Advertisement

ಮನರಂಜನೆ-ಮಾಹಿತಿಯ ಕಣಜ ತುಳುನಾಡ  ಸಂಸ್ಕೃತಿ 

06:00 AM Jun 15, 2018 | |

ಜಾನಪದ ತಜ್ಞ ದಯಾನಂದ ಕತ್ತಲಸಾರ್‌ ನಿರೂಪಣೆ ಹಾಗೂ ನಾಗೇಶ್‌ ಕುಲಾಲ್‌ ನಿರ್ದೇಶನದಲ್ಲಿ ಮೂಡಿ ಬಂದ ಈ ಕಾರ್ಯಕ್ರಮ ಸುಮಾರು ಮೂರು ತಾಸುಗಳ ಕಾಲ ಸಂಗೀತ, ನೃತ್ಯ, ಪುರಾಣ, ಇತಿಹಾಸ, ಸಂಸ್ಕೃತಿ ಹೀಗೆ ವಿವಿಧ ವಿಷಯಗಳಲ್ಲಿ ಮಾಹಿತಿಯ ಜತೆಗೆ ಮನೋರಂಜನೆಯನ್ನು ನೀಡಿತು.

Advertisement

ಶೀರೂರು ಶ್ರೀಗಳ ಜನ್ಮ ದಿನದ ಅಂಗವಾಗಿ ಜೂ. 8ರಂದು ಹಿರಿಯಡಕದ ಶ್ರೀವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಪ್ರದರ್ಶನಗೊಂಡ ಕಲಾಕುಂಭ ಕುಳಾಯಿ ಇವರ ತುಳುನಾಡ ಸಂಸ್ಕೃತಿ ಕಾರ್ಯಕ್ರಮವು ಕಣ್ಮನಗಳಿಗೆ ಮುದ ನೀಡಿತು. 
ಜಾನಪದ ತಜ್ಞ ದಯಾನಂದ ಕತ್ತಲ ಸಾರ್‌ ನಿರೂಪಣೆ  ಹಾಗೂ ನಾಗೇಶ್‌ ಕುಲಾಲ್‌ ನಿರ್ದೇಶನದಲ್ಲಿ ಮೂಡಿ ಬಂದ ಈ ಕಾರ್ಯಕ್ರಮ ಸುಮಾರು ಮೂರು ತಾಸುಗಳ ಕಾಲ ಸಂಗೀತ, ನೃತ್ಯ, ಪುರಾಣ, ಇತಿಹಾಸ, ಸಂಸ್ಕೃತಿ ಹೀಗೆ ವಿವಿಧ ವಿಷಯಗಳಲ್ಲಿ ಮಾಹಿತಿಯ ಜತೆಗೆ ಮನೋರಂಜನೆಯನ್ನು ನೀಡಿತು. ಗಣಪತಿ ಸ್ತುತಿಯೊಂದಿಗೆ ಆರಂಭಗೊಂಡ ಕಾರ್ಯಕ್ರಮದ ಎರಡನೇ ದೃಶ್ಯದಲ್ಲಿ ಇಡೀ ತುಳುನಾಡಿನ ಸಂಸ್ಕೃತಿ ಮೈದಳೆಯಿತು. ಪರಶುರಾಮನ ಸ್ತಬ್ಧ ಚಿತ್ರದ ಹಿನ್ನೆಲೆಯೊಂದಿಗೆ ಮೂಡಿ ಬಂದ ಈ ದೃಶ್ಯದಲ್ಲಿ ಭತ್ತ ಕುಟ್ಟುವುದು, ಮಡಕೆ ತಯಾರಿಸುವುದು, ಪೈರಿನಿಂದ ಭತ್ತ ಬೇರ್ಪಡಿಸುವುದು, ಚೆನ್ನೆ ಮಣೆ ಆಟ, ಬುಟ್ಟಿ ತಯಾರಿ, ಬಿತ್ತುವುದು … ಹೀಗೆ ತುಳುನಾಡಿನ ಸಂಸ್ಕೃತಿಯನ್ನು ಆಕರ್ಷಕ ಹಿನ್ನೆಲೆ ಹಾಡಿನೊಂದಿಗೆ ಪ್ರಸ್ತುತ ಪಡಿಸಲಾಯಿತು. 


