Advertisement

ಡೆಮಾಕ್ರಟಿಕ್ ಪಕ್ಷ ತೊರೆದ ಅಮೆರಿಕದ ಮೊದಲ ಹಿಂದೂ ಸಂಸದೆ ತುಳಸಿ ಗಬ್ಬಾರ್ಡ್

09:43 AM Oct 12, 2022 | Team Udayavani |

ವಾಷಿಂಗ್ಟನ್ : ಅಮೆರಿಕದ ಪ್ರಪ್ರಥಮ ಹಿಂದೂ-ಅಮೆರಿಕನ್ ಸಂಸದೆ ಹಾಗೂ ಭಾರತದಲ್ಲಿ ಬಿಜೆಪಿ ಆರೆಸ್ಸೆಸ್ ಜತೆ ನಿಕಟ ನಂಟು ಹೊಂದಿರುವ ತುಳಸಿ ಗಬಾರ್ಡ್ ಡೆಮಾಕ್ರೆಟಿಕ್ ಪಕ್ಷ ತೊರೆದಿದ್ದಾರೆ ಇಂಡಿ ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ.

Advertisement

2020 ರಲ್ಲಿ ಅಮೇರಿಕದ ಅಧ್ಯಕ್ಷ ಪದವಿಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಯ್ಕೆ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ಗಬ್ಯಾರ್ಡ್ ಪಕ್ಷವನ್ನು ತೊರೆಯುತ್ತಿರುವುದಾಗಿ ಮಂಗಳವಾರ ಪ್ರಕಟಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷ “ಕೆರಳಿದ, ಬಿಳಿಯರ ವಿರೋಧಿ ಹಾಗೂ ಯುದ್ಧಾಸಕ್ತರ ಪ್ರಾಬಲ್ಯದಲ್ಲಿ ಸಿಲುಕಿದೆ ಎಂದು ಅವರು ಆಪಾದಿಸಿದ್ದಾರೆ.

ಬಿಳಿಯರ ವಿರೋಧಿ ವರ್ಣಭೇದ ನೀತಿಗಾಗಿ ಡೆಮಾಕ್ರಟಿಕ್ ಪಕ್ಷವನ್ನು ದೂಷಿಸುತ್ತಾ, ತಾನು 20 ವರ್ಷಗಳಿಂದ ಭಾಗವಾಗಿದ್ದ ಪಕ್ಷದ ಸದಸ್ಯನಾಗಿರಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ. ತುಳಸಿ ಗಬ್ಬಾರ್ಡ್ ಅವರು ಪೋಸ್ಟ್ ಮಾಡಿದ ವೀಡಿಯೊದಲ್ಲಿ, “ನಾನು ಇಂದಿನ ಡೆಮಾಕ್ರಟಿಕ್ ಪಾರ್ಟಿಯಲ್ಲಿ ಬದುಕಲು ಸಾಧ್ಯವಿಲ್ಲ, ಈಗ ಪ್ರತಿಯೊಂದು ವಿಷಯವನ್ನು ಜನಾಂಗೀಯಗೊಳಿಸುವ ಮೂಲಕ ಮತ್ತು ಬಿಳಿಯರ ವಿರೋಧಿ ಜನಾಂಗೀಯತೆಯನ್ನು ಪ್ರಚೋದಿಸುವ ಮೂಲಕ ನಮ್ಮನ್ನು ವಿಭಜಿಸುವ ಕೆಲವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

“ಧಾರ್ಮಿಕ ಶ್ರದ್ಧೆ ಮತ್ತು ಆಧ್ಯಾತ್ಮದ ಬಗೆಗೆ ಒಲವು ಹೊಂದಿದ ವ್ಯಕ್ತಿಗಳ ಬಗ್ಗೆ ಪಕ್ಷ ದ್ವೇಷಭಾವನೆ ಹೊಂದಿದೆ ಕಾನೂನು ಗೌರವಿಸುವ ಅಮೆರಿಕನ್ನರಿಗೆ ಕಿರುಕುಳ ನೀಡಿ ಅಪರಾಧಿಗಳಿಗೆ ರಕ್ಷಣೆ ನೀಡುತ್ತದೆ” ಎಂದು ಆಪಾದಿಸಿದ್ದಾರೆ ರಾಜಕೀಯ ವಿರೋಧಿಗಳ ಮೇಲೆ ಸವಾರಿ ಮಾಡಲು ರಾಷ್ಟ್ರೀಯ ಭದ್ರತೆಯನ್ನು ಅಸ್ತ್ರವಾಗಿ ಪಕ್ಷದ ಮುಖಂಡರು. ಬಳಸಲಾಗುತ್ತಿದ್ದು, ನಮ್ಮನ್ನು ಅಣ್ವಸ್ತ್ರ ಯುದ್ಧದತ್ತ ಎಳೆದೊಯುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next