Advertisement
ಮುಂಬಯಿ: ಕರ್ನಾಟಕ ಸಮಾಜ ಸೂರತ್ ಸಂಸ್ಥೆಯ ವತಿಯಿಂದ ತುಳುಪರ್ಬ ಆಚರಣೆಯು ಜೂ. 30ರಂದು ಸೂರತ್‌ನ ಜೀವನ್ ಭಾರತಿ ಸಭಾಂಗಣದಲ್ಲಿ ತುಳು ಸಂಘ ಅಂಕಲೇಶ್ವರ ಇದರ ಗೌರವಾಧ್ಯಕ್ಷ ತೋನ್ಸೆ ರವಿನಾಥ್ ವಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
Related Articles
Advertisement
ಸಭಾ ಕಾರ್ಯಕ್ರಮವು ರವಿನಾಥ್ ವಿ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಕರ್ನಾಟಕ ಸಮಾಜ ಸೂರತ್ ಸಂಸ್ಥೆಯ ನಿಕಟ ಪೂರ್ವಾಧ್ಯಕ್ಷರಾದ ಮನೋಜ್ ಸಿ. ಪೂಜಾರಿ ಅವರು ಮಾತನಾಡಿ, ಸಂಘದ ಏಳ್ಗೆಗಾಗಿ ಎಲ್ಲರೂ ಒಮ್ಮತದಿಂದ ಶ್ರಮಿಸಬೇಕು. ನಾವೆಲ್ಲರೂ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಯತ್ತ ಸಾಗಿಸೋಣ ಎಂದು ಕರೆ ನೀಡಿದರು.
ಬರೋಡ ತುಳು ಸಂಘದ ಅಧ್ಯಕ್ಷರಾದ ಶಶಿಧರ ಶೆಟ್ಟಿ ಅವರು ಸೂರತ್ ಕರ್ನಾಟಕ ಸಮಾಜವು ಸೂರತ್‌ನ ಅಕ್ಕ ಪಕ್ಕದ ಊರುಗಳಿಗೆ ಮಾದರಿಯಾಗಿದೆ ಎಂದರು. ರಂಜನಿ ಪಿ. ಶೆಟ್ಟಿ ಮತ್ತು ಪವಿತ್ರಾ ಬಿ. ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ತುಳು ಕವಿ ಕುಶಾಲಾಕ್ಷಿ ವಿ. ಕುಲಾಲ್ ಅವರು ಕಳುಹಿಸಿಕೊಟ್ಟ ಪನಿ ಮುತ್ತು ಮಾಲೆ ಕವನ ಸಂಕಲನದ ಹೊತ್ತಿಗೆಯನ್ನು ವೇದಿಕೆಯ ಗಣ್ಯರಿಗೆ ಹಸ್ತಾಂತರಿಸಲಾಯಿತು
ಕಾರ್ಯಕ್ರಮದಲ್ಲಿ ನವ ವಿವಾಹಿತ ದಂಪತಿಗಳನ್ನು ಸಮ್ಮಾನಿಸಲಾಯಿತು. ವಸಂತ್ ಶೆಟ್ಟಿ ದಂಪತಿಗಳ ವೈವಾಹಿಕ ಜೀವನದ ಸುವರ್ಣ ಹಬ್ಬದ ಹಾಗೂ ರವಿನಾಥ್ ಶೆಟ್ಟಿ ದಂಪತಿ ಮತ್ತು ರಾಧಾಕೃಷ್ಣ ಮೂಲ್ಯ ದಂಪತಿಯ ವೈವಾಹಿಕ ಜೀವನದ ಬೆಳ್ಳಿ ಹಬ್ಬವನ್ನು ವೈಭವದಿಂದ ಆಚರಿಸಿ ಸಮ್ಮಾನಿಸಲಾಯಿತು. ಅಮಿತಾ ಯು. ಸಫಲಿಗ ಪ್ರಾರ್ಥನೆಗೈದರು. ಚಂದ್ರಶೇಖರ್ ಎಸ್. ಪೂಜಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಂಕಲೇಶ್ವರ ಸೂರತ್ ತುಳುವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅಭಿನಯ ಮಂಟಪ ಮುಂಬಯಿ ಕಲಾವಿದರಿಂದ ಒಯಕ್‌ಲಾ ದಿನ ಬರೊಡು ನಾಟಕ ಪ್ರದರ್ಶನಗೊಂಡಿತು. ಪ್ರಾಯೋಜಕರನ್ನು ನೆನಪಿನ ಕಾಣಿಕೆ ನೀಡಿ ಸಮ್ಮಾನಿಸಲಾಯಿತು.
ಸಮಾರಂಭದ ವೇದಿಕೆಯಲ್ಲಿ ಅಧ್ಯಕ್ಷ ದಿನೇಶ್ ಬಿ. ಶೆಟ್ಟಿ, ಗೌರವಾಧ್ಯಕ್ಷ ರಾಮಚಂದ್ರ ವಿ. ಶೆಟ್ಟಿ, ಉಪಾಧ್ಯಕ್ಷರಾದ ರಮೇಶ್ ಭಂಡಾರಿ ಬಾಡೋìಲಿ, ಉಮೇಶ್ ಸಫಲಿಗ, ಅಜಿತ್ ಅಂಕಲೇಶ್ವರ್, ಪ್ರಭಾಕರ ಶೆಟ್ಟಿ ಕೊಸಂಬಾ, ವನಿತಾ ಜೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಮೂಲ್ಯ ಕೆ., ಜತೆ ಕಾರ್ಯದರ್ಶಿ ಶಾಂತಿ ಡಿ. ಶೆಟ್ಟಿ, ಕೋಶಾಧಿಕಾರಿ ಚಂದ್ರಹಾಸ್ ಬಿ. ಸಫಲಿಗ, ಜತೆ ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿಗಾರ್, ಸಂಘಟನಾ ಕಾರ್ಯದರ್ಶಿ ಸಂತೋಷ್ ವಿ. ಶೆಟ್ಟಿ ಉಪಸ್ಥಿತರಿದ್ದರು.
ಆಡಳಿತ ಮಂಡಳಿಯ ಸದಸ್ಯರಾದ ಮನೋಜ್ ಸಿ. ಪೂಜಾರಿ, ವಿಶ್ವನಾಥ್ ಪೂಜಾರಿ, ರತ್ನಾಕರ್ ಕೋಟ್ಯಾನ್, ಸುನಿತಾ ಆರ್. ಶೆಟ್ಟಿ, ರಮೇಶ್ ರೈ, ಅಮಿತಾ ಯು. ಸಫಲಿಗ, ರಂಜನಿ ಪಿ. ಶೆಟ್ಟಿ, ಅಮಿತಾ ಜೆ. ಶೆಟ್ಟಿ, ಗಂಗಾಧರ ಶೆಟ್ಟಿಗಾರ್, ಸತೀಶ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು.