Advertisement

’20ರ ಅಮೆರಿಕ ಚುನಾವಣೆಗೆ ತುಳಸಿ ಗಬ್ಟಾರ್ಡ್‌ ಸ್ಪರ್ಧೆ?

09:57 AM Nov 13, 2018 | Team Udayavani |

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ 2020ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಭಾರತೀಯ ಮೂಲದ ತುಳಸಿ ಗಬ್ಟಾರ್ಡ್‌ (37) ಸ್ಪರ್ಧಿಸಲಿದ್ದಾರೆಯೇ? ಮೂಲಗಳ ಪ್ರಕಾರ ಹೌದು. ಲಾಸ್‌ಏಂಜಲೀಸ್‌ನಲ್ಲಿ ಕಳೆದ ಶುಕ್ರವಾರ ನಡೆದಿದ್ದ ಸಮ್ಮೇಳನವೊಂದರಲ್ಲಿ ಇಂಡಿಯನ್‌- ಅಮೆರಿಕನ್‌ ಡಾ.ಸಂಪತ್‌ ಶಿವಾಂಗಿ ಅವರು “2020ರ ಚುನಾವಣೆಯಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತುಳಸಿ ಗಬ್ಟಾರ್ಡ್‌ ಸ್ಪರ್ಧಿಸಲಿದ್ದಾರೆ’ ಎಂದು ಪರಿಚಯ ಮಾಡಿಕೊಟ್ಟಿದ್ದಾರೆ. ಈ ಅಂಶವನ್ನು ತುಳಸಿ ಆಪ್ತ ವಲಯ ನಿರಾಕರಿಸಿಯೂ ಇಲ್ಲ. ಪುರಸ್ಕರಿಸಿಯೂ ಇಲ್ಲ. ಈ ಬಗ್ಗೆ ಹಾಲಿ ಸಾಲಿನ ಕ್ರಿಸ್‌ಮಸ್‌ ಒಳಗಾಗಿ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next