Advertisement
1979ರಲ್ಲಿ ಸ್ಥಾಪನೆಗೊಂಡ ಕಲಾ ಜಗತ್ತು ಅನೇಕ ಕಲಾ ಕಾರ್ಯಕ್ರಮ ಗಳನ್ನು ನೀಡುತ್ತಾ ಬಂದಿದೆ. ಪ್ರಸ್ತತ ಲಿಮ್ಕಾಬುಕ್ ರಾಷ್ಟ್ರೀಯ ದಾಖಲೆಯ ಮಹಾನ್ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕಲಾಜಗತ್ತು ಸಂಸ್ಥೆಯ ಸಂಸ್ಥಾಪಕ ಡಾ| ತೋನ್ಸೆ ವಿಜಯಕುಮಾರ್ ಶೆಟ್ಟಿ ಅವರ ಪರಿಕಲ್ಪನೆ, ಆಯೋಜನೆಯಲ್ಲಿ ಗಣ್ಯಾಥಿ-ಗಣ್ಯರ ಉಪಸ್ಥಿತಿಯಲ್ಲಿ ತುಳುಪರ್ಬವನ್ನು ಆಯೋಜಿಸಲಾಗಿದ್ದು, ಅದಕ್ಕಾಗಿ ಭರದ ಸಿದ್ಧತೆಯು ನಡೆಯುತ್ತಿದೆ. ಕಲಾಜಗತ್ತು ಸಂಸ್ಥೆಯ ಪ್ರಾರಂಭದ “ವಸುಂಧರಾ’ ನಾಟಕದಿಂದ ಹಿಡಿದು ಪ್ರಸಿದ್ಧ ನಾಟಕಗಳಲ್ಲಿ ಅಂದಿನ ಕಾಲದಲ್ಲಿ ಕಲಾವಿದರಾಗಿ ನಟಿಸಿದ್ದ ಕಲಾವಿದರು ಮತ್ತೆ ಒಂದೇ ವೇದಿಕೆಯಲ್ಲಿ ಸಮಾವೇಷಗೊಳ್ಳುವ ಅಪರೂಪದ ಕ್ಷಣ ಇದಾಗಿದೆ.
Related Articles
Advertisement
ಸರೋಜಾದೇವಿ ನಿರ್ದೇಶನದ “ಒರಿಯೆ ಮಗೆ ಒರಿಯೆ’ ನಾಟಕದಲ್ಲಿ ಡಾ| ಸುರೇಂದ್ರ ಕುಮಾರ್ ಹೆಗ್ಡೆ, ರೇಷ್ಮಾ ಶೆಟ್ಟಿ, ಎಚ್. ಮೋಹನ್ ಅವರು ಪಾಲ್ಗೊಳ್ಳಲಿದ್ದಾರೆ. ಚಂದ್ರಾವತಿ ಅವರ ನಿರ್ದೇಶನದ “ಊರುದ ಮಾರಿ’ ನಾಟಕದಲ್ಲಿ ಜಗದೀಶ್, ಜ್ಯೂಲಿಯೆಟ್, ಹೇಮಂತ್ ಶೆಟ್ಟಿ, ಕೃಷ್ಣರಾಜ್ ಶೆಟ್ಟಿ ನಿರ್ದೇಶನದ “ಗುಬ್ಬಚ್ಚಿ’ ನಾಟಕದಲ್ಲಿ ಕೃಷ್ಣರಾಜ್ ಶೆಟ್ಟಿ, ಚಂದ್ರಾವತಿ, ಎನ್. ಪೃಥ್ವಿರಾಜ್ ಮುಂಡ್ಕೂರು ಅವರು ಭಾಗವಹಿಸಲಿದ್ದಾರೆ.
ಎನ್. ಪೃಥ್ವಿರಾಜ್ ಮುಂಡ್ಕೂರು ನಿರ್ದೇಶನದ “ಈ ನಲ್ಕೆ ದಾಯೆ’ ನಾಟಕದಲ್ಲಿ ಎನ್. ಪೃಥ್ವಿರಾಜ್, ನಿಶಾ ಮೊಲಿ, ಜ್ಯೂಲಿಯೆಟ್, ಜಗದೀಶ್, ಸುರೇಶ್ ಕೆ. ಶೆಟ್ಟಿ, ಸುರೇಶ್ ಶೆಟ್ಟಿ ಡೊಲಿ, ದರ್ಶನ್ ಶೆಟ್ಟಿ ಹಾಗೂ ರಘುರಾಜ್ ಕುಂದರ್ ಅವರ ನಿರ್ದೇಶನದ “ಎನಡಾªವಂದ್’ ನಾಟಕ ದಲ್ಲಿ ಡಾ| ಸುರೇಂದ್ರ ಕುಮಾರ್ ಹೆಗ್ಡೆ, ಚಂದ್ರಾವತಿ, ವಿಜಯ ಕುಮಾರ್ ಶೆಟ್ಟಿ ಅವರು ಪಾಲ್ಗೊಳ್ಳಲಿದ್ದಾರೆ.
