Advertisement

Roopesh Shetty; ಕಿರುತೆರೆಯಲ್ಲಿ ‘ಸರ್ಕಸ್‌’ ಖುಷಿ

11:12 AM Sep 11, 2023 | Team Udayavani |

ತುಳು ಚಿತ್ರರಂಗ ಕೂಡಾ ಈಗ ಬೆಳೆಯುತ್ತಿದೆ. ಸಾಕಷ್ಟು ಪ್ರತಿಭೆಗಳು ಅಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ. ಆದರೆ, ಅವರ ಪ್ರಯೋಗಕ್ಕೆ ತಕ್ಕ ಮಾರುಕಟ್ಟೆ ಇಲ್ಲ ಎಂಬ ಬೇಸರ ಅಲ್ಲಿನ ಸಿನಿಮಂದಿಯದ್ದು. ಅದರಲ್ಲೂ ತಾವು ಮಾಡಿದ ಸಿನಿಮಾಕ್ಕೆ ಮನರಂಜನಾ ಕ್ಷೇತ್ರದ ಮುಖ್ಯ ವಾಹಿನಿಗಳು ಮನ್ನಣೆ ನೀಡುವುದಿಲ್ಲ ಎಂಬ ದೂರು ಆಗಾಗ ಕೇಳಿಬರುತ್ತಲೇ ಇರುತ್ತದೆ. ಆದರೆ, ಈ ಬಾರಿ “ಸರ್ಕಸ್‌’ ಚಿತ್ರ ಆ ದೂರಿನಿಂದ ದೂರ ಉಳಿದಿದೆ. ಅದಕ್ಕೆ ಕಾರಣ ಚಿತ್ರಕ್ಕೆ ಕಿರುತೆರೆಯಲ್ಲಿ ಸಿಕ್ಕ ಬೆಂಬಲ.

Advertisement

“ಬಿಗ್‌ಬಾಸ್‌’ ಖ್ಯಾತಿಯ ರೂಪೇಶ್‌ ಶೆಟ್ಟಿ ನಿರ್ದೇಶಿಸಿ, ನಾಯಕರಾಗಿ ನಟಿಸಿರುವ ಈ ಚಿತ್ರ ಸ್ಟಾರ್‌ ಸುವರ್ಣದಲ್ಲಿ ಭಾನುವಾರ ಪ್ರಸಾರವಾಗಿದೆ. ಈ ಮೂಲಕ ತುಳು ಸಿನಿಮಾ ಪ್ರೇಮಿಗಳು ಖುಷಿಯಾಗಿದ್ದಾರೆ.

ಔಟ್‌ ಅಂಡ್‌ ಔಟ್‌ ಕಾಮಿಡಿಯಾಗಿ ಮೂಡಿಬಂದಿರುವ ಈ ಚಿತ್ರದಲ್ಲಿ ಭೋಜರಾಜ ವಾಮಂಜೂರು, ನವೀನ್‌ ಡಿ ಪಡೀಲ್‌ ಸೇರಿದಂತೆ ತುಳು ಚಿತ್ರರಂಗದ ಹಾಸ್ಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next