Advertisement

ತುಳುಕೂಟ ಯುವ ವಿಭಾಗದಿಂದ ಸೂಪರ್‌ ಸೆವೆನ್‌ ಬಾಕ್ಸ್‌ ಕ್ರಿಕೆಟ್‌ ಪಂದ್ಯಾಟ

03:36 PM Apr 04, 2019 | Team Udayavani |

ಪುಣೆ: ಪುಣೆ ತುಳುಕೂಟ ಯುವ ವಿಭಾಗದಿಂದ ಸೂಪರ್‌ ಸೆವೆನ್‌ ಬಾಕ್ಸ್‌ ಕ್ರಿಕೆಟ್‌ ಪಂದ್ಯಾವಳಿಯು ಮಾ. 31ರಂದು ಸೆಂಟ್ರಲ್‌ಮಾಲ್‌ನಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.

Advertisement

ಹಗಲು ರಾತ್ರಿ ನಡೆದ ಈ ಪಂದ್ಯಾಟದಲ್ಲಿ 38 ತಂಡಗಳು ಭಾಗವಹಿಸಿದ್ದು ವಿಶೇಷವಾಗಿತ್ತು . ಈ ಪಂದ್ಯಾಟದಲ್ಲಿ ತುಳು ಸೂಪರ್‌ ರೈಸರ್ಸ್‌, ಟೀಮ್‌ ಉರ್ಜಾ, ಬಂಟ್ಸ್‌ ಅಸೋಸಿಯೇಶನ್‌ ಪುಣೆ ಹಾಗೂ ಯೂತ್‌ ಬಂಟ್ಸ್‌ ತಂಡಗಳು ಸೆಮಿಫೈನಲ್‌ ಹಂತಕ್ಕೆ ತಲುಪಿದ್ದವು. ಅಂತಿಮ ವಾಗಿ ತುಳು ಸೂಪರ್‌ ರೈಸರ್ಸ್‌ ಮತ್ತು ಬಂಟ್ಸ್‌ ಅಸೋಸಿಯೇಶನ್‌ ಪುಣೆ ಫೈನಲ್‌ನಲ್ಲಿ ಸೆಣಸಿದ್ದು ತುಳು ಸೂಪರ್‌ ರೈಸರ್ಸ್‌ ವಿನ್ನರ್ಸ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡರೆ, ಬಂಟ್ಸ್‌ ಅಸೋಸಿಯೇಶನ್‌ ರನ್ನರ್ಸ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಉತ್ತಮ ದಾಂಡಿಗ ಪ್ರಶಸ್ತಿಯನ್ನು ನಿತಿನ್‌ ಶೆಟ್ಟಿ ಹಾಗೂ ಸ್ನೇಹಾ ಶೆಟ್ಟಿ, ಅತ್ಯುತ್ತಮ ಬೌಲಿಂಗ್‌ ಪ್ರಶಸ್ತಿಯನ್ನು ಸಂತೋಷ್‌ ಶೆಟ್ಟಿ ಹಾಗೂ ಅಶುತಾ ಜೋಗಿ ಪಡೆದರು.