ಅಮಿತಾ ಜತ್ತಿನ್ ನಿರ್ದೇಶನದ “ಅಪ್ಪೆ ಸೀತೆ’ ನಾಟಕದಲ್ಲಿ ರೇಷ್ಮಾ ಶೆಟ್ಟಿ, ಸಾಕ್ಷೀ, ಕೃತಿಕಾ, ಮೇಘಾ, ಜೋತ್ಸಾ° ದೇವಾಡಿಗ ಮೊದಲಾದವರು ಭಾಗವಹಿಸಲಿದ್ದಾರೆ. ಪ್ರಭಾಕರ ಶೆಟ್ಟಿ ನಿರ್ದೇಶನದ “ಮೋಕ್ಷ’ನಾಟಕದಲ್ಲಿ ಹರೀಶ್ ಶೆಟ್ಟಿ, ಹೇಮಂತ್ ಶೆಟ್ಟಿ, ದರ್ಶನ್ ಶೆಟ್ಟಿ ಹಾಗೂ ಲತೇಶ್ ಶೆಟ್ಟಿ ನಿರ್ದೇಶನದ “ಈ ಬಾಲೆ ನಮ್ಮವು’ ನಾಟಕದಲ್ಲಿ ಸುಧಾ, ಪ್ರಭಾಕರ್, ಜೀವಿಕಾ ಶೆಟ್ಟಿ ಪೇತ್ರಿ, ಲತೇಶ್, ವೀಣಾ, ವಿಶ್ವನಾಥ್ ಶೆಟ್ಟಿ ಪೇತ್ರಿ, ಅಶು ಪಾಂಗಾಳ್, ಜಯಾನಂದ ಶೆಟ್ಟಿ ಮತ್ತು ವಿಜಯಕುಮಾರ್ ಶೆಟ್ಟಿ ಭಾಗವಹಿಸಲಿದ್ದಾರೆ.
ಡಾ| ಸುರೇಂದ್ರ ಕುಮಾರ್ ಹೆಗ್ಡೆ ನಿರ್ದೇಶನದ “ಶರಶಯೆÂ’ ನಾಟಕದಲ್ಲಿ ಶ್ರೇಯಸ್ ಎಸ್. ಹೆಗ್ಡೆ, ಡಾ| ಸುರೇಂದ್ರ ಕುಮಾರ್ ಹೆಗ್ಡೆ, ಕೃಷ್ಣರಾಜ್ ಶೆಟ್ಟಿ, ಚಂದ್ರಾವತಿ ಅವರು ಪಾಲ್ಗೊಳ್ಳಲಿದ್ದಾರೆ. ಸಂಜೆ 6.30 ರಿಂದ ಪ್ರಶಸ್ತಿ ಪ್ರದಾನ ಸಮಾರಂಭ ಜರಗಲಿದ್ದು, ಆನಂತರ ಡಾ| ವಿಜಯಕುಮಾರ್ ಶೆಟ್ಟಿ ನಿರ್ದೇಶನ ಮತ್ತು ನಿರ್ಮಾಣದ ದಾಖಲೆಯ “ಪತ್ತನಾಜೆ’ ತುಳು ಸಿನೇಮಾ ಪ್ರದರ್ಶನಗೊಳ್ಳಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಕಲಾಭಿಮಾನಿಗಳು, ತುಳು-ಕನ್ನಡಿಗರು ಪಾಲ್ಗೊಂಡು ಸಮಾರಂಭದ ಯಶಸ್ಸಿಗೆ ಸಹಕ ರಿಸುವಂತೆ ಕಲಾಜಗತ್ತು ಮುಂಬಯಿ ಇದರ ಪದಾಧಿ ಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ತಿಳಿಸಿದ್ದಾರೆ.