Advertisement

ಭಾರತೀಯ ಫುಟ್‌ಬಾಲ್‌ ದಂತಕಥೆ ತುಳಸಿದಾಸ್‌ ಬಲರಾಮ್‌ ನಿಧನ

10:19 PM Feb 16, 2023 | Team Udayavani |

ಕೋಲ್ಕತ: ಏಷ್ಯನ್‌ ಗೇಮ್ಸ್‌ ಚಿನ್ನ ವಿಜೇತ ಮತ್ತು ಒಲಿಂಪಿಯನ್‌ ತುಳಸಿದಾಸ್‌ ಬಲರಾಮ್‌ (87) ದೀರ್ಘ‌ಕಾಲದ ಅನಾರೋಗ್ಯದ ಬಳಿಕ ಗುರುವಾರ ನಿಧನ ಹೊಂದಿದರು.

Advertisement

1950 ಮತ್ತು 60ರ ದಶಕದ ಸಮೃದ್ಧ ಭಾರತೀಯ ಫುಟ್‌ಬಾಲ್‌ನ “ಹೋಲಿ ಟ್ರಿನಿಟಿ’ ಭಾಗವಾಗಿದ್ದ ಅವರು ಉತ್ತರಪಾರದ ಹೂಗ್ಲಿ ನದಿಯ ದಡದಲ್ಲಿರುವ ಫ್ಲ್ಯಾಟ್‌ನಲ್ಲಿ ಏಕಾಂಗಿಯಾಗಿ ಜೀವಿಸುತ್ತಿದ್ದರು. ಕಳೆದ ವರ್ಷ ಡಿ. 26ರಂದು ಮೂತ್ರದ ಸೋಂಕು ಮತ್ತು ಕಿಬ್ಬೊಟ್ಟೆಯ ಹಿಗ್ಗುವಿಕೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಸ್ಥಿತಿ ಸುಧಾರಿಸಲಿಲ್ಲ ಮತ್ತು ಗುರುವಾರ ನಿಧನ ಹೊಂದಿದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

1936ರ ಅ. 4ರಂದು ಜನಿಸಿದ್ದ ಅವರು ಒಟ್ಟಾರೆ 131 ಗೋಲುಗಳನ್ನು ದಾಖಲಿಸಿದ ಸಾಧನೆ ಮಾಡಿದ್ದಾರೆ. ಅರ್ಜುನ ಪ್ರಶಸ್ತಿ ವಿಜೇತರಾಗಿದ್ದ ಅವರು 1960ರ ರೋಮ್‌ ಒಲಿಂಪಿಕ್ಸ್‌ನಲ್ಲಿ ಅಮೋಘ ನಿರ್ವಹಣೆ ನೀಡಿ ಗಮನ ಸೆಳೆದಿದ್ದರು. ಬಲರಾಮ್‌ ಅವರು 1950 ಮತ್ತು 60ರ ದಶಕದಲ್ಲಿ ಭಾರತೀಯ ಫುಟ್‌ಬಾಲ್‌ನ ಸುವರ್ಣ ಪೀಳಿಗೆಗೆ ಸೇರಿದವರು. ಅವರು ಚುನಿ ಗೋಸ್ವಾಮಿ ಮತ್ತು ಪಿಕೆ ಬ್ಯಾನರ್ಜಿ ಅವರ ಜತೆಗೂಡಿ ಶ್ರೇಷ್ಠ ಪ್ರದರ್ಶನ ನೀಡಿದ್ದರಿಂದ ಅವರನ್ನು “ಹೋಲಿ ಟ್ರಿನಿಟಿ’ ಎಂದೇ ಕರೆಯಲಾಗುತ್ತಿತ್ತು.

ಜಕಾರ್ತ ಏಷ್ಯನ್‌ ಗೇಮ್ಸ್‌ನ ಚಿನ್ನ ಗೆಲ್ಲುವಲ್ಲಿ ತುಳಸಿದಾಸ್‌ ಪ್ರಮುಖ ಪಾತ್ರ ವಹಿಸಿದ್ದರು. ಫೈನಲ್‌ನಲ್ಲಿ ಭಾರತ ದಕ್ಷಿಣ ಕೊರಿಯ ವಿರುದ್ಧ 2-1 ಗೋಲುಗಳ ಜಯ ದಾಖಲಿಸಿ ಚಿನ್ನ ಗೆದ್ದ ಸಾಧನೆ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next