ಈ ಸಂದರ್ಭ ಯುವ ವಿಭಾಗದ ವತಿಯಿಂದ ಡಾ| ಕಲ್ಮಾಡಿ ಶ್ಯಾಮರಾವ್‌ ಕನ್ನಡ ಮಾಧ್ಯಮ ಹೈಸ್ಕೂಲ್‌ನ ಬಡ ಪ್ರತಿಭಾವಂತ ಐದು ವಿದ್ಯಾರ್ಥಿಗಳನ್ನು ರೂ. 25000 ಧನ ಸಹಾಯವನ್ನಿತ್ತು ಸತ್ಕರಿಸಲಾಯಿತು. ರಾತ್ರಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಅತಿಥಿಗಳಾಗಿ ಕಾರ್ಕಳ ಅಜೆಕಾರು ಜ್ಯೋತಿ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯಿನಿ ಸಿಸ್ಟರ್‌ ರೀನಾ ಬಿ. ಎಸ್‌., ಬಂಟ್ಸ್‌ ಅಸೋಸಿಯೇಶನ್‌ ಪುಣೆ ಅಧ್ಯಕ್ಷರಾದ ಆನಂದ್‌ ಶೆಟ್ಟಿ ಮಿಯ್ನಾರು, ಉಪಾಧ್ಯಕ್ಷರಾದ ಗಣೇಶ್‌ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಅರವಿಂದ ರೈ, ಕ್ರೀಡಾ ಕಾರ್ಯಾಧ್ಯಕ್ಷ ಸತೀಶ್‌ ಶೆಟ್ಟಿ ಎರವಾಡ, ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷರಾದ ಗಣೇಶ್‌ ಪೂಂಜಾ, ಪುರು ಷೋತ್ತಮ ಶೆಟ್ಟಿ, ದಿವಾಕರ ಶೆಟ್ಟಿ, ಸಂಘದ ಅಧ್ಯಕ್ಷ ಮೋಹನ್‌ ಶೆಟ್ಟಿ ಎಣ್ಣೆಹೊಳೆ, ಗೌರವಾಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು,
ಸ್ಥಾಪಕಾಧ್ಯಕ್ಷ ಜಯ ಕೆ. ಶೆಟ್ಟಿ, ಮಾಜಿ ಅಧ್ಯಕ್ಷ ಮಿಯ್ನಾರು ರಾಜ್‌ ಕುಮಾರ್‌ ಎಂ. ಶೆಟ್ಟಿ, ಪದಾಧಿಕಾರಿಗಳಾದ ದಿನೇಶ್‌ ಶೆಟ್ಟಿ ಬಜಗೋಳಿ, ಸಂತೋಷ್‌ ಶೆಟ್ಟಿ ಎಣ್ಣೆಹೊಳೆ, ದಿವಾಕರ ಶೆಟ್ಟಿ ಮಾಣಿಬೆಟ್ಟು, ಶರತ್‌ ಶೆಟ್ಟಿ ಅತ್ರಿವನ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಾತಾ ಡಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾಯವಾದಿ ರೋಹನ್‌ ಪಿ. ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಬೆಳಗ್ಗಿನ ಉಪಾಹಾರವನ್ನು ಸುಮಿತ್ರಾ ಎಸ್‌. ಶೆಟ್ಟಿ ಪ್ರಾಯೋಜಿಸಿದ್ದರು. ಚಹಾದ ವ್ಯವಸ್ಥೆಯನ್ನು ಸಂತೋಷ್‌ ಶೆಟ್ಟಿ ಅವರು ಪ್ರಾಯೋಜಿಸಿದ್ದು, ಮಧ್ಯಾಹ್ನದ ಭೋಜನವನ್ನು ಹೊಟೇಲ್‌ ರಾಧಾಕೃಷ್ಣ ವತಿಯಿಂದ ಹಾಗೂ ರಾತ್ರಿಯ ಭೋಜನ ವನ್ನು ದಿವಾಕರ ಶೆಟ್ಟಿ ಮಾಣಿಬೆಟ್ಟು ಪ್ರಾಯೋಜಿಸಿದರು. ಪಂದ್ಯಾ ಟವನ್ನು ಯುವ ವಿಭಾಗದ ಅಭಿಜಿತ್‌ ಶೆಟ್ಟಿ, ಸುಮಿತ್‌ ಶೆಟ್ಟಿ, ಭಾಗೆÂàಶ್‌ ಶೆಟ್ಟಿ, ಆಕಾಶ್‌ ಶೆಟ್ಟಿ, ಪ್ರತೀಕ್‌ ಶೆಟ್ಟಿ, ಸುಜಯ್‌ ಶೆಟ್ಟಿ, ವಿನೀತ್‌ ಪೂಜಾರಿ, ರತನ್‌ ಸಾಲ್ಯಾನ್‌, ರಾಜೇಂದ್ರ ಕೋಟ್ಯಾನ್‌, ರವಿರಾಜ್‌ ಶೆಟ್ಟಿ, ಮಹೇಶ್‌ ನಾಯ್ಕ…, ನಿತಿನ್‌ ಶೆಟ್ಟಿ, ಶ್ರುತಿ ಶೆಟ್ಟಿ, ಪೂಜಾ ಶೆಟ್ಟಿ, ದಿಶಾ ಶೆಟ್ಟಿ, ದೀûಾ ಶೆಟ್ಟಿ, ಮಲ್ಲಿಕಾ ಕುಲಾಲ…, ಸರಿತಾ ಶೆಟ್ಟಿ, ಅಪೂರ್ವಾ ಶೆಟ್ಟಿ, ಸುಶೀಲ್‌ ಶೆಟ್ಟಿ, ಸುಚೇತ್‌ ಶೆಟ್ಟಿ, ಪ್ರಾಣೇಶ್‌ ಶೆಟ್ಟಿ ಮತ್ತು ಆಕಾಶ್‌ ಶೆಟ್ಟಿ ಆಯೋಜಿಸಿದ್ದರು. ಪುಣೆ ತುಳುಕೂಟದ ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು, ಯುವ ವಿಭಾಗದ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ತುಳು-ಕನ್ನಡಿಗರು ಉಪಸ್ಥಿತರಿದ್ದರು.

ಚಿತ್ರ-ವರದಿ: ಕಿರಣ್‌ ಬಿ. ರೈ ಕರ್ನೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next