ಅರುಣಾಸರ ಮರ್ದನ ದೃಶ್ಯದ ಮೂಲಕ ಕಟೀಲಿನ ಕಥೆಯನ್ನು ಕೂಡ ತಿಳಿಸಲಾಯಿತು. ಮೋಹಕ ಸ್ತ್ರೀಯಾಗಿ ಬರುವ ದೇವಿಯ ನೃತ್ಯ ಉತ್ತಮವಾಗಿತ್ತು. ವರದ ಪ್ರಭಾವದಿಂದ ಮೆರೆಯುತ್ತಿದ್ದ ಅರುಣಾಸುರನನ್ನು ದೇವಿ ವಜ್ರದುಂಬಿ ರೂಪ ತಾಳಿ ಕೊಲ್ಲುವ ದೃಶ್ಯ ಮನಮೋಹಕವಾಗಿತ್ತು. ಬಂಡೆಯಿಂದೆದ್ದು ಬಂದು ಅರುಣಾಸುರ ಸಂಹಾರ ಮಾಡುವ ಈ ಭಕ್ತಿ ಪ್ರಧಾನ ದೃಶ್ಯ ಖುಷಿ ಕೊಟ್ಟಿತು. ಇಲ್ಲಿ ಬಳಸಿದ ಈ ಸಿರಿತ ಬನ ಹಾಡು ಕೂಡಾ ಇಂಪಾಗಿ  ಮುದ ನೀಡಿತು. 

ರಾವಣ ಸಂಹಾರ ಮತ್ತು ಹನುಮಂತನ ಪ್ರತಾಪದ ದೃಶ್ಯದಲ್ಲಿ ಹನುಮಂತನ ಪಾತ್ರ ಮತ್ತು ಬಾಲ ರಾಮ ಲಕ್ಷ್ಮರು ಮತ್ತು ಸೀತೆ ಗಮನ ಸೆಳೆದರು. ಸೀತಾಪಹಾರ ಮತ್ತು ರಾವಣ ಸಂಹಾರವನ್ನು ಸಾಂಕೇತಿಕವಾಗಿ ತೋರಿಸಲಾಯಿತು. ಹನುಮಂತನು ರಾಮ ಲಕ್ಷ್ಮಣರನ್ನು ಹೆಗಲಲ್ಲಿ ಕೂರಿಸಿ ನೀಡಿದ ಫೋಸ್‌ ಮನಮೋಹಕವಾಗಿತ್ತು. ಪುರಾಣದ ದೃಶ್ಯಗಳ ಕಾಂಬಿನೇಷನ್‌. ಪುರಾಣದ ಪಾತ್ರಗಳನ್ನು ಮುಂದಿರಿಸಿಕೊಂಡು ಹನುಮಂತ ಮತ್ತು ರಾಮನನ್ನು ಸ್ತುತಿಸುವ ಆಧುನಿಕ ಹಾಡಿಗೆ ತಂಡ ಮಾಡಿದ ಫಿಲ್ಮಿ ಡ್ಯಾನ್ಸ್‌ ಮೋಹಕವಾಗಿತ್ತು.

ಕೋಟಿ – ಚೆನ್ನಯರ ಕಥೆಯನ್ನು ಸಾರುವ ಎರಡು ದೃಶ್ಯಗಳು ಉತ್ತಮವಾಗಿತ್ತು. ಅಕ್ಕ ಕಿನ್ನಿದಾರುವಿನ ಮನೆಗೆ ಕೋಟಿ ಚೆನ್ನಯರು ಬಳಿಕ ತಾಯಿ ಹೇಳಿದ್ದ ಹರಕೆಯನ್ನು ತೀರಿಸಲು ಬೆರ್ಮೆರೆ ಗುಡಿಗೆ ಹೋಗುವುದು, ಅಲ್ಲಿ ಕೆಮ್ಮಲೆತಾ ಬ್ರಹ್ಮ ಹಾಡಿನ ಮೂಲಕ ಗರ್ಭಗುಡಿಯ ಬಾಗಿಲು ತೆರೆಯುವಂತೆ ಮಾಡುವ ದೃಶ್ಯ ರೋಮಾಂಚನಗೊಳಿಸಿತು. ಬ್ರಹೆರ ರೂಪದಲ್ಲಿದ್ದ ಬಾಲಕ ಮತ್ತು ಇಂಪಾದ ಹಾಡು ಒಂದು ಕಡೆಯಾದರೆ, ಅದಕ್ಕೆ ಪೂರಕವಾಗಿ ಮತ್ತೂಂದು ತಂಡದಿಂದ ಆಧುನಿಕ ರೀತಿಯ ನೃತ್ಯ ಸಂಯೋಜನೆ ಮಾಡಲಾಗಿತ್ತು. ಇಂಥದ್ದೇ ಇನ್ನೊಂದು ದೃಶ್ಯದ ಮೂಲಕ ಅಬ್ಬಕ್ಕನ ಕಥೆಯನ್ನೂ ಸಾರಲಾಯಿತು. ಇಲ್ಲೂ ಸಣ್ಣದೊಂದು ಯುದ್ಧದ ದೃಶ್ಯ ಮತ್ತು ಆಧುನಿಕ ಶೈಲಿಯ ನೃತ್ಯವಿತ್ತು.

