ತು ಸಾಮಾಜಿಕ ಸಮಿತಿಯ ಉಪಾಧ್ಯಕ್ಷರಾದ ಜಯ ಶೆಟ್ಟಿ ದೇಹುರೋಡ್‌, ಮಾಜಿ ಅಧ್ಯಕ್ಷರಾದ ಮಹೇಶ ಹೆಗ್ಡೆ ಕಟ್ಟಿಂಗೇರಿ ಮನೆ, ಶ್ಯಾಮ ಸುವರ್ಣ, ಮಾಜಿ ಕಾರ್ಯದರ್ಶಿ ದಿನೇಶ ಶೆಟ್ಟಿ ಬಜಗೋಳಿ, ಸದಸ್ಯರಾದ ಸುಧಾಕರ ಶೆಟ್ಟಿ ಪೆಲತ್ತೂರು, ಚೇತನ್‌ ಶೆಟ್ಟಿ, ಕುಶ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಮಿಥುನ್‌ ಶೆಟ್ಟಿ ಅವರು ಉಪಸ್ಥಿತರಿದ್ದರು.

ದಿನೇಶ ಶೆಟ್ಟಿ ಉಜಿರೆ ಸ್ವಾಗತಿಸಿದರು. ನಿತಿನ್‌ ಶೆಟ್ಟಿ ನಿಟ್ಟೆಯವರು ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ನೆರವೇರಿಸಿದರು. ಅತಿಥಿಗಳನ್ನು ಕುಸುಮ ಸಾಲ್ಯಾನ್‌ ಪರಿಚಯಿಸಿದರು. ನೂತನ್‌ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ವಿನಯ್‌ ಶೆಟ್ಟಿ ನಿಟ್ಟೆ ವಂದಿಸಿದರು. ಸುನೀತಾ ಶಿರಗುಪ್ಪಿಯವರು ಉಚಿತವಾಗಿ ನೀಡಿದ ಯೋಗ ಮಾಹಿತಿ ಪುಸ್ತಕ ವನ್ನು ವಿತರಿಸಲಾಯಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಯಿತು.

Advertisement

ಸಂಸ್ಕೃತಿ ಉಳಿಸುವಲ್ಲಿ ಕೊಡುಗೆ ನೀಡಿ

ಸಂಘದ ಅಧ್ಯಕ್ಷ ಹರೀಶ್‌ ಶೆಟ್ಟಿ ಕುರ್ಕಾಲ್‌ ಮಾತನಾಡಿ, ನಮ್ಮ ಸಂಘದ ಮೂಲಕ ಪ್ರತೀ ವರ್ಷ ಶಿಕ್ಷಣ ಪಡೆಯುವ ಮಕ್ಕಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ದಾನಿಗಳ ಸಹಕಾರದಿಂದ ಧನಸಹಾಯವನ್ನು ನೀಡುತ್ತಾ ಬಂದಿದ್ದೇವೆ. ಸಂಘದ ಪದಾಧಿಕಾರಿಗಳು ಹಾಗೂ ದಾನಿಗಳು ಈ ಕಾರ್ಯಕ್ಕೆ ಬೆಂಬಲಿಸಿದ್ದು ಅವರೆಲ್ಲರಿಗೂ ಸಂಘ ಚಿರಋಣಿಯಾಗಿದೆ. ಮಕ್ಕಳು ಹೆಚ್ಚಾಗಿ ಮೊಬೈಲ್‌, ಇಂಟರ್‌ನೆಟ್‌ಗಳಲ್ಲಿ ಕಾಲ ಕಳೆಯದೆ ವಿದ್ಯೆಯ ಕಡೆಗೆ ಹೆಚ್ಚು ಗಮನ ನೀಡಿ ಭವಿಷ್ಯದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕಾಗಿದೆ. ವಿದ್ಯೆಯೊಂದಿಗೆ ಸಂಸ್ಕಾರವಂತರಾಗಿ ತುಳುನಾಡಿನ ಸಭ್ಯ ಸಂಸ್ಕೃತಿ ಉಳಿಸುವಲ್ಲಿ ಕೊಡುಗೆ ನೀಡಬೇಕಾಗಿದೆ ಎಂದರು.

ಚಿತ್ರ – ವರದಿ : ಕಿರಣ್‌ ಬಿ. ರೈ ಕರ್ನೂರು.

Advertisement

Udayavani is now on Telegram. Click here to join our channel and stay updated with the latest news.

Next