Advertisement

ಡೊಂಬಿವಲಿ: ಜನಮನಗೆದ್ದ ನಿಶ್ಚಯ ಆಂಡ್‌ ನಾಟಕ

03:27 PM Feb 27, 2018 | Team Udayavani |

ಡೊಂಬಿವಲಿ: ಇತ್ತೀಚೆಗೆ ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ ಡೊಂಬಿವಲಿ ಇದರ ವಾರ್ಷಿಕೋತ್ಸವದಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿ ನಡೆದ ನಿಶ್ಚಯ ಆಂಡ್‌ ನಾಟಕವು ಪ್ರೇಕ್ಷಕರ ಮನಸನ್ನು ಸೂರೆಗೊಂಡಿತು. ಅನುಭವಿ-ಅನನುಭವಿ ಕಲಾವಿದರನ್ನು ಒಗ್ಗೂಡಿಸಿ ನಿರ್ದೇಶಕರು ನಡೆಸಿದ ಪ್ರಯೋಗವು ಕೊನೆಗೂ ಯಶಸ್ವಿಯಾಯಿತು.

Advertisement

ನಾಟಕದ ಮುಖ್ಯ ಪಾತ್ರಧಾರಿ ಅನುಭವಿ ರಂಗಕಲಾವಿದ ಶ್ರೀನಿವಾಸ ಕಾವೂರು, ಮನೆಯ ಮಾಲಕ ಸುಂದರ ರಾಯರ ಪಾತ್ರವನ್ನು ಅರ್ಥಪೂರ್ಣವಾಗಿ ನಿಭಾಯಿಸಿದರೆ, ಸುಂದರರಾಯರ ಮಗ ಆನಂದರಾಯರ ಪಾತ್ರದಲ್ಲಿ ರಂಗ ಕಲಾವಿದ ಅಜೆಕಾರು ಜಯ ಶೆಟ್ಟಿ ಅವರ ಯಶಸ್ವಿ ಅಭಿನಯವು ಪ್ರೇಕ್ಷಕರ ಮನಗೆದ್ದಿತು. ಆನಂದರಾಯರ ಪತ್ನಿಯಾಗಿ ಸಂಸಾರ ನಿಭಾಯಿಸುವ ಸುನಂದಾಳ ಪಾತ್ರದಲ್ಲಿ ಶೋಭಾ ಟಿ. ಪೂಜಾರಿ ತನ್ನೊಳಗಿನ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಂದರರಾಯರ ಮಗಳಿಗಾಗಿ ಆಸ್ತಿಗಾಗಿ ಸದಾ ಜಗಳಾಡುವ ಜಗಳ ಗಂಟಿಯಾಗಿ ಚಿತ್ರಾ ಆರ್‌. ಸಾಲ್ಯಾನ್‌, ಆನಂದರಾಯನ ಮಗ ಕುಡುಕ ಜಗ್ಗುವಿನ ಪಾತ್ರದಲ್ಲಿ ಜಯ ಪೂಜಾರಿ, ಹಾಸ್ಯ ಪಾತ್ರದಲ್ಲಿ ಜಗದೀಶ್‌ ಶೆಟ್ಟಿ, ಮನೆ ಕೆಲಸದಾಳು ರಾಜನ ಪಾತ್ರದಲ್ಲಿ ಯುವ ಪ್ರತಿಭೆ ತೃಪ್ತಿ ಕುಂದರ್‌, ವಕೀಲನಾಗಿ ವಿನೋದ್‌ ಕರ್ಕೇರ, ನೆಂಟಸ್ತಿಕೆಯ ದಲ್ಲಾಳಿ ಲೀಲಾಳ  ಪಾತ್ರದಲ್ಲಿ ಉದಯಾ ಜೆ. ಶೆಟ್ಟಿ ಅವರು ತಮಗೆ ನೀಡಿದ ಪಾತ್ರಗಳಿಗೆ ಜೀವ ತುಂಬುವಲ್ಲಿ ಯಶಸ್ವಿಯಾದರು.

