ಮುಂಬಯಿ: ತುಳುನಾಡ ಫ್ರೆಂಡ್ಸ್ ಮೀರಾರೋಡ್ ಇದರ ಬೆಳ್ಳಿಹಬ್ಬದ ಪ್ರಯುಕ್ತ ಆಯೋಜಿಸಿದ್ದ ತುಳುನಾಡು ಟ್ರೋಫಿ-2019 ಇದರ ಸಮಾರೋಪ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮವು ಫೆ. 17ರಂದು ಸಂಜೆ ಮೀರಾರೋಡ್ ಪೂರ್ವದ ಶಾಂತಿ ನಗರ ಸೆಕ್ಟರ್-5 ಮೈದಾನದಲ್ಲಿ ನೆರವೇರಿತು.
16 ತಂಡಗಳು ಭಾಗವಹಿಸಿದ್ದ ಮಹಿಳೆಯ ತ್ರೋಬಾಲ್ ಪಂದ್ಯಾಟ ದಲ್ಲಿ ಶ್ರೀ ಕಟೀಲೇಶ್ವರಿ ಮುಂಬಯಿ ತಂಡ ಪ್ರಥಮ ಸ್ಥಾನ ಪಡೆದರೆ, ರಪ್ಟೆàರ್ ಮುಂಬಯಿ ತಂಡ ದ್ವಿತೀಯ ಸ್ಥಾನ ಗಳಿಸಿತು. 10 ತಂಡಗಳು ಭಾಗವಹಿಸಿದ್ದ ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಶ್ರೀ ಸಾಯಿ ಸನ್ನಿಧಿ ಮೀರಾರೋಡ್ ಪ್ರಥಮ, ಎ. ಆರ್. ಬಾಯ್ಸ ಮುಂಬಯಿ ದ್ವಿತೀಯ ಸ್ಥಾನ ಗಳಿಸಿ ನಗದು, ಪ್ರಮಾಣ ಪತ್ರ, ಟ್ರೋಫಿಯೊಂದಿಗೆ ಗೌರವ ಸ್ವೀಕರಿಸಿತು.
ತ್ರೋಬಾಲ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಶ್ರೀ ಕಟೀಲೇಶ್ವರಿ ತಂಡದ ಅಕ್ಷತಾ ಶೆಟ್ಟಿ, ವಾಲಿಬಾಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಮಹಾರಾಷ್ಟ್ರ ಪೊಲೀಸ್ ತಂಡದ ಓಂಕಾರ್ ಹಾಗೂ ಉತ್ತಮ ಲಿಫ್ಟರ್ ಆಗಿ ಎ. ಆರ್. ಬಾಯ್ಸ ತಂಡದ ಸುರಾಜ್ ಮತ್ತು ಶ್ರೀ ಸಾಯಿ ಸನ್ನಿಧಿ ಮೀರಾರೋಡ್ ತಂಡದ ರಿಯಾಜ್ ಅವರು ಆಲ್‌ರೌಂಡರ್ ಪ್ರಶಸ್ತಿಗೆ ಭಾಜನರಾದರು.
ಸಮಾರಂಭದಲ್ಲಿ ರಾಜ್ಯಮಟ್ಟದ ಪವರ್ ಲಿಫ್ಟರ್ ಕಾವ್ಯಾ ಜೆ. ಕರ್ಕೇರ, ಕಿರಿಯ ಅಂತಾರಾಷ್ಟ್ರೀಯ ಬ್ಯಾಡ್‌ಮಿಂಟನ್ ಆಟಗಾರ ಅಕ್ಷನ್ ಕೆ. ಶೆಟ್ಟಿ, ರಾಜ್ಯ ಮಟ್ಟದ ಬಾಕ್ಸರ್ ಕೃತಿ ತೇಜಾ³ಲ್ ಕರ್ಕೇರ ಅವರನ್ನು ಗಣ್ಯರು ಸಮ್ಮಾನಿಸಿದರು. ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಕಾಪು ಅತಿಥಿಗಳನ್ನು ಪರಿಚಯಿಸಿ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು.
