Advertisement
ಗುರುವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ರಂಜಿತ್ ಸುವರ್ಣ, ಪ್ರದರ್ಶನದ ಮೊದಲೇ ಹಿಂದಿಗೆ ಡಬ್ ಆದ ಮೊದಲ ಸಿನೆಮಾ “ಉಮಿಲ್’. ಪುನೀತ್ ರಾಜ್‌ಕುಮಾರ್ ಹಾಡಿರುವ ತುಳುವಿನ ಮೊದಲ ಸಿನೆಮಾ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಇದರ ಟ್ರೇಲರ್ ಅನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸಂಪೂರ್ಣ ಹಾಸ್ಯಮಯವಾಗಿ ರುವ ಈ ಸಿನೆಮಾವನ್ನು ಕೋಟಿ ರೂ. ಖರ್ಚಿನಲ್ಲಿ ಸಿದ್ಧಪಡಿಸಲಾಗಿದೆ ಎಂದರು.ಆ್ಯನಿಮೇಶನ್ ಕೆಲಸವನ್ನು ಕೆನಡಾದಲ್ಲಿ ಮಾಡಲಾಗಿದೆ. ಎಫೆಕ್ಟ್‌ನು ಹೈದರಾಬಾದ್ ಹಾಗೂ ಮಾಡೆಲಿಂಗ್‌ನ್ನು ಮುಂಬಯಿಯಲ್ಲಿ ನಡೆಸಲಾಗಿದೆ ಎಂದರು.
ತಮಿಳು ಸಿನೆಮಾ ಪ್ರದರ್ಶನ ಕಾರಣ ತುಳು ಸಿನೆಮಾಕ್ಕೆ ಮಂಗಳೂರಿನಲ್ಲಿ ಒಂದೂ ಥಿಯೇಟರ್ ಸಿಗಲಿಲ್ಲ ಮಂಗಳೂರಿನ ಬಿಗ್ ಸಿನೆಮಾ, ಪಿವಿಆರ್, ಸಿನೆಪೊಲಿಸ್, ಸುರತ್ಕಲ್‌ನ ನಟರಾಜ್, ಪುತ್ತೂರಿನ ಅರುಣಾ, ಸುಳ್ಯದ ಸಂತೋಷ್, ಕಾರ್ಕಳದ ಪ್ಲಾನೆಟ್, ಮೂಡುಬಿದಿರೆಯ ಅಮರಶ್ರೀ, ಕಾಸರಗೋಡಿನ ಸಿನಿಕೃಷ್ಣ, ಉಡುಪಿಯ ಕಲ್ಪನಾ,ಮಣಿಪಾಲದ ಐನಾಕ್ಸ್, ಬಿಗ್ ಸಿನೆಮಾದಲ್ಲಿ “ಉಮಿಲ್’ ಪ್ರದರ್ಶನಗೊಳ್ಳಲಿದೆ ಎಂದರು. ನಿರ್ಮಾಪಕರಾದ ಕರುಣಾಕರ ಶೆಟ್ಟಿ, ನಟಿ ಪೂಜಾ ಶೆಟ್ಟಿ, ಕಲಾನಿರ್ದೇಶಕ ವಿಲ್‌ಫ್ರೆಡ್ ಪಿಂಟೋ ಉಪಸ್ಥಿತರಿದ್ದರು.
Related Articles
“ಉಮಿಲ್’ ಪೂರ್ಣ ಮಟ್ಟದಲ್ಲಿ ಕಾಮಿಡಿ ಗೆಟಪ್‌ನಲ್ಲಿ ಮೂಡಿಬಂದಿದೆ. ಆ್ಯನಿಮೇಶನ್ ಮೂಲಕ ಸಿದ್ಧಗೊಳಿಸಲಾಗಿದೆ. ನವೀನ್ ಡಿ. ಪಡೀಲ್ ವಿಭಿನ್ನ ಪಾತ್ರದಲ್ಲಿದ್ದಾರೆ. ಅರವಿಂದ ಬೋಳಾರ್ ಒಂದು ಹಾಡನ್ನು ಹಾಡಿದ್ದಾರೆ. ಭೋಜರಾಜ್ ವಾಮಂಜೂರು ಏಳು ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯಲಿದ್ದಾರೆ. ಸಿನೆಮಾಕ್ಕಾಗಿ ಕಳೆದ ಎರಡು ವರ್ಷಗಳಿಂದ ಶ್ರಮವಹಿಸಿ ದುಡಿಯಲಾಗಿದೆ ಎಂದು ನಿರ್ದೇಶಕ ರಂಜಿತ್ ಸುವರ್ಣ ತಿಳಿಸಿದ್ದಾರೆ
Advertisement