ಪುಣೆ: ಪುಣೆ ತುಳುಸಂಘ ಪಿಂಪ್ರಿ ಚಿಂಚ್ವಾಡ್ ಇದರ ವಾರ್ಷಿಕೋತ್ಸವ ಸಮಾರಂಭವು ಜ. 27ರಂದು ರಾಮಕೃಷ್ಣ ಮೋರೆ ಸಭಾಗೃಹದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಈ ಸಂದರ್ಭ ಸಮಾರಂಭದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಉಡುಪಿ ಶಾಸಕರಾದ ರಘುಪತಿ ಭಟ್, ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸದಸ್ಯರಾದ ಎ.ಗೋಪಾಲ ಅಂಚನ್ ಹಾಗೂ ರಾಷ್ಟ್ರಪತಿ ಪುರಸ್ಕೃತ ಶಿಕ್ಷಕ ಕುದಿ ವಸಂತ್ ಶೆಟ್ಟಿ ಇವರುಗಳನ್ನು ಸಂಘದ ವತಿಯಿಂದ ಸಂಘದ ಅಧ್ಯಕ್ಷ ಹರೀಶ್ ಕುರ್ಕಾಲ್ ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪಗುತ್ಛಗಳನ್ನು ನೀಡಿ ಸಮ್ಮಾನಿಸಿದರು.
ವೇದಿಕೆಯಲ್ಲಿ ಸಂಘದ ನಿಕಟಪೂರ್ವ ಕಾರ್ಯಾಧ್ಯಕ್ಷ ಶ್ಯಾಮ್ ಸುವರ್ಣ ,ಮಾಜಿ ಕಾರ್ಯಾಧ್ಯಕ್ಷ ಮಹೇಶ್ ಹೆಗ್ಡೆ ಕಟ್ಟಿಂಗೇರಿಮನೆ, ಉಪಾಧ್ಯಕ್ಷರಾದ ದಿನೇಶ್ ಶೆಟ್ಟಿ ಉಜಿರೆ, ಶೇಖರ್ ಚಿತ್ರಾಪು ,ಪ್ರಧಾನ ಕಾರ್ಯದರ್ಶಿ ವಿನಯ್ ಶೆಟ್ಟಿ ನಿಟ್ಟೆ, ಕೋಶಾಧಿಕಾರಿ ಗಣೇಶ್ ಅಂಚನ್, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಪೆರ್ಡೂರು, ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ನಿತಿನ್ ಶೆಟ್ಟಿ ನಿಟ್ಟೆ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಮಿಥುನ್ ಶೆಟ್ಟಿ ಉಪಸ್ಥಿತರಿದ್ದರು. ಭವಂತಿ, ಶಕುಂತಳಾ ಮತ್ತು ವನಿತಾ ಪ್ರಾರ್ಥಿಸಿದರು. ಉಪಾಧ್ಯಕ್ಷ ದಿನೇಶ್ ಶೆಟ್ಟಿ ಉಜಿರೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಿನಯ್ ಶೆಟ್ಟಿ ನಿಟ್ಟೆ ಸಂಘದ ವಾರ್ಷಿಕ ಕಾರ್ಯಚಟುವಟಿಕೆಗಳ ವರದಿ ವಾಚಿಸಿದರು. ಸಂತೋಷ್ ಕಡಂಬ, ಶ್ಯಾಮ್ ಸುವರ್ಣ, ಸುಧಾಕರ ಶೆಟ್ಟಿ ಪೆಲತ್ತೂರು ಅತಿಥಿಗಳನ್ನು ಪರಿಚಯಿಸಿದರು. ನೂತನ್ ಸುವರ್ಣ ಮತ್ತು ಕುಸುಮ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಪೆರ್ಡೂರು ವಂದಿಸಿದರು. ದಿನೇಶ್ ಶೆಟ್ಟಿ ಬಜಗೋಳಿ, ಶುಭಕರ ಶೆಟ್ಟಿ ,ಅಲ್ತಾಫ್ ಉಡುಪಿ, ಜಯ ಶೆಟ್ಟಿ ದೇಹುರೋಡ್, ವಿಕಾಸ್ ಅಡಪ, ರತ್ನಾಕರ ಶೆಟ್ಟಿ ಹಿಂಜೆವಾಡಿ, ಉದಯ್ ಶೆಟ್ಟಿ ಲೋನಾವಲ ,ಚಂದ್ರಶೇಖರ ಪೂಜಾರಿ ವಾಕಡ್, ಕುಸುಮಾ ಸಾಲ್ಯಾನ್, ಸಂತೋಷ್ ಶೆಟ್ಟಿ ವಾಕಡ್, ಸಂತೋಷ್ ಕಡಂಬ,ರಾಜೇಶ್ ಶೆಟ್ಟಿ, ಗಿರಿಜಾ, ಚೇತನ್ ಶೆಟ್ಟಿ ಮೂಲ್ಕಿ, ಪ್ರಭಾಕರ ಶೆಟ್ಟಿ,ಕುಶ ಶೆಟ್ಟಿ, ವಿಶ್ವನಾಥ ಶೆಟ್ಟಿ ಚಾಕನ್, ಜಗದೀಶ್ ಶೆಟ್ಟಿ ಹವೇಲಿ, ರಘು ಪೂಜಾರಿ, ಪ್ರೇಮಾ ಪೂಜಾರಿ ಸಂಘದ ಸದಸ್ಯರು ಹಾಗು ಯುವ ವಿಭಾಗದ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ: ಕಿರಣ್ ಬಿ. ರೈ ಕರ್ನೂರು