ಅಧ್ಯಕ್ಷ ಶಂಕರ್ ಕೋಟ್ಯಾನ್ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು. ಜತೆ ಕಾರ್ಯದರ್ಶಿ ಕಿರಣ್ ಮೆಂಡನ್ ಬಹುಮಾನಿತರ ಯಾದಿಯನ್ನು ವಾಚಿಸಿದರು. ಗೌರವಾಧ್ಯಕ್ಷ ಯಾಧೇಶ್ ಪುತ್ರನ್, ಉಪಾಧ್ಯಕ್ಷರುಗಳಾದ ವಿಲ್ಫೆ†ಡ್ ಮಾರ್ಟಿಸ್, ಲಕ್ಷ್ಮೀಕಾಂತ್ ಪೂಜಾರಿ, ಕೋಶಾಧಿಕಾರಿ ದೀಪಕ್ ಮೆಂಡನ್, ಜತೆ ಕೋಶಾಧಿಕಾರಿ ರವಿ ಸುವರ್ಣ ಹಾಗೂ ಸದಸ್ಯರು ಗಣ್ಯರನ್ನು ಗೌರವಿಸಿದರು. ಬೆಳಗ್ಗೆ ಸಂಸದ ಗೋಪಾಲ್ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ದಿನಪೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಗಿರೀಶ್ ಶೆಟ್ಟಿ ತೆಳ್ಳಾರ್, ರವೀಂದ್ರನಾಥ ಭಂಡಾರಿ, ಡಾ| ಅರುಣೋದಯ ರೈ, ಮುನ್ನಲಾಯಿಗುತ್ತು ಸಚ್ಚಿದಾನಂದ ಶೆಟ್ಟಿ, ಡಾ| ಹರೀಶ್ ಶೆಟ್ಟಿ, ಸುರೇಶ್ ಗಂಧರ್ವ, ಸಚಿನ್ ಶೆಟ್ಟಿ ದುಬೈ, ಸುರೇಶ್ ಕುಂದರ್, ಚಂದ್ರಹಾಸ ಶೆಟ್ಟಿ ಇನ್ನ, ಗಣೇಶ್ ಆಳ್ವ, ವಿಶ್ವನಾಥ್ ಸಾಲ್ಯಾನ್, ರಾಜೇಶ್ ಶೆಟ್ಟಿ ತೆಳ್ಳಾರ್, ಮಹೇಶ್ ಪೂಜಾರಿ, ಕಿಶೋರ್ ಶೆಟ್ಟಿ ಮಿಯ್ನಾರು, ರೋಹಿತ್ ಶೆಟ್ಟಿ, ರಮೇಶ್ ಶೆಟ್ಟಿ ಸಿದ್ದಕಟ್ಟೆ, ಲೀಲಾಧರ ಸನಿಲ್, ಜಿ. ಕೆ. ಕೆಂಚನಕೆರೆ, ತೇಜಾ³ಲ್ ಕರ್ಕೇರ, ವಿಜಯಲಕ್ಷ್ಮೀ ಡಿ. ಶೆಟ್ಟಿ ಇವರು ಉಪಸ್ಥಿತರಿದ್ದರು.
ದಿನಪೂರ್ತಿ ಮತ್ತು ರಾತ್ರಿಯ ಹೊನಲು ಬೆಳಕಿನಲ್ಲಿ ನಡೆದ ಪಂದ್ಯಾಟವನ್ನು ಅಧಿಕ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ವೀಕ್ಷಿಸಿ ಸಹಕರಿಸಿದರು. ಲಘು ಉಪಾಹಾರದೊಂದಿಗೆ ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಚಿತ್ರ-ವರದಿ : ರಮೇಶ್ ಅಮೀನ್