Advertisement

ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯಾಗಿ ಮನ್ನಣೆ ನೀಡಲು ಕರಾವಳಿ ಶಾಸಕರುಗಳ ಒತ್ತಾಯ

05:36 PM Aug 27, 2020 | sudhir |

ಸುರತ್ಕಲ್: ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯಾಗಿ ಮನ್ನಣೆ ನೀಡಬೇಕೆಂದು ಮುಖ್ಯಮಂತ್ರಿಗಳಾದ ಬಿ.ಎಸ್‌ ಯಡಿಯೂರಪ್ಪ ರವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.

Advertisement

ನಮ್ಮ ದೇಶದಲ್ಲಿನ ಬಹುತೇಕ ರಾಜ್ಯಗಳಲ್ಲಿ ತಮ್ಮ ತಮ್ಮ ರಾಜ್ಯದಲ್ಲಿನ ಉತ್ತಮ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಭಾಷೆಗಳನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಸಂವಿಧಾನದ ಆರ್ಟಿಕಲ್‌ 345- ಬಿ ಪ್ರಕಾರ ಘೋಷಿಸಿಕೊಂಡಿದೆ. ಕಳೆದ 2011ನೇ ಜನಗಣತಿ ಪ್ರಕಾರ ಸುಮಾರು18.05 ಲಕ್ಷ ಜನರು ಅ ಕೃತವಾಗಿ ತುಳು ಭಾಷೆಯನ್ನು ಮಾತನಾಡುತ್ತಾರೆ.

ಕರ್ನಾಟಕ ತುಳು ಆಕಾಡೆಮಿ ಹಾಗೂ ತುಳು ಸಂಘ ಸಂಸ್ಥೆಗಳ ಪ್ರಕಾರ ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಸರಿ ಸುಮಾರು 40 ಲಕ್ಷಕ್ಕೂ ಅಧಿಕ ತುಳು ಭಾಷಿಕರಿದ್ದು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸುಮಾರು ಒಂದುವರೆ ಕೋಟಿಗಿಂತಲೂ ಅಧಿಕ ತುಳು ಭಾಷಿಕರಿರುವುದನ್ನು ಗುರುತಿಸಲಾಗಿದೆ. ಆದ್ದರಿಂದ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಈ ಕುರಿತಾದ ಸಾಂವಿಧಾನಿಕ ಕಾನೂನುಗಳ ಪ್ರಕಾರ ಪ್ರಸ್ಥಾವನೆಯನ್ನು ಮಂಡಿಸಿ ತುಳು ಭಾಷೆಯನ್ನು ಕರ್ನಾಟಕದ ಅಧಿಕೃತ ಭಾಷೆ ಎಂದು ಸಂವಿಧಾನದ ಆರ್ಟಿಕಲ್‌ 345ರ ಪ್ರಕಾರ ಘೋಷಿಸಲು ರಾಜ್ಯ ಸರ್ಕಾರವು ಅನುಸರಿಸಬೇಕಾದ ಮತ್ತು ಈಗಾಗಲೇ ಈ ಕುರಿತಾಗಿ ಕೈಗೊಂಡ ಕ್ರಮಗಳೊಂದಿಗೆ ಸಾಂವಿಧಾನಿಕ ನೀತಿ ನಿಯಮಗಳ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದವರು ಅನುಮೋದನೆಯನ್ನು ನೀಡುವಂತೆ ಆಗ್ರಹಿಸುವುದರ ಮೂಲಕ ತುಳುನಾಡಿನ ಸಮಸ್ತರ ದೀರ್ಘ‌ಕಾಲದ ಬೇಡಿಕೆಯನ್ನು ಈಡೇರಿಸಬೇಕೆಂದು ಕರಾವಳಿ ಜಿಲ್ಲೆಯ ಶಾಸಕರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಮೂಲ್ಕಿ- ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್‌, ಮಂಗಳೂರು ಉತ್ತರ ಶಾಸಕರಾದ ಡಾ.ಭರತ್‌ ಶೆಟ್ಟಿ, ಪುತ್ತೂರು ಶಾಸಕರಾದ ಸಂಜೀವ ಮಟಂದೂರು, ವಿಧಾನ ಪರಿಷತ್‌ ಸದಸ್ಯರಾದ ಪ್ರತಾಪ್‌ ಸಿಂಹ ನಾಯಕ್‌ ಹಾಗೂ ಶಾಂತಾರಾಮ ಸಿದ್ದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next