10 ವರ್ಷದ ಬಾಲಕಿ ಬ್ರಾಹ್ಮಿಯ ಆಕರ್ಷಕ ಯಕ್ಷಗಾನ ನೃತ್ಯ ಭೇಷ್‌ ಎನಿಸಿತು. ಹಿನ್ನೆಲೆಯಲ್ಲಿ ಪಟ್ಲ ಸತೀಶ್‌ ಶೆಟ್ಟರ ಹಾಡಿನ ಕ್ಯಾಸೆಟ್‌ ಬಳಸಲಾಗಿತ್ತು. ಈಕೆಯನ್ನು ಅಲ್ಲಿ ಉಪಸ್ಥಿತರಿದ್ದ ಶ್ರೀಗಳು ಶಾಲು ಹೊದೆಸಿ ಸಮ್ಮಾನಿಸಿ ಬೆನ್ನುತಟ್ಟಿದರು.
ದಶಾವತಾರ ದೃಶ್ಯದಲ್ಲಿ ಕೆಲವು ಅವತಾರಗಳನ್ನು ತೋರಿಸಲಾಯಿತು. ವಿಷ್ಣುವಿನ ಹಿನ್ನೆಲೆಯಲ್ಲಿ ಮತ್ಸಾವತಾರ, ಕೃಷ್ಣಾವತಾರ, ನರಸಿಂಹಾವತಾರ ಮುಂತಾದವು ತುಂಬಾ ಖುಷಿ ಕೊಟ್ಟಿತು. ನರಸಿಂಹನು ಹಿರಣ್ಯ ಕಶಿಪುವನ್ನು ಕೊಲ್ಲುವ ದೃಶ್ಯ ಅದ್ಬುತವಾಗಿತ್ತು. ಇಲ್ಲೂ ಆಧುನಿಕ ಶೈಲಿಯ ಡ್ಯಾನ್ಸ್‌ ಕಣ್ಣಿಗೆ ಖುಷಿ ಕೊಟ್ಟಿತು.

Advertisement

ತುಳುನಾಡಿನ ಜಾನ ಪದ ಕಲೆಯಾದ ಕಂಬಳದ ಪ್ರದರ್ಶನವೂ ಭರ್ಜರಿ ಚಪ್ಪಾಳೆ ಗಿಟ್ಟಿಸಿತು. ಸಭೆಯ ಮಧ್ಯದಿಂದಲೇ ವೇದಿಕೆ ಪ್ರವೇಶಿಸಿದ ಕೋಣ ಪಾತ್ರಧಾರಿಗಳು ಮತ್ತು ಕಂಬಳದ ಓಟಗಾರರು ಮತ್ತು ತಂಡ ವೇದಿಕೆ ಯಲ್ಲೂ ಉತ್ತಮ ಪ್ರದರ್ಶನ ನೀಡುವಲ್ಲಿ ಸಫ‌ಲವಾಯಿತು. ಮಹಿಷಮರ್ದಿನಿ ದೃಶ್ಯದಲ್ಲಿ ಯಕ್ಷಗಾನದ ರೀತಿಯಲ್ಲೇ ಮಹಿಷಾಸುರ ಸಂಹಾರದ ದೃಶ್ಯವನ್ನು ತೋರಿಸಲಾಯಿತು. ಇಲ್ಲೂ ಸತೀಶ್‌ ಶೆಟ್ಟಿ ಅವರ ದೇವಿ ಮಹಾತ್ಮೆ ಪ್ರಸಂಗದ ಹಾಡಿನ ಧ್ವನಿ ಸುರುಳಿ ಬಳಸಲಾಗಿತ್ತು. 

ಪುತ್ತಿಗೆ ಪದ್ಮನಾಭ ರೈ

Advertisement

Udayavani is now on Telegram. Click here to join our channel and stay updated with the latest news.

Next