ಮಂಗಳೂರು: ತುಳು ಚಿತ್ರರಂಗದಲ್ಲಿ ವಿಭಿನ್ನವಾದ ಕಥಾ ಹಂದರದೊಂದಿಗೆ ಮೂಡಿ ಬಂದು ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ “ಶಕಲಕ ಬೂಂ ಬೂಂ” ಸಿನಿಮಾ ಎರಡನೇ ವಾರವೂ ಭರ್ಜರಿ ಪ್ರದರ್ಶನ ಕಾಣುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.
ಇದನ್ನೂ ಓದಿ:ಭಾರತ ಇಂದು ನಿರ್ಭೀತ ಮತ್ತು ನಿರ್ಣಾಯಕ, ಸದೃಢ ಸರ್ಕಾರ ಹೊಂದಿದೆ: ರಾಷ್ಟ್ರಪತಿ ಮುರ್ಮು
ಏಕತಾನತೆಗೆ ಶರಣಾಗದೆ ವಿಭಿನ್ನತೆಗೆ ಒತ್ತು ನೀಡಿ ರಚಿಸಿದ ಅದ್ಭುತವಾದ ಕಾಮಿಡಿ ಹಾರರ್, ತ್ರಿಲ್ಲರ್ ಸಸ್ಪೆನ್ಸ್ ಚಿತ್ರ ಐಷಾರಾಮಿ ಜೀವನ ನಡೆಸಲು, ಸುಲಭವಾಗಿ ಧನ ಸಂಪಾದಿಸಲು ಅಡ್ಡದಾರಿ ಹಿಡಿದ 5 ಜನ ಒಂದು ಸಂದೇಶದ ಮುಖೇನ ಪುರಾತನವಾದ ಪಾಳು ಬಿದ್ದ ಮನೆಯಲ್ಲಿ ಬಂಧಿಗಳಾಗುತ್ತಾರೆ.
ಪಾಳು ಬಿದ್ದ ಮನೆಯಲ್ಲಿ ನಡೆಯುವ ಅಚಾತುರ್ಯಗಳು ವಿಚಿತ್ರವಾದ ದೃಷ್ಟಾಂತಗಳಿಂದ ಬೇಸತ್ತು ಅವರು ಮಂತ್ರವಾದಿಯನ್ನು ಕರೆದು ಇದರ ಸೂಕ್ಷ್ಮತೆ ಹಾಗೂ ನಿಜ ವಿಚಾರ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ.
ಆ ಪಾಳು ಬಿದ್ದ ಮನೆಯಲ್ಲಿ ನಡೆದ ವಿಪರ್ಯಾಸಗಳು ಘಟನೆಗಳೇನು? ಮನೆಯ ಮೂಲ ಕಥೆ ಏನು? ಅಲ್ಲಿ ಏನಾಗಿರಬಹುದು? ಎಂಬ ವಿಶಿಷ್ಟವಾದ ಕಥಾನಕ ಹೊಂದಿರುವ ತುಳುವಿನಲ್ಲಿ ಕಾಮಿಡಿಯೊಂದಿಗೆ ಇತರ ವಿಚಾರಗಳನ್ನು ಮಿಶ್ರಗೊಳಿಸಿ ಎಲ್ಲಾ ವಯೋಮಾನದವರನ್ನು, ವಿವಿಧ ಸ್ಥರದ ಪ್ರೇಕ್ಷಕರನ್ನು ಸೆಳೆಯುವ ಹಾಗೂ ಜನರಿಗೆ,ರಂಜನೆಯೊಂದಿಗೆ ಸಂದೇಶ ನೀತಿ ಪ್ರೀತಿ, ಬಾಂದವ್ಯ, ಸತ್ಯಾಸತ್ಯತೆ, ಮೋಸ, ವಂಚನೆ, ಅಸಹಾಯಕತೆಯ ಎಡಗೆ ಬೆಳಕು ಚೆಲ್ಲಿ ಉಡುಪಿಯ 150 ವರ್ಷಗಳ ಹಳೆಯ ಮನೆ ಹಾಗೂ ಸುತ್ತಮುತ್ತಲು, ಚಿಕ್ಕಮಗಳೂರು, ಕುದುರೆಮುಖ ದಂತಹ ಸುಂದರವಾದ ಪರಿಸರದಲ್ಲಿ ಚಿತ್ರೀಕರಿಸಲಾಗಿದೆ.
ಶಕಲಕ ಸಿನಿಮಾವನ್ನು ಚಿತ್ರಪ್ರೇಮಿಗಳು ವೀಕ್ಷಿಸಿ ನಮ್ಮ ತಂಡವನ್ನು ಬೆಂಬಲಿಸಿ ಹಾಗೂ ಚರ್ಮ ಮತ್ತು ಅಂಗಾಂಗ ದಾನದಂತಹ ಮಹತ್ ಕಾರ್ಯದಲ್ಲಿ ಕೈಜೋಡಿಸಿ ಜೀವನ ಸಾರ್ಥಕಗೊಳಿಸಿ ಎಂದು ನಿರ್ಮಾಪಕ ನಿತ್ಯಾನಂದ ನರಸಿಂಗೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.