Advertisement

ಶೂಟಿಂಗ್‌,ಮೇಕಿಂಗ್‌ ಪೂರ್ಣಗೊಳಿಸಿದ ಗಿರಿಗಿಟ್‌

10:37 PM May 15, 2019 | Sriram |

ಕುಡ್ಲದ ನಾಯಕ ನಟ ರೂಪೇಶ್‌ ಶೆಟ್ಟಿ ನಿರ್ದೇಶನದ “ಗಿರಿಗಿಟ್‌’ ಸಿನೆಮಾ ಸದ್ಯ ಶೂಟಿಂಗ್‌, ಮೇಕಿಂಗ್‌ ಎಲ್ಲ ಪೂರ್ಣಗೊಳಿಸಿ ಬಿಡುಗಡೆಯ ನಿರೀಕ್ಷೆಯಲ್ಲಿದೆ.

Advertisement

ಸದ್ಯಕ್ಕೆ ಕುಡ್ಲದಲ್ಲಿ ಹೊಸ ನಿರೀಕ್ಷೆ ಮೂಡಿಸಿದ ಸಿನೆಮಾ ಇದು ಎಂದು ಹೇಳಲಾಗುತ್ತಿದೆ. ಯಾಕೆಂದರೆ, ಕುಡ್ಲದ ಎಲ್ಲ ಕಾಮಿಡಿ ಕಲಾವಿದರನ್ನು ಇಟ್ಟುಕೊಂಡು ಮಾಡಿದ ಸಿನೆಮಾವಿದು. ಹೀಗಾಗಿ ಕಾಮಿಡಿ ಹಾಗೂ ಕತೆ ಎಲ್ಲ ಒಂದು ಹಂತದಲ್ಲಿ ಮಿಕ್ಸ್‌ ಆಗಿ ರೂಪುಗೊಂಡ ಸಿನೆಮಾ. ಡಬ್ಬಿಂಗ್‌ ಸಮಯದಲ್ಲಿ ಅರವಿಂದ ಬೋಳಾರ್‌, ಪ್ರಸನ್ನ ಶೆಟ್ಟಿ ಬೈಲೂರು ಅವರ ಡೈಲಾಗ್‌ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಸೌಂಡ್‌ ಮಾಡಿತ್ತು.

ನವೀನ್‌ ಡಿ. ಪಡೀಲ್‌ ಮಿಲಿಟ್ರಿ ಆಫೀಸರ್‌ ಹಾಗೂ ಅರವಿಂದ ಬೋಳಾರ್‌ ಲಾಯರ್‌ ಗೆಟಪ್‌ನಲ್ಲಿ ಸಿನೆಮಾದಲ್ಲಿರುವ ಕಾರಣದಿಂದ ವಿಭಿನ್ನತೆಗೆ ಇಲ್ಲಿ ಕಡಿಮೆ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ರೂಪೇಶ್‌ ಶೆಟ್ಟಿ, ಶಿಲ್ಪಾ ಶೆಟ್ಟಿ ಮುಖ್ಯಭೂಮಿಕೆಯ ಈ ಸಿನೆಮಾದಲ್ಲಿ ಭೋಜರಾಜ್‌ ವಾಮಂಜೂರು, ಉಮೇಶ್‌ ಮಿಜಾರ್‌, ಸಂದೀಪ್‌ ಶೆಟ್ಟಿ ಮಾಣಿಬೆಟ್ಟು ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next