Advertisement

2018ರ ವಿಶ್ವ ಹಿಂದೂ ಸಮ್ಮೇಳನದ ಅಧ್ಯಕ್ಷರಾಗಿ ತುಳಸಿ ಗಬಾರ್ಡ್‌

12:17 PM Nov 09, 2017 | udayavani editorial |

ವಾಷಿಂಗ್ಟನ್‌ : ಅಮೆರಿಕ ಸಂಸತ್ತಿನ ಪ್ರಥಮ ಹಿಂದೂ ಸಂಸದೆಯಾಗಿರುವ ತುಳಸಿ ಗಬಾರ್ಡ್‌ ಅವರನ್ನು  ಶಿಕಾಗೋದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಶ್ವ ಹಿಂದೂ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ  ಹೆಸರಿಸಲಾಗಿದೆ. 

Advertisement

ನಾಲ್ಕು ವರ್ಷಕ್ಕೆ  ಒಂದು ಬಾರಿ ನಡೆಯುವ ವಿಶ್ವ ಹಿಂದೂ ಸಮ್ಮೇಳನವು ವಿಶ್ವಾದ್ಯಂತದ ಹಿಂದುಗಳು ಒಂದೆಡೆ ಕಲೆತು ತಮ್ಮ ಆಲೋಚನೆ ಹಾಗೂ ಚಿಂತನೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡ ಸಮಾನ ಒಳಿತಿಗಾಗಿ ಪರಿಶ್ರಮಿಸುವ ವೇದಿಕೆಯನ್ನು ನಿರ್ಮಿಸಿಕೊಡುತ್ತದೆ. 

ವಿಶ್ವ ಹಿಂದೂ ಪ್ರತಿಷ್ಠಾನ ಸಂಘಟಿಸುವ ಈ ಬೃಹತ್‌ ಸಮ್ಮೇಳನವು ಮೊತ್ತ ಮೊದಲಾಗಿ ಈ ಹಿಂದೆ 2014ರಲ್ಲಿ ಹೊಸದಿಲ್ಲಿಯಲ್ಲಿ ನಡೆದಿತ್ತು. 

ಮುಂದಿನ ವರ್ಷ ಸೆಪ್ಟಂಬರ್‌ 7ರಿಂ 9ರ ತನಕ ಎರಡನೇ ವಿಶ್ವ ಹಿಂದೂ ಸಮ್ಮೇಳನ ಶಿಕಾಗೋದ ಇಲಿನಾಯ್ಸ ನಲ್ಲಿ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next