ವೆಂಕಟೇಶನ ಪಾತ್ರದಲ್ಲಿ ಪ್ರಪ್ರಥಮವಾಗಿ ರಂಗಭೂಮಿ ಪ್ರವೇಶಿದ ನೃತ್ಯ ನಿರ್ದೇಶಕ ವಿನೀತ್‌ ಕೆ. ಶೆಟ್ಟಿ ಅವರ ಅಭಿನಯವು ಅಭಿನಂದನೀಯವಾಗಿತ್ತು. ಊರಿನ ಗುರಿಕಾರನಾಗಿ ಪ್ರಬುದ್ಧ ಕಲಾವಿದ ಚಂದ್ರಹಾಸ ರೈ ಅವರು ಶಂಭು ಗುರಿಕಾರನ ಪಾತ್ರವನ್ನು ನಿಭಾಯಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಸಿಐಡಿ ಇನ್‌ಸ್ಪೆಕ್ಟರ್‌ ಶಿವಾನಂದನ ಪಾತ್ರದಲ್ಲಿ ವಿಶ್ವನಾಥ್‌ ಶೆಟ್ಟಿ ಎರ್ಮಾಳ್‌, ಪೊಲೀಸ್‌ ಪೇದೆಗಳಾಗಿ ಗುರುರಾಜ್‌ ಸುವರ್ಣ ಕಾಪು, ಐಶ್ವರ್ಯ ರೈ ಇವರು ಸಹಕರಿಸಿದರು.

ರಾಜೇಶ್‌ ಹೆಗ್ಡೆ ಇವರ ಇಂಪಾದ ಸಂಗೀತವು ನಾಟಕದ ಸೊಬಗನ್ನು ಇಮ್ಮಡಿಗೊಳಿಸಿರುವುದು ಸುಳ್ಳಲ್ಲ. ಮೇಕಪ್‌ನಲ್ಲಿ ಮಂಜುನಾಥ್‌ ಶೆಟ್ಟಿಗಾರ್‌ ಸಹಕರಿಸಿದರು. ಸಭಾಗೃಹದಲ್ಲಿ ಜಾಗದ ಕೊರತೆಯಿದ್ದರೂ ಕೂಡಾ ಪ್ರೇಕ್ಷಕರು ನಿಂತುಕೊಂಡೇ ನಾಟಕವನ್ನು ವೀಕ್ಷಿಸಿ ಪ್ರಶಂಸಿಸಿದರು. 

Advertisement

ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ ಪ್ರತೀ ವರ್ಷ ನಾಟಕವನ್ನು ಸದಸ್ಯರಿಂದಲೇ ಪ್ರದರ್ಶಿಸುತ್ತಿರುವುದು ಇನ್ನೊಂದು ವಿಶೇಷತೆಯಾಗಿದೆ.
ಸಂಸ್ಥೆಯು ಸದಸ್ಯರಿಗೆ ಸಾಂಸ್ಕೃತಿಕವಾಗಿ ವೇದಿಕೆಯನ್ನು ಕಲ್ಪಿಸಿಕೊಡಬೇಕು ಎಂಬ ನಿಟ್ಟಿನಲ್ಲಿ ಸದಸ್ಯ ಧನಂಜಯ ಮೂಳೂರು ಅವರು ಸದಸ್ಯರ ಮೇಲೆ ಭರವಸೆಯನ್ನಿಟ್ಟು  ಪ್ರದರ್ಶಿಸಿದ ನಾಟಕವು ಯಶಸ್ವಿಯಗೊಂಡಿರುವುದು ಕಲಾವಿದರಿಗೆ ಆನೆಬಳ ಬಂದಂತಾಗಿದೆ. 

ಒಟ್ಟಿನಲ್ಲಿ ಈ ಸಂಸ್ಥೆಯಿಂದ ಇನ್ನಷ್ಟು ಸಾಮಾಜಿಕ ಕಥಾಹಂದರಗಳನ್ನು ಹೊಂದಿರುವ ನಾಟಕಗಳು ಪ್ರದರ್ಶನಗೊಳ್ಳಲಿ ಎಂಬುವುದು ನಾಟಕ ಪ್ರೇಮಿಗಳ ಹಾರೈಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next